filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 48;

ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಶಾಸಕ ಬಿ ದೇವೇಂದ್ರಪ್ಪ
ಪುಣ್ಯಕ್ಷೇತ್ರ ಶ್ರೀ ಕೊಡದಗುಡ್ಡ ವೀರಭದ್ರೇಶ್ವರ ದೇವಸ್ಥಾನಕ್ಕೆ 11 ಲಕ್ಷ ರೂಗಳಲ್ಲಿ ಉತ್ತಮ ಶೌಚಾಲಯ ನಿರ್ಮಾಣ ಮಾಡುವ ಚಿಂತನೆ.


ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನುಮ ದಿನಾಚರಣೆ ಅಂಗವಾಗಿ ದೇವಿಕೆರೆ ಗ್ರಾಮ ಪಂಚಾಯತಿ ಕೊಡದಗುಡ್ಡದಲ್ಲಿ ನಡೆದ ಸ್ವಚತೆಯೇ ಸೇವಾ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆದ್ಯತೆ ಮೇರೆಗೆ ಗ್ರಾಪಂ ಗೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಗೆ ಒತ್ತು ನೀಡಲಾಗುವುದು .ಗಾಂಧಿ ಕಂಡ ಕನಸು ಸ್ವಚಭಾರತ ಸ್ವಚ್ಛ ಆಡಳಿತದ ರಾಮ ರಾಜ್ಯದ ಕನಸು ಕಂಡಂತೆ ಗ್ರಾಮೀಣ ಬಾಗದಲ್ಲಿ ಮೂಲಸೌಕರ್ಯಗಳಿಗೆ ಆದ್ಯತೆ ನೀಡಿ ರಸ್ತೆ ಚರಂಡಿ ವಸತಿ. ನಿವೇಶನಗಳ ಭಾಗ್ಯವನ್ನ ಅಂತ ಅಂತವಾಗಿ ಒದಗಿಸಿ ಅಭಿವೃದ್ಧಿಗೆ ಒತ್ತು ನೀಡುವ ಭರವಸೆ ನೀಡಿದರು. ಅತಿ ಶೀಘ್ರವೆ ತಾಲ್ಲೂಕಿಗೆ 500 ಮನೆಗಳು ಬರುವ ನಿರೀಕ್ಷೆಯಿದೆ .ನೀಯಮನುಸಾರವಾಗಿ ಸರ್ಕಾರದ ಯೋಜನೆಗಳನ್ನ ಸಂಬಂಧಿಸಿದ ಅಧಿಕಾರಿಗಳ ಮೂಲಕ ಗ್ರಾಮೀಣ ಬಾಗದ ಆರ್ಹ ಫಲಾನುಭವಿಗಳಿಗೆ ತಲುಪಿಸಲಾಗುವುದು.

ತಾಲ್ಲೂಕಿನ ಅಸಗೋಡು ವಡ್ಡರಹಟ್ಟಿ ಗ್ರಾಮದಲ್ಲಿ ಎರಡು ಮಕ್ಕಳು ಕೃಷಿ ಹೊಂಡಕ್ಕೆ ಬಿದ್ದು ಅಸುನೀಗಿದರು.ಈಗಾಗಲೇ ಶಾಲೆಗಳು ರಜ ಬಿಟ್ಡಿರುವುದರಿಂದ ಮಕ್ಕಳುನ್ನು ಮಹಿಳೆಯರು ಜೋಪಾನವಾಗಿ ನೋಡಿಕೊಳ್ಳಿ .ಮೊನ್ನೆ ದಾರುಣವಾಗಿ ಅಸುನೀಗಿದ ಮಕ್ಕಳ ಪೋಷಕರಿಗೆ ಸಾಂತ್ವನ ಹೇಳಲಾಯಿತು. ಅಂತಹ ಘಟನೆ ಮರುಕಳಿಸದಂತೆ ಪೋಷಕರು ಎಚ್ಚರ ವಹಿಸಬೇಕು ಎಂದರು. ದೇಶದಲ್ಲಿ
ಬಾಲ್ಯ ವಿವಾಹ ಪದ್ದತಿ ತೊಲಗಬೇಕು.ಮಹಿಳೆಯರು ಕೆಲ ಗೊಡ್ಡು ಸಂಪ್ರದಾಯಗಳಿಗೆ ಮಾರುಹೋಗಬೇಡಿ.ಭಾರತ ದೇಶದಲ್ಲಿ ಮಹಿಳೆಯರಿಗೆ ಪೂಜನೀಯ ಸ್ಥಾನವಿದೆ.ತಮ್ಮ ಮಕ್ಕಳಿಗೆ ಸಂಸ್ಕಾರ ಕೊಟ್ಟು ಉತ್ತಮ ನಾಗರೀಕರನ್ನಾಗಿ ಮಾಡುವ ಜವಾಬ್ದಾರಿ ನಿಮ್ಮ ಮೇಲೆ ಇದೆ
ಕೆಲವು ಘಟನೆಗಳು ವ್ಯಕ್ತಿ ಸಾಧನೆಗೆ ಸ್ಪೋರ್ತಿಯಾಗುತ್ತವೆ ಎಂದರು.

ದೇವಿಕೆರೆ ಗ್ರಾಪಂ ವ್ಯಾಪ್ತಿಯ ಗ್ರಾಮವೊಂದರಲ್ಲಿ ಘನತ್ಯಾಜ್ಯ ವಿಲೆವಾರಿ ಘಟಕ ಸ್ಥಾಪನೆ ಮಾಡಿದ್ದರು ಸಹ ಇದುವರೆಗೂ ಅನುದಾನ ನೀಡಿರುವುದಿಲ್ಲ ಆ ಕೊಠಡಿ ಲೋಕಾರ್ಪಣೆಯಾಗಿಲ್ಲ ಶಾಸಕರು ಗಮನಹರಿಸಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವಂತೆ .ಗ್ರಾಪಂ ಸದಸ್ಯ ಬಸಾವಪುರ ರವಿಚಂದ್ರ ಆರೋಪಿಸಿದರು.
ದೇವಿಕೆರೆ ಗ್ರಾಪಂ ಗಾಂಧಿ ಪುರಸ್ಕಾರ ಲಭಿಸಿದೆ 2017 ಸಾಲಿನಲ್ಲಿ 1000 ಸಾವಿರ ಶೌಚಾಲಯ ನಿರ್ಮಿಸಿಸಲಾಗಿದೆ. ಆದ್ಯತೆ ಮೇರೆಗೆ ಗ್ರಾಪಂ ಗೆ ಹೆಚ್ಚೆನ ಅನುದಾನ ಕಲ್ಪಿಸುವಂತೆ ಮನವಿ ಮಾಡಿಕೊಂಡರು .ನಿವೇಶನ ವಸತಿ.ರಸ್ತೆ ಅಭಿವೃದ್ಧಿ ಸೌಲಭ್ಯ ಗಳುನ್ನು ಕಲ್ಪಿಸಿ ಎಂದು ಪ್ರಾಸ್ತಾವಿಕವಾಗಿ‌ ದೇವಿಕೆರೆ ಗ್ರಾಪಂ ಸದಸ್ಯರಾದ ಗುರುಸ್ವಾಮಿ ಮನವಿ ಮಾಡಿಕೊಂಡರು.ಇದೆ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು .ವಿವಿಧ ಶಾಲೆಗಳಿಗೆ ಗ್ರಾಪಂ ವತಿಯಿಂದ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಲಾಯಿತು.


ಈ ಸಂದರ್ಭದಲ್ಲಿ ತಹಶೀಲ್ದಾರ ಸೈಯದ್ ಕಲೀಂ ಉಲಾ .ತಾಪಂ ಇಓ ಕೆಂಚಪ್ಪ. ಗ್ರಾಮೀಣ ನೀರು ನೈರ್ಮಲ್ಯ ಅಧಿಕಾರಿ ಸಾಧಿಕ್ ವುಲ್.ಬಿಇಓ.ಹಾಲಮೂರ್ತಿ.ಸಿಡಿಪಿಓ ಬೀರೇಂದ್ರಕುಮಾರ್.ಸಮಾಜ ಕಲ್ಯಾಣ ಅಧಿಕಾರಿ ಪರಮೇಶ್ವರಪ್ಪ.ಟಿ.ಎಚ್ ಓ.ವಿಶ್ವನಾಥ. ದೇವಿಕೆರೆ ಗ್ರಾಪಂ ಅಧ್ಯಕ್ಷರಾದ ರಣದಮ್ಮ ಚಂದ್ರಪ್ಪ.ಉಪಾಧ್ಯಕ್ಷರಾದ ವೀರೇಶ್.ಗ್ರಾಪಂ ಸದಸ್ಯರಾದ ಸದಾಶಿವಪ್ಪ.ಅಂಜಿನಪ್ಪ .ಪಿಡಿಓ ಸುನಿತಾ.ಪಿಡಿಓ ಗಳಾದ ವಾಸು.ಗ್ರಾಪಂ ಸಿಬ್ಬಂದಿಗಳಾದ ಸಂಪತಕುಮಾರ್ ಸೇರಿದಂತೆ.ಶಿಕ್ಷಕರಾದ ಸಿ ಆರ್ ಪಿ ಅಂಜಿನಪ್ಪ ಮುಂತಾದವರು ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!