ಜಗಳೂರು : ಪಟ್ಟಣದ ದೇವೆಗೌಡ ಬಡಾವಣೆಯಲ್ಲಿ ಟಿ ಸಿ ಹತ್ತಿರ ವಿದ್ಯುತ್ ಕುರಿಗಳು ಮೃತಪಟ್ಟಿರುವ ಘಟನೆ ಇಂದು ಸಂಜೆ ನಡೆದಿದೆ.
ಬುಧವಾರ ಸಂಜೆ ಪಟ್ಟಣದ ದೇವೇಗೌಡ ಬಡಾವಣೆಯಲ್ಲಿರುವ ಟಿ.ಸಿ ಕಂಬದ ಸುತ್ತ ಸುತ್ತುಗೋಡೆ ಇಲ್ಲದೇ ಇರುವುದು ವಿದ್ಯುತ್ ಪ್ರವೇಶಿಸಿ ಕುರಿಗಳ ಹಿಂಡು ಮೇಯಲು ಬಂದಾಗ ಕುರಿಗಳಿಗೆ ವಿದ್ಯುತ್ ತಗುಲಿ ಅದರ ಸ್ಪರ್ಶದಿಂದ ಕುರಿಗಳು ಸಾವನ್ನಪ್ಪಿವೆ. ವಿದ್ಯುತ್ ಕಂಬದ ಸುತ್ತ ಯಾವುದೇ ರಕ್ಷಕವಚವಿಲ್ಲದೆ ಕುರಿಗಳು ಸಾಯುತ್ತವೆ ಎಂದು ಕುರಿಗಾಹಿ ಕುರಿಯನ್ನು ಸಾವಿನ ದವಡೆಯಿಂದ ತಪ್ಪಿಸಲು ಹೋದಾಗ ಫಲಪ್ರದವಾಗಿಲ್ಲ. ವಿದ್ಯುತ್ ಶಾಕ್ ನಿಂದ ಎರಡು ಕುರಿಗಳು ಸಾವನ್ನಪ್ಪಿವೆ..
ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯ ದಿಂದ ಬಡವರ ಕುರಿಗಳು ದಿನೆ ದೀನೆ ಸಾಯುವಂತಾಗಿವೆ.
ಟಿಸಿ ಸುತ್ತ ಮುತ್ತ ಸುತ್ತು ಗೋಡೆ ನಿರ್ಮಿಸದೇ ಇರುವುದರಿಂದ ಆನಾಹುತ ಸಂಭವಿಸಿದೆ ಇಲ್ಲಿ ಯಾರದಾರು ಮಕ್ಕಳು ಆಟವಾಡಲು ಹೋದರೆ ದೊಡ್ಡ ಅನಾಹುತ ನಡೆಯಲಿದೆ ಇನ್ನಾದರು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಅಲೆ ಮಾರಿ / ಅರೇ ಅಲೇಮಾರಿ ಸಮುದಾಯದ ತಾಲೂಕು ಅಧ್ಯಕ್ಷ ಕುರಿ ಜಯ್ಯಣ್ಣ ಹೇಳಿದರು.
: ಆ ಭಾಗದ ಮನೆಯಲ್ಲಿ ಗ್ರೌಂಡ್ ಆಗಿದೆ ಇದರಿಂದ ಸಮಸ್ಯೆಯಾಗಿದೆ ಅದರಿಂದಾಗಿ ಟಿಸಿಯಲ್ಲಿ ವಿದ್ಯುತ್ ಪ್ರವೇಶಿಸಿರಬಹುದೆ ಆ ಮನೆಯಲ್ಲಿ ನಮ್ಮ ಸಿಬ್ಬಂದಿಗಳು ಪತ್ತೆ ಮಾಡುತ್ತಿದ್ದಾರೆ .
ಸುಧಾಮಣಿ ಬೆಸ್ಕಾಂ ಎಇಇ