ಶಾಂತಿಯುತ ಮತದಾನಕ್ಕೆ‌ ಬಿಗಿಬಂದೋಬಸ್ತ್:ಭದ್ರತಾ ಪಡೆ ಪಥಸಂಚಲನ.

ಶುಕ್ರದೆಸೆ ನ್ಯೂಸ್ : ಜಗಳೂರು ಸುದ್ದಿ ಪಟ್ಟಣದ ಪ್ರಮುಖ ವಾರ್ಡ್ ಗಳಲ್ಲಿ ಶಾಂತಿಯುತ ಚುನಾವಣೆ ಕುರಿತು ಪೊಲೀಸ್ ಹಾಗೂ ಭದ್ರತಾ ಪಡೆಯ ಪರೇಡ್ ನಡೆಸಲಾಯಿತು.

ಮಾದರಿ ನೀತಿ ಸಂಹಿತೆ ಯನ್ವಯ ಮತದಾರರು ಹಣ ಆಮಿಷೆಗಳಿಗೆ ಬಲಿಯಾಗದೆ.ಅಮೂಲ್ಯ ಮತವನ್ನು ಕಡ್ಡಾಯವಾಗಿ ಚಲಾಯಿಸಬೇಕು.ಶಾಂತಿ ಭಂಗವಾಗದಂತೆ ಅಭ್ಯರ್ಥಿಗಳು ಕಾಯ್ದುಕೊಳ್ಳಬೇಕು ಎಂದು ನೆಹರೂ ರಸ್ತೆ,ವಿದ್ಯಾನಗರ,ಆಶ್ರಯ ಕ್ಯಾಂಪ್,ಮುಸ್ಲಿಂ ಕಾಲೋನಿ ಸೇರಿದಂತೆ ವಿವಿಧ ಬಡಾವಣೆ ಹಾಗೂ ಪ್ರಮುಖ‌ಬೀದಿಗಳಲ್ಲಿ ಸಂಚರಿಸಿ ಮತದಾನ ಜಾಗೃತಿ ಮೂಡಿಸಿದರು.

ಏನಿದು ಪರೇಡ್:ಈಗಾಗಲೆ ಮತಗಟ್ಟೆಗಳಲ್ಲಿ ಜಾಗೃತಿ ಮೂಡಿಸಲಾಗಿದ್ದು.ವಿಧಾನ ಸಭಾ ಚುನಾವಣೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯಬಾರದು.ಮತಯಾಚನೆ ವೇಳೆ‌ ಹಣ ಮದ್ಯ ಇತರೆ ಆಭರಣ ವಸ್ತ್ರಗಳ ಆಮಿಷೆಯೊಡ್ಡಿ ಮತದಾರರ ಗಮನ ಸೆಳೆಯುವುದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಹಾಗೂ ಸಿಆರ್ ಪಿಎಫ್ ಭದ್ರತಾ ಪಡೆ ಜಾಗೃತಿ ಪರೇಡ್ ನಡೆಸಲಾಯಿತು.

ಸಂದರ್ಭದಲ್ಲಿ ಪೊಲೀಸ್ ಉಪ ವರಿಷ್ಠಾಧಿಕಾರಿ ರಾಮಗೊಂಡ ಬಸರ್ಗಿ,,ವೃತ್ತ ನಿರೀಕ್ಷಕ ಶ್ರೀನಿವಾಸ್ ,ನೇತೃತ್ವದಲ್ಲಿ ಪೊಲೀಸ್ ಹಾಗೂ ಭದ್ರತಾ ಪಡೆ ಸಿಬ್ಬಂದಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!