ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಕಾರ್ಯವೈಖರಿಗೆ ಶಾಸಕ ಬಿ.ದೇವೇಂದ್ರಪ್ಪ ಗರಂ.
ಜಗಳೂರು ಸುದ್ದಿ:ತಾಲೂಕಿನ ದೇವಿಕೆರೆ ಗ್ರಾ.ಪಂ ವ್ಯಾಪ್ತಿ ಕೊಡದಗುಡ್ಡದಲ್ಲಿ ಸ್ವಭಾವ ಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಬೇಕಿದ್ದ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಕೈಗೊಳ್ಳದೆ ನಿರ್ಲಕ್ಷ್ಯವಹಿಸಿರುವ ಪಿಡಿಓ,ತಾ.ಪಂ ಇಓ ವಿರುದ್ದ ಶಾಸಕರು ಗರಂ ಆಗಿ ಉದ್ಘಾಟನೆಗೊಳಿಸದೆ ವಾಪಾಸ್ಸು ಮರಳಿದರು.
ಗಾಂಧೀಜಿ ಕಂಡ ಕನಸಿನಂತೆ ಸ್ವಚ್ಛತೆಗೆ ಆದ್ಯತೆನೀಡಲು ಮಹತ್ವಕಾಂಕ್ಷಿಯ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರ ನಿರ್ದೇಶನ ನೀಡಿದೆ.ಆದರೆ ಅದ್ದೂರಿಯಾಗಿ ಉದ್ಘಾಟನೆಗೆ ಪಿಡಿಓ ಸುನಿತಾ ಹಾಗೂ ತಾ.ಪಂ.ಇಓ ಕೆಂಚಪ್ಪ ಅವರು ಪೂರ್ವಯೋಜಿತವಾಗಿ ಸಕಲಸಿದ್ದತೆ ಕೈಗೊಳ್ಳದೆ ಕುರ್ಚಿಗಳು ಖಾಲಿಖಾಲಿ ಕಂಡುಬಂದವು.ಗ್ರಾ.ಪಂ ಸದಸ್ಯರನ್ನು ವಿಶ್ವಾಸಗಳಿಸದೆ ಸಭೆಗೆ ಸಾರ್ವಜನಿಕರು ಆಗಮಿಸಿಲ್ಲ.ಅಲ್ಲದೆ ಕನಿಷ್ಠ ಪಕ್ಷ ಬ್ಯಾನರ್ ಹಾಕಿಸದೆ ಬೇಕಾಬಿಟ್ಟಿಯಾಗಿ ಕಾರ್ಯಕ್ರಮ ಆಯೋಜಿಸಲಾಗಿದ್ದು.ಶಾಸಕ ಬಿ.ದೇವೇಂದ್ರಪ್ಪ ಅವರು ಆಹ್ವಾನದಮೇರೆಗೆ ಆಗಮಿಸಿದಾಗ ಕೇವಲ ಕೆಲವೇ ಅಧಿಕಾರಿಗಳು ಉಪಸ್ಥಿತರುವುದನ್ನು ಕಂಡು ಶಾಸಕರು ತರಾಟೆಗೆ ತೆಗೆದುಕೊಂಡರು.
‘ಸರ್ಕಾರಿ ಕಾರ್ಯಕ್ರಮದ ಪೂರ್ವಯೋಜಿತ ಸಿದ್ದತೆಯಿಲ್ಲದೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದು.ಕಾರ್ಯಕ್ರಮವನ್ನು ರದ್ದುಪಡಿಸಲು ಸೂಚಿಸಲಾಯಿತು.ಯೋಜನೆಯ ಸಮಾರೋಪ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲು ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ತಾಕೀತು ಮಾಡಲಾಯಿತು’.
——- ಬಿ.ದೇವೇಂದ್ರಪ್ಪ,ಶಾಸಕ ಜಗಳೂರು