ಹುಚ್ಚವ್ವನಹಳ್ಳಿ ಸ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ
JLR 1 Sep 22
ಜಗಳೂರು:
ದಾವಣಗೆರೆ ಜಿಲ್ಲಾ ಕ್ರೀಡಾಂಗದಲ್ಲಿ ಭಾನುವಾರ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಜಿಲ್ಲೆಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಜಗಳೂರು ತಾಲ್ಲೂಕಿನ
ಹುಚ್ಚವ್ವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರು ಥ್ರೋ ಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾರೆ.
ಈ ಶಾಲೆಯಲ್ಲಿ ದೈಹಿಕ ಶಿಕ್ಷಕರು ಇಲ್ಲದಿದ್ದರೂ ಸಹ ಮಕ್ಕಳು ಸತತ ಕಲಿಕೆ ಮತ್ತು ಹಿರಿಯರ ಮಾರ್ಗದರ್ಶನದ ಮೂಲಕವೇ ಪರಿಶ್ರಮವನ್ನು ಹಾಕಿ ಶ್ರದ್ಧೆಯಿಂದ ತರಬೇತಿ ಪಡೆದು ಸತತ ಇದು 2ನೇ ಬಾರಿಗೆ ವಿಭಾಗೀಯ ಮಟ್ಟಕ್ಕೆ ಆಯ್ಕೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟದ ಬಾಲಕಿಯರ ಥ್ರೋಬಾಲ್ ಕೊನೆಯ ಪಂದ್ಯಾವಳಿಯಲ್ಲಿ ಚನ್ನಗಿರಿ vs ಜಗಳೂರು ಮುಖಾಮುಖಿಯಾಗಿದ್ದು, ರಣರೋಚಕ ಪಂದ್ಯದಲ್ಲಿ ಜಗಳೂರು ತಾಲ್ಲೂಕಿನ ಹುಚ್ಚವ್ವನಹಳ್ಳಿ ಸ.ಹಿ.ಪ್ರಾ.ಶಾಲೆಯ ಬಾಲಕಿಯರಾದ ಪೂರ್ವಿಕ, ಪೂಜಾ, ಹೇಮಲತಾ, ಲಕ್ಷ್ಮೀದೇವಿ, ಪ್ರಿಯಾ, ನಿಖಿತಾ, ಅಂಶಿಕ, ಹರ್ಷಿತಾ, ರಂಜಿತಾ, ವಿನುತಾ, ಪ್ರಿಯಾ, ಇವರುಗಳು ಪ್ರಥಮ ಸ್ಥಾನವನ್ನು ಗಳಿಸಿಕೊಂಡು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಥಮ ಸ್ಥಾನದ ಜಯವನ್ನು ಗಳಿಸಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರನ್ನು ಆ ಶಾಲೆಯ ಮುಖ್ಯ ಶಿಕ್ಷಕ ಗೋವಿಂದಪ್ಪ, ಸಹ ಶಿಕ್ಷಕರಾದ ರಾಜು, ನಾಗಲಕ್ಷ್ಮಮ್ಮ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಕೊಟ್ರೇಶ್, ಹಾಗೂ ಪೋಷಕರಾದ ರವಿ, ಬಾಬು ಪ್ರಸಾದ್, ರಂಗನಾಥ್, ಕಿರಣ್ ಹಾಗೂ ಸಮಸ್ತ ಗ್ರಾಮಸ್ಥರು ಅಭಿನಂದಿಸಿ ಶುಭ ಹಾರೈಸಿದರು.
