ಜಗಳೂರಿನಲ್ಲಿ ಕಾಂ.ಸೀತಾರಾಮ್ ಯೆಚೂರಿ ನಿಧನಕ್ಕೆ ನುಡಿನಮನ

ಜಗಳೂರು ಸುದ್ದಿ:ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪ್ರಗತಿಪರ ಸಂಘಟನೆಗಳ ವತಿಯಿಂದ ಮಾಜಿ ಸಂಸದ,ಮಾಜಿ ರಾಜ್ಯ ಸಭಾ ಸದಸ್ಯ ಸೀತಾರಮ್ ಯೆಚೂರಿ ಅವರ ನಿಧನದ ಹಿನ್ನೆಲೆ ನುಡಿನಮನ ಸಲ್ಲಿಸಲಾಯಿತು.

‘ವಿದ್ಯಾರ್ಥಿ ದೆಸೆಯಿಂದ ಬಂಡವಾಳಶಾಹಿತ್ವದ ವಿರುದ್ದ,ಸಂವಿಧಾನ ಬದ್ದ ಹಕ್ಕುಗಳಿಗೆ ಹೊರಾಟನಡೆಸುತ್ತಾ ಹಾಗೂ ಎಡಪಂಥೀಯ ಹೊರಾಟಗಾರರು, ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು.ದೇಶದಲ್ಲಿ ಫ್ಯಾಸಿಸ್ಟ್ ವಿರೋಧಿಯಾಗಿ ದಿಟ್ಟ ಹೊರಾಟದ ನಿಲುವಿನೊಂದಿಗೆ,ಪ್ರಜಾಪ್ರಭುತ್ವ,ಧರ್ಮನಿರಪೇಕ್ಷೆ,ಜಾತ್ಯಾತೀತ,ಸಂವಿಧಾನದ ಆಶಯಗಳನ್ನು ಸಮಾಜದಲ್ಲಿ ಸಾಕಾರಗೊಳಿಸಲು,ಹಾಗೂ ಬಂಡವಾಳ ಶಾಹಿತ್ವದ ವಿರುದ್ದ ಹೊರಾಟ ನಡೆಸಿದ ಸರಳ ಸಜ್ಜನಿಕೆಯಿಂದ ಜೀವನಸಾಗಿಸಿದರು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದರು’ಎಂದು ಹೇಳಿದರು.

ಪ್ರಾಂಶುಪಾಲ ನಾಗಲಿಂಗಪ್ಪ ಮಾತನಾಡಿ,ಪರಿಶುದ್ದ ರಾಜಕಾರಣಿಯಾಗಿ ಆಡಳಿತ ವ್ಯವಸ್ಥೆಯ ಭಾಗವಾಗಿದ್ದುಕೊಂಡು,ಎಡಪಂಥೀಯ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದರು.ಪ್ರಾಮಾಣಿಕ ಸೇವೆ ಅಪಾರವಾಗಿದೆ ಎಡಪಂಥೀಯ ಹೊರಾಟಕ್ಕೆ ಹಿನ್ನೆಡೆಯಾಗಿದೆ ಎಂದು ಹೇಳಿದರು.

ವಕೀಲ ಸಂಘದ ತಾಲೂಕು ಘಟಕದ ಟಿ. ಬಸವರಾಜ್ ಮರೇನಹಳ್ಳಿ,’ದೇಶದ ಕಾರ್ಮಿಕಬಡವರ್ಗದವರ,ಶೋಷಿತ ವರ್ಗಗಳ ಧ್ವನಿಯಾಗಿದ್ದರು.ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸುವಲ್ಲಿ ಅವರ ಶ್ರಮ ಅವಿರತವಾಗಿದೆ.ಅವರ ಅಗಲಿಕೆ ಕಮ್ಯುನಿಸ್ಟ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ’ ಎಂದರು.

ಸಂದರ್ಭದಲ್ಲಿ ಉಪನ್ಯಾಸಕ ನಾಗರಾಜ್,ಪ್ರಗತಿಪರ ಹೊರಾಟಗಾರರಾದ ಸತೀಶ್ ಮಲೆಮಾಚಿಕೆರೆ, ಮಾದಿಹಳ್ಳಿ ಮಂಜಪ್ಪ,ಅನಂತರಾಜ್,ಮಂಜಣ್ಣ.ಓ,ಧನ್ಯಕುಮಾರ್,ಗುತ್ತಿದುರ್ಗ ಶಾಂತಪ್ಪ,ಬಸವರಾಜ್ ಸಿದ್ದಮ್ಮನಹಳ್ಳಿ,ಮರೇನಹಳ್ಳಿ ಕುಮಾರ್,ಮಧುದೇವಿಕೆರೆ,ಜೀವನ್,ಪವನ್ ಗ್ಯಾಸ್ ಮಾಲೀಕ ಓಬಣ್ಣ,ರಾಜಪ್ಪ ವ್ಯಾಸಗೊಂಡನಹಳ್ಳಿ,ವಕೀಲರಾದ ನಾಗೇಶ್,ಅಂಜಿನಪ್ಪ,ಸಣ್ಣ ಓಬಯ್ಯ,ಮಹಾಂತೇಶ್,ಬುಳ್ಳೆನಹಳ್ಳಿ ರಾಜಣ್ಣ,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!