ಚುನಾವಣೆ ಅಧಿಕಾರಿಗಳಿಂದ ವಿವಿಧ ರಾಜಕೀಯ ಪಕ್ಷಗಳ ಸಭೆ ಮಾದರಿ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸುವಂತೆ :- ಚುನಾವಣಾ ಅಧಿಕಾರಿ ಎಸ್.ರವಿ ತಿಳಿಸಿದರು.
ಶುಕ್ರದೆಸೆ ನ್ಯೂಸ್:
ಪಟ್ಟಣದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷದ ಮುಖಂಡರುಗಳೊಂದಿಗೆ ಸೋಮವಾರ ಸಭೆ ನಡೆಸಲಾಯಿತು. ಸಭೆನ್ನುದ್ದೆಶಿಸಿ ಚುನಾವಣೆ ಅಧಿಕಾರಿ ಎಸ್ ರವಿ ಮಾತನಾಡಿದರು ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸುವ ನಮೂನೆಯಲ್ಲಿ ವಿವಿಧ ಕಾಲಂಗಳುನ್ನು ತಪ್ಪದೆ ಭರ್ತಿ ಮಾಡಬೇಕು.ಎಸ್ಟಿ ಮೀಸಲು ಕ್ಷೇತ್ರದಲ್ಲಿ ನಾಮ ಪತ್ರ ಸಲ್ಲಿಸುವಾಗ ಜಾತಿ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲೆ ಒದಗಿಸಬೇಕು.ಜಗಳೂರು ವಿಧಾನಸಭಾ ಚುನಾಚಣೆ ಅಭ್ಯರ್ಥಿಗಳ ನಾಮ ಪತ್ರ ಸಲ್ಲಿಕೆ ದಿ ಏಪ್ರಿಲ್ 13 ಸ್ವಿಕಾರ. ಏಪ್ರಿಲ್ .ದಿ 20 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ .ದಿನಾಂಕ 21 ರಂದು ನಾಮ ಪತ್ರ ಪರಿಶೀಲನೆ. ದಿ.24 ರಂದು ನಾಮ ಪತ್ರ ವಾಪಸ್ಸು .ಮೆ 10 ರಂದು ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮತದಾನ.ಮೆ 13 ರಂದು ಮತ ಎಣಿಕೆ ನಡೆಯುವುದು ಎಂದು ತಿಳಿಸಿದರು, ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸುವ ಕೊಠಡಿಯೊಳಗೆ 5 ಜನರಿಗೆ ಮಾತ್ರ ಆವಕಾಶ ಚುನಾವಣ ವೆಚ್ಚ 40 ಲಕ್ಷ ಮೀರದಂತೆ ಚುನಾವಣೆ ವೆಚ್ಚ ಖರ್ಚಾ ಮಾಡುವುದು ಹಾಗೂ ಕಡ್ಡಾಯವಾಗಿ ಚೆಕ್ ಮತ್ತು ಆನ್ಲೈನ್ ಮೂಲಕ ಪಾವತಿಸಬೇಕು .ರಾಜಕೀಯ ಚಟುವಟಿಕೆಗಳ ಸಭೆ ಸಮಾರಂಭಗಳು.ದ್ವನಿ ವರ್ಧಕ ಬಳಸಲು ವಿಶೇಷ ಸ್ಟಾರ್ ವ್ಯಕ್ತಿಗಳಿಂದ ಕ್ಯಾಂಪನ್ ನಡೆಸಲು ಚುನಾವಣೆ ಅಧಿಕಾರಿಗಳಿಂದ ಪರವಾನಿಗೆ ಪಡೆಯತಕ್ಕದ್ದು 48 ಗಂಟೆಯೊಳಗೆ ಪರವಾನಿಗೆ ನೀಡಲಾಗುವುದು ಎಂದು ತಿಳಿಸಿದರು.
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಈಗಾಗಲೇ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಿ ಶಾಂತಿಯುತ ಚುನಾವಣೆಗೆ ಸಹಕರಿಸಬೇಕೆಂದು ಚುಣಾಧಿಕಾರಿ ಎಸ್, ರವಿ ತಿಳಿಸಿದರು.
ತಹಶೀಲ್ದಾರ್ ಜಿ ಸಂತೋಷ್ ಕುಮಾರ್ ಮಾತನಾಡಿ ಮತಗಟ್ಟೆಗೆ ಮತ ಚಲಾಯಿಸಲು ಸಾದ್ಯವಾಗದ ಹಿರಿಯ ನಾಗರೀಕರಿಗೆ ಹಾಗೂ ವಿಶಿಷ್ಟ ಚೇತನರಿಗೆ ತಮ್ಮ ಮನೆ ಅಂಗಳದಲ್ಲಿಯೆ ಮತ ಚಲಾಯಿಸಲು ಆವಕಾಶ ಕಲ್ಪಿಸಲಾಗಿದ್ದು ಈ ಸೌಲಭ್ಯ ಪಡೆಯಲು ಐದು ದಿನಗಳೊಳಗಾಗಿಯೆ ಅರ್ಜಿ ಸಲ್ಲಿಸಬೇಕು. ಈ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷದ ಮುಖಂಡರುಗಳು ಹಾಜರಿದ್ದರು.