ಕಾನೂನು ನಿಯಮ ಉಲ್ಲಂಘಿಸಿ ವಿಂಡ್ ಫ್ಯಾನ್ ಅಳವಡಿಕೆ‌ಖಂಡಿಸಿ ಪ್ರತಿಭಟನೆ.

ಜಗಳೂರು ಸುದ್ದಿ : ತಾಲೂಕಿನ ಆಕನೂರು ಗ್ರಾಮದ ಜಮೀನುಗಳಲ್ಲಿ ಕಾನೂನು ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಖಾಸಗಿ ಕಂಪನಿಯೊಂದು ವಿಂಡ್ ಫ್ಯಾನ್ ಅಳವಡಿಕೆ ಖಂಡಿಸಿ ಆಕನೂರು ಗ್ರಾಮದ ರೈತರು ಪ್ರತಿಭಟನೆ ನಡೆಸಿದರು.

ಗುರುವಾರ ಪಟ್ಟಣದ ತಾಲೂಕು ಕಚೇರಿ ಮುಂಬಾಗ ಜಮಾಯಿಸಿ ಪ್ರತಿಭಟನೆ ನಡೆಸಿ ನಂತರ ಗ್ರೇಡ್ -೨ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ವಕೀಲ ಸಣ್ಣ ಓಬಯ್ಯ ಮಾತನಾಡಿ,’ಆಕನೂರು ಗ್ರಾಮದ ರೈತರಾದ ಚಂದ್ರಪ್ಪ, ನಿಂಗಮ್ಮ, ಮಾರಕ್ಕ, ಪಿ.ಟಿ. ಅಜ್ಜಪ್ಪ, ಡಿ.ಟಿ. ತಿಪ್ಪೇಸ್ವಾಮಿ , ರುದ್ರಪ್ಪ , ಕೌಶಲ್ಯಮ್ಮ, ತಿಪ್ಪೇಸ್ವಾಮಿ, ಜಿ.ಬಿ.ತಿಪ್ಪೇಸ್ವಾಮಿ ಯವರ ಜಮಿನಗಳ ಪಕ್ಕದಲ್ಲಿ ಖಾಸಗಿ ಕ್ಲೀನ್ ಮ್ಯಾಕ್ಸ್ ಕಂಪನಿ ಯಾವುದೇ ನೋಟಿಸ್ ನೀಡದೆ ಏಕಾಏಕಿ ರಾತ್ರೋರಾತ್ರಿ ವಿಂಡ್ ಫ್ಯಾನ್ ಅಳವಡಿಸುತ್ತಿದ್ದಾರೆ. ಈ ಫ್ಯಾನ್ ಗಳ ಅಳವಡಿಕೆಯಿಂದ ಅಂರ್ತಜಲ ಕುಸಿಯುತ್ತಿದೆ , ಭಾಗದಲ್ಲಿ ಬೊರ್ ವೆಲ್ ಗಳನ್ನು ಕೊರೆಸಿ ಕೊಂಡ ರೈತರು ಅಡಿಕೆ, ದಾಳಿಂಬೆ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳನ್ನು ಬೆಳೆದಿದ್ದು ಅಂತರ್ಜಲ ಕುಸಿತದಿಂದ ಈ ಬೆಳೆಗಳೆಲ್ಲಾ ನೀರಿಲ್ಲದೇ ಬತ್ತಿಹೋಗುತ್ತಿದ್ದು ರೈತರಿಗೆ ಅಪಾರ ನಷ್ಟ ಉಂಟಾಗುತ್ತದೆ ಎಂದು ಆರೋಪಿಸಿದರು.

‘ಕಂಪನಿಯವರು ಸರಕಾರ ನೀಡಿರುವ ಷರತ್ತುಗಳನ್ನ ಕಾನೂನಿನ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಅದ್ದರಿಂದ ತಹಶೀಲ್ದಾರ್ ಖುದ್ದಾಗಿ ಭೇಟಿ ನೀಡಿ ಪರೀಶಿಲನೆ ನಡೆಸಿ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *

You missed

error: Content is protected !!