ಎನ್. ಟಿ. ಎರ್ರಿ ಸ್ವಾಮಿಯವರಿಗೆ ರಾಜ್ಯಮಟ್ಟದ ಲೋಹಿಯಾ ಪ್ರಶಸ್ತಿ:

ಬೆಂಗಳೂರಿನ ಬುದ್ದ, , ಬಸವ, ಗಾಂಧಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ
ಸಿದ್ಧನಹಳ್ಳಿ ಶ್ರೀಮತಿ ಪದ್ಮ ಸಿದ್ದೇಗೌಡ ನೆನಪಿನಲ್ಲಿ ಕೊಡಮಾಡುವ ರಾಜ್ಯಮಟ್ಟದ ಲೋಹಿಯ ಪ್ರಶಸ್ತಿಗೆ ಜಗಳೂರಿನ ಹಿರಿಯ ಸಾಹಿತಿ ಹಾಗೂ ನಿವೃತ್ತ ಲೀಡ್ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕರಾದ ಶ್ರೀ ಎನ್. ಟಿ.
ಎರ್ರಿ ಸ್ವಾಮಿ ಯವರು ಆಯ್ಕೆಯಾಗಿದ್ದಾರೆ.
ಅಕ್ಟೋಬರ್ 6 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆಯನ್ನು ಸುಮಂಗಲಿ ಸೇವಾಶ್ರಮದ ಅಧ್ಯಕ್ಷರಾದ ಶ್ರೀಮತಿ ಎಸ್‌.ಜಿ.ಸುಶೀಲಮ್ಮನವರು ವಹಿಸಿಕೊಳ್ಳಲಿದ್ದಾರೆ.
ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್ ನ ಮ್ಯಾನೇ ಜಿಂಗ್ ಟ್ರಸ್ಟಿಗಳಾದ ಶ್ರೀಮತಿ ಇಂದಿರಾ ಕೃಷ್ಣಪ್ಪ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಎಸ್. ಎಲ್. ಭೋಜೇಗೌಡ, ಡಾ. ಪಾನ್ಯಾಂ ನಟರಾಜ ಮಾಗಡಿ ,
ವೀರಕ ಪುತ್ರ ಶ್ರೀನಿವಾಸ್, ಪ್ರೊಫೆಸರ್ ಲೀಲಾ ವಾಸುದೇವ್,ಡಾ. ಆರ್ ವಾದಿರಾಜ್ ಮುಂತಾದವರು ಉಪಸ್ಥಿತರಿದ್ದು ಹಾರೈಸಲಿದ್ದಾರೆ ಎಂದು ಬುದ್ಧ ಬಸವ ಗಾಂಧಿ ಸಾಂಸ್ಕತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ . ಸಿಸಿರಾ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!