ಶುಕ್ರದೆಸೆ ನ್ಯೂಸ್: ಸರಕಾರಿ ಶಾಲೆಗಳ ಉಳಿವಿಗಾಗಿ ಕನ್ನಡ ಮನಸ್ಸುಗಳ ಕರ್ನಾಟಕ‌ ಅಭಿಯಾನ.

ಜಗಳೂರು‌‌ ಸುದ್ದಿ:ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿ ಮಧ್ಯೆಯೂ ಸರಕಾರಿ ಶಾಲೆಗಳ ಉಳಿವಿಗಾಗಿ ಶ್ರಮಿಸುತ್ತಿರುವ ಕನ್ನಡ ಮನಸ್ಸುಗಳು ಕರ್ನಾಟಕ ಸರ್ಕಾರೇತರ ಸಂಸ್ಥೆಯ ಅಭಿಯಾನ ಸಾಮಾಜಿಕ ಹೊಣೆಗಾರಿಕೆಗೆ ಸಾಕ್ಷಿಯಾಗಿದೆ.

ಕನ್ನಡ ಮನಸ್ಸುಗಳು ಕರ್ನಾಟಕ ಸಂಸ್ಥೆಯ ಅಧ್ಯಕ್ಷ ಪವನ್ ಧರೆಗುಂಡಿ ಮಾತನಾಡಿ,ಫೇಸ್ ಬುಕ್,ಟ್ವಿಟ್ಟರ್,ಸಾಮಾಜಿಕ ಜಾಲತಾಣಗಳ ಮೂಲಕ ದೇಣಿಗೆ ಸಂಗ್ರಹಿಸಿದ ಹಣವನ್ನು ಸರಕಾರಿ ಶಾಲೆಗಳಲ್ಲಿ ಸುಣ್ಣ ಬಣ್ಣ,ವಿದ್ಯುತ್ ಸಂಪರ್ಕ,ಫ್ಯಾನ್ ಇತರೆ ಮೂಲಸೌಕರ್ಯಗಳನ್ನು ಒದಗಿಸಲು ಹಾಗೂ ಕೋವಿಡ್ ಸಂದರ್ಭದಲ್ಲಿ ಸ್ಥಗಿತವಾಗಿದ್ದ ನಮ್ಮ ಸಮಾಜ ಸೇವೆ ಇದೀಗ ಪುನರಾಂಭವಾಗಿದೆ.ಒಟ್ಟು 500 ಜನ ಸದಸ್ಯರ ತಂಡ ರಾಜ್ಯದಲ್ಲಿ ಸೇವೆ ಗೈಯುತ್ತಿದ್ದು.ಜಿಲ್ಲೆಯಲ್ಲಿ ಎರಡು ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು.53 ಜನರನ್ನೊಳಗೊಂಡ ತಂಡ ಜಗಳೂರು ತಾಲೂಕಿನ ಉಜ್ಜಪ್ಪ ಒಡೆಯರಹಳ್ಳಿ ಗ್ರಾಮದಲ್ಲಿ 8 ಕೊಠಡಿಗಳು,ಬಸವನಕೋಟೆಯಲ್ಲಿ 12 ಕೊಠಡಿಗಳ. ಬಣ್ಣಬಳಿಯಲು ಎರಡು ಶಾಲೆಗಳನ್ನು ಆಯ್ದುಕೊಂಡು ಬಣ್ಣ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು ಎಂದು ತಿಳಿಸಿದರು.

ಸಂದರ್ಭದಲ್ಲಿ ಎಸ್ ಡಿ ಎಂಸಿ ಅಧ್ಯಕ್ಷ ಸುರೇಶ್,ಸದಸ್ಯರಾದ ನಾಗರಾಜ್ ಗೌಡ,ಚನ್ನಬಸಪ್ಪ,ಸಿದ್ದನಗೌಡ,ಕೆ.ಎಸ್.ನಾಗರಾಜ್ ,ಮುಖ್ಯಶಿಕ್ಷಕ ಗೋಪಿನಾಯ್ಕ,ಶಿಕ್ಷಕರಾದ ಸತೀಶ್,ರಾಮಚಂದ್ರಪ್ಪ,ಶಿವಕುಮಾರಿ,ಚಂದ್ರಮ್ಮ,ರೇಣುಕಾ,ವನಜಾಕ್ಷಿ,ರಾಧ, ಕನ್ನಡ ಮನಸ್ಸುಗಳು ಕರ್ನಾಟಕ ಯಲ್ಲಪ್ಪ,ನವೀನ್ ಸಿಂಗ,ಅರ್ಪಿತ,ಗಣೇಶ್, ಶಿವಾನಂದ,ನಂದಿತಾ ಸಿದ್ದಯ್ಯ,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!