ಆದಿಜಾಂಬವ ಮಾದಿಗ ಸಮುದಾಯದಿಂದ ನಿಗಮ ಮಂಡಳಿ ಜಿ.ಎಸ್ ಮಂಜುನಾಥ. ಮುಂಡರಗಿ ನಾಗರಾಜ್ ರವರಿಗೆ ಸೆಪ್ಟೆಂಬರ್ ದಿ.14 ರಂದು ನಡೆಯಬೇಕಿದ್ದ ಅಭಿನಂದನೆ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಮಾದಿಗ ಸಮುದಾಯದ ಅದ್ಯಕ್ಷ ಜಿ.ಎಚ್ ಶುಂಭುಲಿಂಗಪ್ಪ ತಿಳಿಸಿದ್ದಾರೆ.
ಜಗಳೂರು ಸುದ್ದಿ :-
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು ನಮ್ಮ ಸಮುದಾಯದ ರಾಜ್ಯ ನಾಯಕರುಗಳಾದ ಆದಿಜಾಂಭವ ಅಭಿವೃದ್ಧಿ ನಿಗಮದ ನೂತನ ಅದ್ಯಕ್ಷರಾಗಿ ಆಯ್ಕೆಯಾಗಿರುವ ಜಿ ಎಸ್ ಮಂಜುನಾಥ.ಹಾಗೂ ಬಾಬುಜಗಜೀವನ್ ರಾಮ್ ಚರ್ಮ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಮುಂಡರಗಿ ನಾಗರಾಜ್ ರವರಿಗೆ ಸನ್ಮಾನ ಕಾರ್ಯಕ್ರಮ ಮಾಡುವ ದಿನಾಂಕ ಸೆ. ದಿ 14 ರಂದು ನಿಗಧಿಯಾಗಿತ್ತು ಆದರೆ ಇದೀಗ ಕಾರಣಂತರದಿಂದ ಕಾಲಾವಕಾಶ ಕಡಿಮೆಯಿರುವುದರಿಂದ ಮುಂದಿನ ದಿನಾಂಕ ಗೊತ್ತುಪಡಿಸಲಾಗುವುದು ಆದ್ದರಿಂದ 14 ರಂದು ನಡೆಯಬೇಕಿದ್ದ ಕಾರ್ಯಕ್ರಮವನ್ನ ಮುಂದೂಡಲಾಗಿದೆ.ಮುಂದಿನ ದಿನಾಂಕವನ್ನ ತಿಳಿಸಲಾಗುವುದು ಎಂದು ತಿಳಿಸಿದ್ದಾರೆ ಈ ಸಂದರ್ಭದಲ್ಲಿ ಮುಖಂಡರಾದ ಹಟ್ಟಿ ತಿಪ್ಪೇಸ್ವಾಮಿ. ಹನುಂತಪುರ ತಿಪ್ಪೇಸ್ವಾಮಿ. ಪಪಂ ಮಾಜಿ ಅಧ್ಯಕ್ಷ ಕ್ಯಾಂಪ್ ಮಂಜುನಾಥ..ವಕೀಲ ಹನುಮಂತಪ್ಪ.ಪೂಜಾರ್ ಸಿದ್ದಪ್ಪ.ಚಿಕ್ಕಮಲ್ಲನಹೊಳೆ ಮಾರುತಿ..ಹನುಮಂತಪುರ ಸತೀಶ್.ವಿಜಯಕೆಂಚೂಳ್.ಮಲೆಮಾಚಿಕೆರೆ ಸತೀಶ್.ಸೇರಿದಂತೆ ವಿವಿದ ಮುಖಂಡರು ಹಾಜುರಿದ್ದರು.