ಸಂಕ್ಷಿಪ್ತ ವರದಿ:
ಹೈನುಗಾರಿಕೆ ಸಾಧಕಿ ಹೊನ್ನಾಳಿ ರೈತ ಮಹಿಳೆ- ಉಮಾ ಸೋಮಶೇಖರಪ್ಪ
ದಾವಣಗೆರೆ ಸೆ.10
ಹೈನುಗಾರಿಕೆಯಲ್ಲಿ ಮಹಿಳೆಯಾಗಿ ನಾಲ್ಕು ಹಸುಗಳಿಂದ ಆರಂಬಿಸಿದ ಹೈನೋದ್ಯಮ ಇವತ್ತು 36 ಹಸುಗಳನ್ನ ಸಾಕಿ ದಿನಕ್ಕೆ 155-160 ಲೀಟರ್ ಹಾಲು ಮಾರಟ್ ಮಾಡಿ ಪ್ರತಿ ದಿನ ಒಟ್ಟು ಆದಾಯ ರೂ.5500 ರಷ್ಟು ಪಡೆಯುತ್ತಾರೆ. ಒಂದು ವರ್ಷಕ್ಕೆ 19-20 ಲಕ್ಷಗಳು , ಮೇವಿನ ಖರ್ಚು, ಕೂಲಿಕಾರ್ಮಿಕರು, ಮೀನರಲ್ ಮಿಕ್ಸ್ಚರ್, ನಂದಿನಿ ಫೀಡ್ ಮತ್ತು ಇನ್ನಿತರ ಸೇರಿ ರೂ 7-8 ಲಕ್ಷಗಳು ಖರ್ಚು ವೆಚ್ಚವೆಲ್ಲಾ ಕಳೆದ ಹಾಲಿನ ಮಾರಾಟದಿಂದ ಸುಮಾರು 12-13 ಲಕ್ಷ, 40-50 ಲೋಡ್ ತಿಪ್ಪೆ ಗೊಬ್ಬರ ಮಾರಿ 4-5 ಲಕ್ಷ, ಎರೆಹುಳು ಗೊಬ್ಬರದಿಂದ 60000, ಎರೆಹುಳು ಮಾರಾಟದಿಂದ 25000, ಕೊಟ್ಟಿಗೆ ಇಂದ ಬಂದ ಸಗಣಿ-ಗಂಜಲ ಮಿಶ್ರಣ ಕಳಸಿ ಮಾರುವುದರಿಂದ 75000/- ಹೀಗೆ ಹೈನುಗಾರಿಕೆ ಹಲವು ಮೂಲಗಳಿಂದ 18-19 ಲಕ್ಷಗಳ ಆದಾಯ ಪಡೆದು ಶ್ರೇಷ್ಠ ಕೃಷಿ ಮಹಿಳೆ ಎನೆಸಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಇನ್ನು 50 ಕ್ಕೂ ಹೆಚ್ಚು ದೇಶಿ ತಳಿಗಳಾದ ಗಿರ್, ಪುಂಗನೂರ, ಮಲ್ನಾಡ್ ಗಿಡ್ಡ ಸಾಕುವ ಹಂಬಲ್ ವ್ಯಕ್ತಪಡಿಸಿದ್ದಾರೆ.
ಸಮಗ್ರ ಕೃಷಿ ಜೊತೆಗೆ ಇತರೆ ಯಾವುದಾದರೂ ಕೃಷಿಉಪಕಸಬುಗಳನ್ನ ಮಾಡಿದಾಗ ರೈತರು ಆರ್ಥಿಕವಾಗಿ ಸ್ವಾವಲಂಬಿಯಾಗಿ ನೆಮ್ಮದಿಯ ಜೀವನ ಸಾಗಿಸಬಹುದು.
ಡಾ ಗಂಗಪ್ಪಗೌಡ ಶಿ ಬಿರಾದಾರ, ವಿಸ್ತರಣಾ ವಿಜ್ಞಾನಿ, ವಿ ಶಿ ಘ, ಕತ್ತಲಗೆರೆ,
ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ