ಜಗಳೂರು ಪಟ್ಟಣ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ 13 ನೇ ವರ್ಷದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಜರುಗಿತು.
ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ
ಶಾಸಕ ಬಿ ದೇವೇಂದ್ರಪ್ಪ ಕಾರ್ಯಕ್ರಮವನ್ನು ಉದ್ಗಾಟಸಿ ನಂತರ ಪೌರಕಾರ್ಮಿಕರಿಗೆ ಗೌರವ ಸಮರ್ಪಣೆ ಸನ್ಮಾನಿಸಿ ಮಾತನಾಡಿದರು ಕಾರ್ಮಿಕರು ಮದ್ಯವ್ಯಸನಿಯಂತ ದುಚಟ್ಟಗಳಿಂದ ದೂರವಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೇ ನೀಡಿದರು ನಾನು ನಿಮ್ಮ ಹಾಗೆ ಖಾಸಗಿ ಕಾಲೇಜಿನಲ್ಲಿ ಡಿ ಗ್ರೂಪ್ ನೌಕರನಾಗಿ ಕಸ ಹೊಡೆದು ಬಂದಿರುವೆ ನಾನು ನಿಮ್ಮೊಂದಿಗೆ ಪ್ರತಿ ತಿಂಗಳು ಪಟ್ಟಣದಲ್ಲಿ ಕಸಗೂಡಿಸಿ ಆತ್ಮಸ್ಥೈರ್ಯ ತುಂಬಿ ನಿಮ್ಮ ಬೆಂಬಲಕ್ಕೆ ನಾನು ಸದಾ ಕೈಜೋಡಿಸುವೆ .ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಬ್ಯಾಸ ಕೋಡಿಸಿ ಉನ್ನತ ಸ್ಥಾನ ಪಡೆಯುವಂತೆ ಬೆಳೆಸಬೇಕು ಸಂವಿಧಾನದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಮಿಕರ ಮಕ್ಕಳು ಕೂಡ ಶಾಸಕರಾಗಿ ಆಯ್ಕೆಯಾಗಿದ್ದಾರೆ ಉದಾಹರಣೆಗೆ ನಮ್ಮ ಮಾಯಕೊಂಡ ಶಾಸಕ ಕೆ. ಎಸ್ ಬಸವಂತಪ್ಪ ಒಬ್ಬ ಕಾರ್ಮಿಕನ ಮಗ ಮೊನ್ನೆ ವಿಧಾನಸೌಧದಲ್ಲಿ ಸ್ವೀಕರ್ ಮುಂದೆ ತನ್ನ ಒಡಲಾಳ ನೋವು ಬಿಚ್ಚಿಟ್ಟ ಕಥೆ ನನ್ನ ಕಣ್ಮುಂದೆಯಿದೆ. ಕಾರ್ಮಿಕರನ್ನು ಸಮಾಜದಲ್ಲಿ ಅತ್ಮಗೌರವದಿಂದ ಕಾಣಬೇಕು.ನಮ್ಮ ನಗರ ಸ್ವಚತೆಯಲ್ಲಿ ಕಾರ್ಮಿಕರ ಪಾತ್ರ ಬಹುಮುಖ್ಯವಾಗಿದೆ.
ಪೌರ ನೌಕರರ ಸಮಸ್ಯೆಗಳಿಗೆ ಸರ್ಕಾರದ ಪೌರ ಅಡಳಿತ ಸಚಿವರೊಂದಿಗೆ ಚರ್ಚೆ ನಡೆಸಿ ವಸತಿ ನಿವೇಶನಕ್ಕಾಗಿ ಪೌರಕಾರ್ಮಿಕರ ಬಡಾವಣೆ ನಿರ್ಮಿಸಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಂದಿನ ವರ್ಷ ಪೌರ ಕಾರ್ಮಿಕರ ದಿನಾಚರಣೆ ಬದಲು ಪೌರಕಾರ್ಮಿಕರ ಹಬ್ಬ ಆಚರಣೆ ಮಾಡುವಂತೆ ಸಲಹೇ ನೀಡಿದರು
ಪೌರ ಕಾರ್ಮಿಕರ ಬದುಕು ಅಸನ ಆಗಬೇಕು ಪೌರ ಕಾರ್ಮಿಕರಿಗೆ ಗೌರವದಿಂದ ಕಾಣಬೇಕೆ ಎಂದರು.
ಮುಖ್ಯಾ ಅಧಿಕಾರಿ ಲೋಕ್ಯಾನಾಯ್ಕ್ ರವರು ನಮ್ಮ ಕಾರ್ಮಿಕರ ಹಕ್ಕುಗಳ ಬಗ್ಗೆ ಚ್ಯುತಿಯಾಗದಂತೆ ಒದಗಿಸಿ ನಾನು ಕೂಡ ಪೌರ ಅಡಳಿತ ಸಚಿವರ ಗಮನಕ್ಕೆ ತಂದು ಪೌರ ನೌಕರರ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಯತ್ನಿಸುವೆ. ನಿವೇಶನ ವಸತಿ ಸೌಲಭ್ಯ ಒದಗಿಸಲು ಚಿಂತನೆ ನಡೆಸುವೆ . ಕಾರ್ಮಿಕರ ಜೊತೆಗೆ ಆತ್ಮಸ್ಥೈರ್ಯ ತುಂಬಲು ನಾನು ನಿಮ್ಮ ಜೊತೆಗಿರುವೆ ಎಂದರು.
ಜಿಲ್ಲಾ ನಗರ ಅಭಿವೃದ್ಧಿ ಕೋಶ ಯೋಜನಾ ನಿರ್ದೇಶನರಾದ ಮಹಾಂತೇಶ್ ಮಾತನಾಡಿದರು ಪೌರ ಕಾರ್ಮಿಕರು ಜೀವ ಬದ್ರತೆ ಕಾಪಾಡಿಕೊಳ್ಳಿ ಜೀವ ವಿಮೆ ಸೌಲಭ್ಯಗಳನ್ನು ತಪ್ಪದೆ ಮಾಡಿಸಿಕೊಳ್ಳಿ.ನಿಮ್ಮ ನಂಬಿರುವ ಕುಟುಂಬಕ್ಕೆ ಆಧಾರವಾಗುವ ಭದ್ರತೆ ಬದುಕು ಸಾಗಿಸಲು ಸಹಕಾರಿಯಾಗುವಂತೆ ಜೀವನ ಕಟ್ಟಿಕೊಳ್ಳಿ ಕುಡಿತದ ಚಟ್ಟದಿಂದ ದೂರವಾಗಿ ಪೌರ ಕಾರ್ಮಿಕರ ಸಂತೋಷದ ದಿನಾಚರಣೆ ಕಾರ್ಮಿಕರ ಹಬ್ಬವಾಗಿದೆ ಎಂದರು
ತಹಶೀಲ್ದಾರ ಸೈಯದ್ ಖಲೀಂ ಉಲ್ ಮಾತನಾಡಿ ಸರ್ಕಾರದ ನಿರ್ದೇಶನದಂತೆ ನಾವು ಕೂಡ ತಮ್ಮ ಇಲಾಖೆಗಳಲ್ಲಿ ಒಂದು ದಿನ ಸ್ವಚತೆಗೆ ಆದ್ಯತೆ ನೀಡುವಂತೆ ಆದೇಶವಿದೆ ಕೇವಲ ಕಾರ್ಮಿಕರ ಕೆಲಸವಲ್ಲ ನಮ್ಮ ಜವಾಬ್ದಾರಿಗಳಿವೆ ನಗರದ ಜನತೆ ಕಾರ್ಮಿಕರಿಗೆ ಸಹಕರಿಸಬೇಕು .ಅವರು ನಿತ್ಯ ಯಾರು ಮುಟ್ಟದಂತಹ ಹೊಲಸು ಎತ್ತಿ ಹಾಕುವ ದೈವಸ್ವರೂಪಿಗಳು ಅವರಿಗೆ ಸಿಗುವ ಸೌಲಭ್ಯಗಳನ್ನು ತಪ್ಪದೆ ಪಪಂ ಇಲಾಖೆ ಒದಗಿಸುವಂತೆ ತಿಳಿಸಿದರು.
ಪಿ. ಎಸ್ ಅರವಿಂದ್ ಮಾತನಾಡಿ ಪಟ್ಟಣದ ಜನತೆ ಕೆಲ ಬಾಗಗಳಲ್ಲಿ ಕಸವನ್ನ ರಸ್ತೆಗೆ ಎಸೆಯುತ್ತಾರೆ ಅದೆ ಕಸವನ್ನ ನಮ್ಮ ಪೌರ ಕಾರ್ಮಿಕರು ಕಾಸು ಎಂದು ಎತ್ತಿಕೊಂಡು ನಗರ ಸ್ವಚೆತೆಗೆ ಮುಂದಾಗುವರು . ಪೌರ ಕಾರ್ಮಿಕರು ಕಸವನ್ನ ಬರಿಗೈಲ್ಲಿ ತೆಗೆಯಬೇಡಿ ಸೇಪ್ಟಿ ಕಿಟ್ ಬಳಸಿ ನಿಮ್ಮ ಹಕ್ಕುಬಾದ್ಯತೆಗಳು ಸರ್ಕಾರದಿಂದ ಮತ್ತು ಶಾಸಕರ ಗಮನಕ್ಕೆ ತಂದು ವಸತಿ ನಿವೇಶನ ಪಡೆದುಕೊಳ್ಳಬೇಕು. ಪೌರ ಕಾರ್ಮಿಕರ ಬಡಾವಣೆ ನಿರ್ಮಿಸಲು ಶಾಸಕರು ಮುಂದಾಗುವಂತೆ ಕರೆ ನೀಡಿದರು. ಪೌರಕಾರ್ಮಿಕರ ಬವಣೆಗಳನ್ನು ಅರಿತ ಕ್ಷೇತ್ರದ ಶಾಸಕರೆ ನಿಮ್ಮ ಜೊತೆ ಪ್ರತಿ ತಿಂಗಳು ಸ್ವಚತೆ ಮುಂದಾಗಿರುವ ಏಕೈಕ ಶಾಸಕರು ಎಂದರೆ ದೇವೇಂದ್ರಪ್ಪ ಸಾರ್ ರವರು ನಿಮ್ಮ ದ್ವನಿಗೆ ದ್ವನಿಯಾಗುವರು ಎಂಬ ಭರವಸೆಯಿದೆ ಎಂದರು.
ಮಾಜಿ ಪಪಂ ಅದ್ಯಕ್ಷರಾದ ಆರ್ ತಿಪ್ಪೇಸ್ವಾಮಿ ಮಾತನಾಡಿ ಪೌರಕಾರ್ಮಿಕರು ಯಾರಿಗೂ ಕಡಿಮೆಯಿಲ್ಲ 35 ರಿಂದ 40 ಸಾವಿರ ಸಂಬಳ ಭತ್ಯ ಪಡೆಯುವ ನೀವು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೋಡಿಸಿ ಸಮಾಜದಲ್ಲಿ ತಾವುಗಳು ಆತ್ಮಗೌರವದಿಂದ ಬದುಕುವಂತೆ ಕರೆ ನೀಡಿದರು.
ಇದೆ ಸಂದರ್ಭದಲ್ಲಿ ಪೌರ ನೌಕರರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.
ಪಪಂ ನೂತನ ಅದ್ಯಕ್ಷ ಕೆ ಎಸ್ ನವೀನ್ ಕುಮಾರ್ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಶುಭಾ ಕೋರಿದರು
ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷರಾದ ಲೋಕಮ್ಮ ಒಬಳೇಶ್.ಪಪಂ ಸದಸ್ಯರಾದ ಮಂಜುನಾಥ..ಬಿ.ಕೆ ರಮೇಶ್.ಶಕೀಲ್ ಆಹಮದ್.ಕಾಯಿ ಸಿದ್ದಪ್ಪ. .ಲಲಿತಮ್ಮ ಶಿವಣ್ಣ .ಲುಕ್ಮಾನ್ ಖಾನ್. ನಿರ್ಮಲಕುಮಾರಿ.ವಿಶಾಲಾಕ್ಷಿ. ಸರೋಜಮ್ಮ.ಮಹಮದ್ ಆಲಿ.ನಜರತ್ ಉನ್ನಿಸ್ನ್ .ನಾಮ ನಿರ್ದೇಶನ ಸದಸ್ಯರಾದ ಕುರಿ ಜಯ್ಯಣ್ಣ..ತಾನಾಜಿ ಗೋಸಾಯಿ. ಇಂಜಿನಿಯರ್ ಶೃತಿ. ಆರೋಗ್ಯ ಅಧಿಕಾರಿ ಪ್ರಶಾಂತ್.ಹಿರಿ ನಾಗರೀಕರ ಸಂಘದ ಮುಖಂಡ ತಿಪ್ಪೇಸ್ವಾಮಿ. ಡಿ ಎಸ್ ಎಸ್ ಸಂಚಾಲಕರಾದ ಕುಬೇರಪ್ಪ.ಮಲೆಮಾಚಿಕೆರೆ ಸತೀಶ್. .ಸೇರಿದಂತೆ ಮುಂತಾದವರು ಹಾಜುರಿದ್ದರು.