ಜಗಳೂರು ತಾಲ್ಲೂಕಿನ ನಿವೃತ್ತ ಶಿಕ್ಷಕ ಪಿ ಶಿವಣ್ಣ ರವರ ಪುತ್ರಿ ಟಿ.ಎಸ್ ಮಾನಸರವರು ಇಂದು ಬಾಗಲಕೋಟೆ ವಿ.ವಿ.ಯಲ್ಲಿ ಎಂ ಎಸ್ಸಿ. ಡಾಕ್ಟರೇಟ್ ಪದವಿ ಸೀಕರಿಸಲಿದ್ದಾರೆ .ಕರ್ನಾಟಕ ಸರ್ಕಾರದ ರಾಜ್ಯಪಾಲರು ಹಾಗೂ ತೋಟಗಾರಿಕೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ವಿ ವಿ ಕುಲ ಸಚಿವರಿಂದ ಸ್ವೀಕರಿಸುವರು ಎಂದು ತಿಳಿಸಿದ್ದಾರೆ.
ಪ್ರೌಢಶಾಲಾ ಸಹಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರು ಪಿ ಶಿವಣ್ಣರವರ ಎರಡನೇ ಪುತ್ರಿ ಮಾನಸರವರು ಚಿಕ್ಕಂದಿನಿಂದಲ್ಲೆ ಪದವಿ ಗಳಿಸಬೇಕು ಎಂಬ ಮಹಾದಾಸೆಯಂತೆ ನಿರಂತರ ಸತತ ಓದಿನ ಪರಿಶ್ರಮ ಮೂಲಕ ಉತ್ತಮ ವಿದ್ಯಾಭ್ಯಾಸ ಮಾಡುವ ಮೂಲಕ ಎಂ.ಎಸ್ಸಿ ಪದವಿ ಗಳಿಸಿ ಇದೀಗ ಡಾಕ್ಟರೇಟ್ ಸ್ವೀಕರಿಸುವ ಮಾನಸರವರಿಗೆ ಶುಭಾ ಹಾರೈಸಿದ್ದಾರೆ. ತಾಲ್ಲೂಕಿಗೆ ಶಿಕ್ಷಕ ವೃಂದಕ್ಕೆ ಪೋಷಕರಿಗೆ ವಿಧ್ಯಾರ್ಥಿನಿ ಕೀರ್ತೀ ತಂದಿರುತ್ತಾರೆ.