ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುವ ಭರವಸೆ ನನಗಿದೆ ಮಾಜಿ ಶಾಸಕ ಹೆಚ್ ಪಿ ರಾಜೇಶ್ ಶುಕ್ರದೆಸೆ ನ್ಯೂಸ್: ಜಗಳೂರು ಪಟ್ಟಣದಲ್ಲಿ ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರು ಅವರ ಬೆಂಬಲಿತ ಕಾಂಗ್ರೆಸ್ ಪಕ್ಷದ ಅಭಿಮಾನಿಗಳ ನೇತೃತ್ವದಲ್ಲಿ ಸೋಮವಾರ ದೊಡ್ಡ ಮಾರಿಕಾಂಬ ದೇವಿ ಹಾಗೂ ಈಶ್ವರ ದೇವಾಸ್ಥಾನದಲ್ಲಿ ಪೂಜೆ ಕೈಂಕಾರ್ಯ ನೆರವೇರಿಸಿ ದೇವರ ಅಶಿರ್ವಾದ ಪಡೆದರು . ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು ಕಾಂಗ್ರೆಸ್ ಪಕ್ಷ ನನ್ನನ್ನು ಪರಿಗಣಿಸಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲು ನಮ್ಮ ಕಾಂಗ್ರೆಸ್ ವರಿಷ್ಠರು ನಮ್ಮನ್ನು ಪರಿಗಣಿಸಿ ಬಿ ಪಾರಂ ನೀಡುವ ನಂಬಿಕೆಯಿದೆ . ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ ಅಭರ್ಥಿ ಯಾರೆಂದು ಕಾಂಗ್ರೆಸ್ ಅಧಿಕೃತವಾಗಿ ಯಾರಿಗೆ ಕೈ ಟಿಕೆಟ್ ಎಂದು ಪಕ್ಷ ನಿರ್ಧಾರ ಮಾಡಿರುವುದಿಲ್ಲ .ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆಗಾಗಿ ನಾವು ಜಾತಕ ಪಕ್ಷಿಯಂತೆ ಕಾಯುತ್ತಿದ್ದೆವೆ. ನಾವು ನಮ್ಮ ಬೆಂಬಲಿಗರೊಂದಿಗೆ ಕ್ಷೇತ್ರದ ದೇವಸ್ಥಾನಗಳಿಗೆ ತೆರಳಿ ಪೂಜೆ ಕೈಂಕಾರ್ಯಗಳೊಂದಿಗೆ ದೇವರ ದರ್ಶನ ಪಡೆಯಲು ಎಲ್ಲಾ ದೇವಾ ಮಂದಿರಗಳಿಗೆ ಭೇಟಿ ನೀಡಿ ಶಕ್ತಿ ದೇವಾನು ದೇವರುಗಳಿಗೆ ಪೂಜೆ ಕಾರ್ಯದಲ್ಲಿ ತೊಡಗಿದ್ದೆವೆ . ಒಂದು ವೇಳೆ ಟಿಕೆಟ್ ಕೈ ತಪ್ಪಿದರೆ ಅಭಿಮಾನಿಗಳ ಅಭಿಪ್ರಾಯದೊಂದಿಗೆ ಮುಂದಿನ ನಡೆ ನಿರ್ಧರಿಸಲಾಗುವುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಕ್ಷೇತ್ರದಲ್ಲಿ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳು ನನಗೆ ಕೈಹಿಡಿಯುವುವು ನಮ್ಮ ಕಾರ್ಯಕರ್ತ ಅಭಿಮಾನಿಗಳ ಬಳಗದ ಸೈನ್ಯ ಆಪಾರವಿದ್ದು ಟಿಕೆಟ್ ಕೈ ತಪ್ಪಿದರೆ ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ಮುಂದಿನ ನಡೆಯನ್ನು ನಿರ್ಣಯಿಸುವ ಚಿಂತನೆಯಿದೆ ಎಂದು ಸ್ವಷ್ಟನೆ ನೀಡಿದರು. ಮಾಜಿ ಶಾಸಕರಿಗೆ ಪ್ರಶ್ನೆ : ಟಿಕೆಟ್ ಕೈ ತಪ್ಪಿದರೆ ಬಂಡಾಯ ಅಭ್ಯರ್ಥಿಯಾಗಿ ಸ್ವರ್ಧಿಸುತ್ತಾರೆ ಎಂಬ ವದಂತಿಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರಲಿವೆ ? ನಿಮ್ಮ ಅಭಿಪ್ರಾಯವೇನು ಮಾಜಿ ಶಾಸಕ ಹೆಚ್ ಪಿ ಆರ್. ಅಭಿಪ್ರಾಯ ಕಾಂಗ್ರೆಸ್ ಪಕ್ಷದ ವರಿಷ್ಠರು ನನಗೆ ಟಿಕೆಟ್ ನೀಡುವರು ಎಂಬ ಬಲವಾದ ನಂಬಿಕೆ ನನಗಿದೆ. ಒಂದು ವೇಳೆ ಕೈ ತಪ್ಪಿದರೆ ನಾನು ನನ್ನ ಅಭಿಮಾನಿಗಳ ಅಭಿಪ್ರಾಯದೊಂದಿಗೆ ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಚಿಂತನೆ ನಡೆಸುವೆ ಇದೀಗ ಪೂಜೆ ಕಾರ್ಯದಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆಯಲು ಕಾರ್ಯಕರ್ತರೊಂದಿಗೆ ಭಾಗಿಯಾಗಿದ್ದೆನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಆಹಮದ್. ಮಾಜಿ ಬ್ಲಾಕ್ ಕಾಂಗೈ ಅಧ್ಯಕ್ಷ ತಿಪ್ಪೇಸ್ವಾಮಿ ಗೌಡ.ಕಾಂಗ್ರೆಸ್ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ .ವೀರಶೈವ ಸಮಾಜದ ಮುಖಂಡ ಶಿವನಗೌಡ್ರು. ನಾಯಕ ಸಮಾಜದ ಮುಖಂಡ ಲೋಕಣ್ಣ.ಮಾಜಿ ಪಪಂ ಸದಸ್ಯ ಚಂದ್ರಪ್ಪ. ಎಸ್ಸಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೆಂಚಮ್ಮ. ಮುಖಂಡ ಎಸ್ ಬಂಗಾರಪ್ಪ.ಗ್ರಾಪಂ ಸದಸ್ಯರಾದ ಚಿಕ್ಕಮ್ಮನಹಟ್ಟಿ ಮಂಜು.ಸೇರಿದಂತೆ ಮುಂತಾದವರು ಹಾಜರಿದ್ದರು.