“ನಾವು ಕಂಡ ಸೈನಿಕರು ಮತ್ತು
ನಾವು ಕಾಣದ ಸೈನಿಕರು”.
ಹೌದು ಸೈನಿಕರೆಂದರೆ ಜನ ಸಾಮಾನ್ಯರಿಗೆ ಜನ ನಾಯಕರಿಗೆ ದೂರದರ್ಶನದಲ್ಲೊ ಅಲ್ಲ ಪೇಪರ್ ನಲ್ಲೊ ನೋಡಿ ಮಾನವೀಯತೆ ಬರುವುದೇ ಹೆಚ್ಚು. ನಿಜವಾಗಿಯೂ ಅವರ ಜೀವನವನ್ನು ಬಲ್ಲವರಾರು.? ಹೆಸರಿಗೆ ಸರಕಾರಿ ನೌಕರಿ ಇರುವ ಕಾರಣ ಸರಕಾರದ ಯಾವುದೇ ಸೌಲಭ್ಯಗಳು ಸೈನಿಕರಿಗಿಲ್ಲ. ಅದು ಕೊಡಬೇಕೆಂದು ಯಾರು ಹೋರಾಡುವವರೂ ಇಲ್ಲ ಬಿಡಿ. ಇದ್ದದ್ದನ್ನು ಉಪಯೋಗಿಸುವ ಐಡಿಯಾವು ಇಲ್ಲ. ಕೈ ತುಂಬಾ ಸಂಬಳ ಇದ್ದರೇನು ಅದನ್ನು ಮುಂದಿನ ಜೀವನಕ್ಕೆ ಉಪಯೋಗಿಸುವ
ಸಮಯವಕಾಶ ಎಲ್ಲಿದೆ.?
ಸೇನೆಯ ಸೇವೆ ಮುಗಿದು ಬರುವಾಗ ಸರಿಯಾದ ಮನೆಯು ಇರುದಿಲ್ಲ. ಪೆನ್ಷನ್ ಡುಡ್ಡಿನಲ್ಲಿ ಜಮೀನು ಖರೀದಿಸುವುದು ಆಯಿತು. ನಂತರ ಲೋನ್ ಮಾಡಿ ಮನೆಯು ಆಯಿತು. ತಿಂಗಳಿಗೆ ಬರುವ ಅರ್ಥ ಸಂಬಳ ಲೋನ್ ಕಟ್ಟಲು ಸರಿಯಾಯಿತು. ಮಕ್ಕಳು ದೊಡ್ಡವರಾಗಿದ್ದಾರೆ ವಿದ್ಯಾಭ್ಯಾಸ ಮಾಡಿಸಬೇಕುˌ ಮದುವೇನು ಮಾಡಿಸಬೇಕು ಎಲ್ಲಿದೆ ದುಡ್ದು.? ಅಂತು ಇಂದು ಹಲವು ‘ಬಿರುದು’ಗಳನ್ನು ಪಡೆದುಕೊಂಡ ಒಬ್ಬ ಸೈನಿಕ ಕಡೆಗೂ ಕೂಲಿ ನಾಲಿ ಮಾಡಿ ಜೀವನ ಸಾಗಿಸಬೇಕಾದದ್ದು ಅನಿವಾರ್ಯ. ಇಲ್ಲ ಯಾವುದಾರರೋ ಕಂಪೆನಿಗಳಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ದುಡಿಯೋದು ವೈರಿಗಳ ಹಲವು ಗುಂಡುಗಳನ್ನು ಎದುರಿಸಿರುವ ಒಬ್ಬ ಸೈನಿಕನ ವಿಪರ್ಯಾಸವಾಗಿರುತ್ತದೆ..!
ಸೈನಿಕರೆಂದರೆ ಯಾರು ಅವರ ಕಷ್ಟ ಸುಖಗಳೇನು ತಿಳಿದವನು ಈ ಪ್ರಪಂಚದಲ್ಲಿ ಬಹುಷ ಸೈನಿಕರು ಬಿಟ್ಟರೆ ಬೇರೆ ಯಾರು ಇಲ್ಲ. ಕಷ್ಟ ತಿಳಿದ ಹಾಗೆ ವೇದಿಕೆ ಸಮಾರಂಭದಲ್ಲಿ ಬೊಬ್ಬಿಟ್ಟವರು ನಂತರ ಸೈನಿಕರನ್ನು ನೆನಪು ಮಾಡಿಕೊಂಡರೆ ಅದೇ ಸಾರ್ಥಕವಾದಿತು..!
“ನಾವು ಕಂಡ ಸೈನಿಕರು ಮತ್ತು ನಾವು ಕಾಣದ ಸೈನಿಕರಿಗೆ” ಅಜಗಜಾಂತರದ ವ್ಯತ್ಯಾಸವಿದೆ.
ಸೈನಿಕರೆಂದರೆ ನಾವು ತಿಳಿದದ್ದು ಯುದ್ಧವನ್ನು ಗೆದ್ದವ ಮಾತ್ರವೆಂದು ತಿಳಿದಿದ್ದೇವು..
ಆದರೆ ಜೀವನದ ಯುದ್ಧವನ್ನು ಅವ ಗೆಲ್ಲಲಾರನೆಂದು ನಮಗೆ ತಿಳಿಯಲೇ ಇಲ್ಲ.!
ಯುದ್ಧದಲ್ಲಿ ಸತ್ತವ ವೀರ ಸೈನಿಕನೆಂದು ನಾವು ತಿಳಿದಿದ್ದೇವು.. ಆದರೆ ಬೆಟ್ಟಗಳಲ್ಲಿ ಗಾಡಿ ಬಿದ್ದು ಸತ್ತವನು ಸೈನಿಕನೆಂದು ನಾವು ತಿಳಿಯಲೇ ಇಲ್ಲ..!
ಸೈನಿಕರು ತುಂಬಾ ಚಳಿಯಲ್ಲಿ ಡ್ಯೂಟಿ ಮಾಡುತ್ತಾರೆಂದು ನಮಗೆ ತಿಳಿದಿದ್ದೇವು..ಆದರೆ ಚಳಿ ತಾಳಲಾರದೆ ಸತ್ತನೆಂದು ನಮಗೆ ತಿಳಿಯಲೇ ಇಲ್ಲ..!
ಗುಂಡಿಗೆ ಎದೆಕೊಟ್ಟು ಸಾಯುವನೆಂದು ನಮಗೆ ತಿಳಿದಿದ್ದೇವು..ˌ ಆದರೆ ಮಂಜುಗಡ್ಡೆ ಬಿದ್ದು ಕೂಡಾ ಸಾವು ಸಂಭವಿಸಬದುದೆಂದು
ನಮಗೆ ತಿಳಿಯಲೇ ಇಲ್ಲ..!
ರಾತ್ರಿ ದೇಶದ ಗಡಿ ಕಾಯಲು ಮಾತ್ರ ಸೈನಿಕರು ಡ್ಯೂಟಿಯಲ್ಲಿರುತ್ತಾರೆ ಎಂದು ತಿಳಿದಿದ್ದೇವು.
ಆದರೆ ಸಹಪಾಠಿಗಳಿಗೆ ರಾತ್ರಿ ಹೊತ್ತು ಎಬ್ಬಿಸಿ ನೀರು ಕುಡಿಸಲು ಡ್ಯೂಟಿ ಇರುತ್ತೆ ಎಂದು ತಿಳಿಯಲೇ ಇಲ್ಲ…!
ನೀರು ಕುಡಿಸಲಿಲ್ಲವೆಂದರೆ ಆಕ್ಸಿಜನ್ ಇಲ್ಲದ ಪ್ರದೇಶದಲ್ಲಿ ಗಂಟಲು ಒಣಗಿ ಮಲಗಿದಲ್ಲೆ ಸೈನಿಕರು ಸಾವನ್ನಪ್ಪುತ್ತಾರೆ ಎಂದು ಯಾವ ಶ್ರೀಮಂತ ಬಡವನಿಗೂ ತಿಳಿಯಲೇ ಇಲ್ಲ.!
ಸೈನಿಕನೆಂದರೆ ದೇಶ ಕಾಯುವವನು ಅಂತ
ಮಾತ್ರ ತಿಳಿದಿದ್ದೇವು..
ಆದರೆ ಅವನನ್ನು ಕಾಯುವ ಅವನ ತಂದೆˌ ತಾಯಿˌ ಅಣ್ಣ ತಮ್ಮˌ ಅಕ್ಕ ತಂಗಿ ಮತ್ತು ಹೆಂಡತಿ ಇದ್ದಾರೆ ಎಂದು ನಾವು ತಿಳಿಯಲೇ ಇಲ್ಲ..!
ಯುದ್ಧದಲ್ಲಿ ಸತ್ತವ ಸೈನಿಕನೆಂದು ತಿಳಿದಿದ್ದೇವು.. ಆದರೆ ವಾತಾವರಣದ ಹೊಂದಿಕೊಳ್ಳಲಾಗದೆ ಉಸಿರುಗಟ್ಟಿ ಸತ್ತ ಸೈನಿಕರ ಬಗ್ಗೆ ತಿಳಿಯಲೇ ಇಲ್ಲ..!
ಸೈನಿಕ ರಜೆಯಲ್ಲಿ ಬರುತ್ತಾನಂತ ನಾವು ತಿಳಿದಿದ್ದೇವು..
ಆದರೆ ಸೈನಿಕರಿಗೆ ಸರಿಯಾದ ಸಮಯದಲ್ಲಿ ರಜೆ ಸಿಗಲ್ಲ ಅಂತ ನಮಗೆ ತಿಳಿಯಲೇ ಇಲ್ಲ..!
ಸೈನಿಕರು ಆರಾಮವಾಗಿ ರೈಲಿನಲ್ಲಿ ಬರುತ್ತಾರಂತ ತಿಳಿದಿದ್ದೇವು. ಆದರೆ ಸಿಗದ ರಜೆ ಅಚಾನಕ್ಕಾಗಿ ಸಿಕ್ಕಾಗ ಸೀಟು ಬುಕ್ಕಿಂಗ್ ಮಾಡಲು ಸಮಯವಿಲ್ಲದೆ 2-3 ದಿನ ರೈಲಿನಲ್ಲಿ ದಣಿದ ದೇಹವನ್ನು ಹಿಡಿದುಕೊಂಡು ಮಡದಿ ಮಕ್ಕಳನ್ನು ಹೆತ್ತ ತಂದೆ ತಾಯಿಯನ್ನು ಒಡ ಹುಟ್ಟಿದ ಅಕ್ಕ ತಂಗಿ ಅಣ್ಣ ತಮ್ಮರನ್ನು ನೋಡಲು ನಿಂತುಕೊಂಡೇ ಬರುತ್ತಾರಂತ
ನಮಗೆ ತಿಳಿಯುವುದೇ ಇಲ್ಲ.!
ಮನೆಯವರರಿಗೆ ಕಾಲ್ ಮಾಡುತ್ತಿರಬಹುದೆಂದು ತಿಳಿದಿದ್ದೇವು. ಆದರೆ ಒಮ್ಮೆ ಫೋನು ಮಾಡಲು ಸೈನಿಕ ಎಷ್ಟು ಕಷ್ಟ ಪಡಬಹುದೆಂದು ತಿಳಿಯಲೇ ಇಲ್ಲ..!
ಭಾರತದ ಎಲ್ಲಾ ಕಡೆ 3ಜಿ 4ಜಿ ನೆಟ್ ವರ್ಕ್ ಇದೆ ಎಂದು ಜಾಹಿರಾತು ನೋಡಿ ತಿಳಿದಿದ್ದೆವು. ಆದರೆ ಸೈನಿಕರಿರುವ ಕೆಲವು ಕಡೆ ಮೊಬೈಲ್ ನೆಟ್ ವರ್ಕ್ ಕೂಡ ಇಲ್ಲ ಎಂದು ನಮಗೆ ತಿಳಿಯಲೇ ಇಲ್ಲ.!.
ಸೇನಾ ಮುಖಾಂತರ ಮನೆಗೊಮ್ಮೆ ಕಾಲ್ ಮಾಡಲು ಅವಕಾಶ ಸಿಕ್ಕರು ಅದು ಮೂರೇ ನಿಮಿಷ. ವಾರಕ್ಕೆ ಒಂದು ಸಾರಿ ಅವಕಾಶ ಸಿಗುವ ಸೈನಿಕ ಮೂರು ನಿಮಿಷದಲ್ಲಿ ಏನೆಲ್ಲಾ ಮಾತನಾಡಿಯಾನು
ಎಂದು ನಾವು ತಿಳಿಯಲೇ ಇಲ್ಲ..!
ಕೆಲವು ಕಡೆ ನೆಟ್ ವರ್ಕ್ ಇದ್ದರೂ ಬ್ಯೂಸಿ ನೆಟ್ ವರ್ಕ್ ನಿಂದ ಕನೆಟ್ ಆಗಲು ಒಂದರ್ಥ ಗಂಟೆ ಪ್ರಯತ್ನಿಸುತ್ತಲೇ ಇರಬೇಕೆಂದು
ನಮಗೆ ತಿಳಿಯಲೇ ಇಲ್ಲ..!
ಸೈನಿಕರಿಗೆ ಬೇಕಾದಷ್ಟು ದಿನಾಲು ಮಾಂಸದೂಟ ಇದೆ ಅಂತ ತಿಳಿದುಕೊಂಡಿದ್ದೇವೆ. ಆದರೆ ಸೈನಿಕರು ಕೂಡ ಸಾಕ್ಷತ್ ಭಾರತ ಮಾತೆಯನ್ನು ಪೂಜಿಸಲು ವಾರದ ಒಂದು ದಿನ ಮಂಗಳವಾರ ಸಾಮೂಹಿಕ ವೃತ ಆಚರಿಸಿ ಮಾಂಸದೂಟದಿಂದ
ದೂರವಿರುತ್ತಾರಂಥ ತಿಳಿಯಲೇ ಇಲ್ಲ..!
ಎದುರಾಳಿಯ ಗುಂಡುಗಳಿಂದ ಸೈನಿಕನ ಅಂಗಾಂಗಗಳು ಮುರಿಯುತ್ತವೆಂದು ನಾವು ತಿಳಿದಿದ್ದೇವು.. ಆದರೆ ವರ್ಷಪೂರ್ತಿ ಮಂಜುಗಡ್ಡೆ ಬೀಳುವ ಸಿಯಾಚಿನ್ ಗ್ಲೇಜಿಯರ್ ನಂತಹ ಸ್ಥಳಗಳಲ್ಲಿ ಕಬ್ಬಿಣನವನ್ನು ಮೂವತ್ತು ಸೆಕೆಂಡ್ ಹಿಡಿದರೆ ಸಾಕು ನಂತರ ಬೆರಳುಗಳನ್ನು ಬಾಗಿಸಿದರೆ ಒಣ ಕಡ್ಡಿಯಂತೆ ತುಂಡಾಗುತ್ತವೆ ಅಂತ ನಮಗೆ ತಿಳಿಯಲೇ ಇಲ್ಲ..!
ಇನ್ನು ನಮಗೆ ಗೊತ್ತಿಲ್ಲದ ಅದೇಷ್ಟೊ ಕಠಿಣ ವಿಷಯಗಳಿವೆ. ಆದರೆ ನಾವು ಕಂಡ ಸೈನಿಕರು ಮತ್ತು ನಾವು ಕಾಣದ ಸೈನಿಕರ ಜೀವನ ಇಷ್ಟೊಂದು ಕಷ್ಟಕರವಿದೆ ಅಂತ ತಿಳಿಯುವ ಮೊದಲು ಸಾವಿರಾರು ಸೈನಿಕರ ಬಲಿದಾನಗಳು ನಾನಾ ಕಾರಣಗಳಿಂದ ಆಗುತ್ತಿವೆ. ಇಂಥ ವಿಷಯಗಳು ಹೆಚ್ಚಿನವರಿಗೆ ಗೊತ್ತಿರೋದೆ ಬೇಡ. ಭಾರತೀಯ ಪ್ರಜೆಗಳಾದರು ಚಿಂತೆಯಿಲ್ಲದೆ ನೆಮ್ಮದಿಯ ರಾತ್ರಿಗಳನ್ನು ಕಳೆಯnಲಿ ಅನ್ನುವುದೆ ಸೈನಿಕರ ಆಶಯ..!
ಸೈನಿಕರ ಒಡಲಾಳ