ಪರಿಸರ ನೈರ್ಮಲ್ಯ ಪ್ರತಿಯೊಬ್ಬರ ಹೊಣೆಯಾಗಲಿ
ಜಗಳೂರು ಸುದ್ದಿ:’
ನಮ್ಮ ನೆರೆಹೊರೆಯ ಪರಿಸರ ಸ್ವಚ್ಛತೆ ಪ್ರತಿಯೊಬ್ಬರ ಹೊಣೆಯಾಗಬೇಕಿದೆ’ಎಂದು ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಹೇಳಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ‘ಸ್ವಭಾವ ಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ’ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪಟ್ಟಣದಲ್ಲಿ ಪೌರಕಾರ್ಮಿಕರು ಪ್ರತಿನಿತ್ಯ ಪ್ರತಿವಾರ್ಡ್ ಗಳ ಮನೆಬಾಗಿಲಿಗೆ ಕಸದ ವಾಹನದೊಂದಿಗೆ ಕಸ ಸಂಗ್ರಹಣೆಗೆ ಆಗಮಿಸುತ್ತಾರೆ.ಹಸಿಕಸ-ಒಣಕಸ ಬೇರ್ಪಡಿಸಿ ಕಸವಿಲೆವಾರಿ ಮಾಡಲು ಪೋಷಕರಿಗೆ ತಿಳಿಸಬೇಕು.ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಸಾಮಾಜಿಕ ಹೊಣೆಗಾರಿಕೆ ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಸೆ.14 ರಿಂದ ಅಕ್ಟೋಬರ್ 2 ರವರೆಗೆ ರಾಜ್ಯವ್ಯಾಪಿ ಸರ್ಕಾರದ ಪೌರಾಡಳಿತ,ನಗರಾಭಿವೃದ್ದಿ ಇಲಾಖೆಗಳ ನಿರ್ದೇಶನದಂತೆ ಸ್ವಚ್ಛತಾ ಅಭಿಯಾನ ನಡೆಸಲಾಗುವುದು.ಸಾರ್ವಜನಿಕರು,ವಿದ್ಯಾರ್ಥಿಯುವ ಸಮೂಹ ಕೈಜೋಡಿಸಬೇಕು’ ಎಂದು ಮನವಿಮಾಡಿದರು.
ಪ.ಪಂ.ಅಧ್ಯಕ್ಷ ನವೀನ್ ಕುಮಾರ್ ಮಾತನಾಡಿ,’ಗಾಂಧೀಜಿ ಕಂಡ ಕನಸಿನಂತೆ ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಕೇಂದ್ರೀಕರಿಸಲು.ಪ್ರಧಾನಿ ನರೇಂದ್ರಮೋದಿಜಿ ಅವರು ಸ್ವಚ್ಛತಾ ಅಭಿಯಾನಕ್ಕೆ ಮೊದಲ ಪ್ರಾಶಸ್ತ್ಯ ನೀಡಿದ್ದು.ದೇಶದ ಪ್ರತಿಯೊಬ್ಬ ಪ್ರಜೆಯೂ ಬೆಂಬಲಿಸಬೇಕು ಎಂದರು.
ಸಂದರ್ಭದಲ್ಲಿ ಮುಖಂಡ ಓಬಳೇಶ್,ಪ.ಪಂ.ಆರೋಗ್ಯ ನಿರೀಕ್ಷಕ ಪ್ರಶಾಂತ್,ಶಿಕ್ಷಕರಾದ ಶೋಭಾ,ಮಂಜುನಾಥ್,ಶಿವರಾಜ್ ,ನಾಗರಾಜ್,ಸಲೀಂ ,ಸೇರಿದಂತೆ ಇದ್ದರು.