ಜಗಳೂರು ತಾಲ್ಲೂಕಿನ ನಿವೃತ್ತ ಶಿಕ್ಷಕ ಪಿ ಶಿವಣ್ಣ ರವರ ಎರಡನೇ ಪುತ್ರಿ ಟಿ.ಎಸ್ ಮಾನಸರವರು ಬಾಗಲಕೋಟೆ ವಿ.ವಿ.ಯಲ್ಲಿ ಎಂ ಎಸ್ಸಿ. ಡಾಕ್ಟರೇಟ್ ಪದವಿಯನ್ನ ಕಾಲೇಜು ಘಟಿಕೊತ್ಸವ ದಿವ್ಯ ಸಮಾರಂಭದಲ್ಲಿ ತೋಟಗಾರಿಕೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಹಾಗೂ ವಿ ವಿ ಕುಲ ಸಚಿವರಿಂದ ಪಿ.ಎಚ್ ಡಿ ಪದವಿ ಪ್ರಮಾಣ ಪತ್ರ ಸ್ವೀಕರಿಸಿ ಸಾಧನೆಯೆಂಬ ಮೆಟ್ಟಿಲುನ್ನು ಸುಲಭವಾಗಿಸಿಕೊಂಡ ಸಾಧಕಿ.
ಡಾಕ್ಟರೇಟ್ ಪದವಿ ಗಳಿಸಿದ ಮಾನಸರವರು ಜಗಳೂರು ತಾಲ್ಲೂಕಿನ ನಿವೃತ್ತ ಶಿಕ್ಷಕ ಪಿ ಶಿವಣ್ಣ ಮತ್ತು ಬಿ ಟಿ ನಾಗರತ್ನಮ್ಮ ದಂತಿಪತಿಗಳ ಎರಡನೇ ಸುಪುತ್ರಿಯಾಗಿ ಜನಿಸಿದ ಇವರು ತನ್ನ ಪ್ರಾಥಮಿಕ ವಿಧ್ಯಾಭ್ಯಾಸವನ್ನ ನಾಲಂದ ಕಾಲೇಜಿನಲ್ಲಿ ಪೂರೈಸಿ ನಂತರ ಮುನಿರಬಾದ್ ನಲ್ಲಿ ನಾಲ್ಕು ವರ್ಷಗಳ ಕಾಲ ತೋಟಗಾರಿಕೆ ವಿಷಯದಲ್ಲಿ ಪ್ರಥಮ ಶ್ರೇಣಿಯಲ್ಲಿ ಪದವಿ ತೇರ್ಗಡೆಯಾಗಿ ನಂತರ ಗೋಕಾಕ್ ತಾಲೂಕಿನ ಅರಬಾವಿ ಸರ್ಕಾರಿ ಕಾಲೇಜಿನಲ್ಲಿ 3 ವರ್ಷಗಳ ಕಾಲ ಎಂ.ಎಸ್ಸಿ ಪದವಿಯನ್ನ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಇವರು ಚಲಬಿಡದೆ ಸತತ ಓದಿನ ಪರಿಶ್ರಮದಿಂದ ಬಾಗಲಕೋಟೆ ವಿವಿಯಲ್ಲಿ ಡಾ.ಎಂ.ಪಿ ಬಸವರಾಜಪ್ಪರವರ ಮಾರ್ಗದರ್ಶನದಲ್ಲಿ ಎಂಡೋಪೈಟ್ ಗಳ ಪರಿಶೋಧನೆ ಎಂಬ ವಿಷಯದಲ್ಲಿ ಪಿ ಎಚ್ ಡಿ ಪದವಿ ಗಳಿಸಿ ಮೊನ್ನೆ ದಿ.30_9_2024 ರಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ರವರ ಅಮೃತ ಅಸ್ತದಿಂದ ಪಿ ಎಚ್ ಡಿ ಪದವಿ ಪ್ರಮಾಣ ಪತ್ರ ಘಟಿಕೋತ್ಸವ(ಕಾನ್ವೋಕೇಷನ್ ವಿಶ್ವವಿದ್ಯಾನಿಲಯದ ಶಿಕ್ಷಣವನ್ನ ಪೂರೈಸಿ ಪ್ರಮಾಣ ಪತ್ರ ವಿತರಣ ಸಮಾರಂಭದಲ್ಲಿ ಭಾಗವಹಿಸಿ ಸ್ವೀಕರಿಸುತ್ತಾರೆ.
ಪ್ರೌಢಶಾಲಾ ಸಹಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರು ಪಿ ಶಿವಣ್ಣರವರ ಎರಡನೇ ಪುತ್ರಿ ಮಾನಸರವರು ಚಿಕ್ಕಂದಿನಿಂದಲ್ಲೆ ಪದವಿ ಗಳಿಸಬೇಕು ಎಂಬ ಮಹಾದಾಸೆಯಂತೆ ನಿರಂತರ ಸತತ ಓದಿನ ಪರಿಶ್ರಮ ಮೂಲಕ ಉತ್ತಮ ವಿದ್ಯಾಭ್ಯಾಸ ಮಾಡುವ ಮೂಲಕ ಎಂ.ಎಸ್ಸಿ ಪದವಿ ಗಳಿಸಿ ಇದೀಗ ಡಾಕ್ಟರೇಟ್ ಸ್ವೀಕರಿಸಿದ ಮಾನಸರವರಿಗೆ ಶುಭಾ ಹಾರೈಸಿದ್ದಾರೆ.
. ಇವರ ಉನ್ನತ ಪದವಿ ಶೈಕ್ಷಣಿಕ ಸಾಧನೆ ಇತರರಿಗೆ ಸ್ಪೂರ್ತಿಯಾಗಿ ತಾಲ್ಲೂಕಿಗೆ ಶಿಕ್ಷಕ ವೃಂದಕ್ಕೆ ಪೋಷಕರಿಗೆ ವಿಧ್ಯಾರ್ಥಿನಿ ತಾಲೂಕಿಗೆ ಕೀರ್ತೀ ತಂದಿರುತ್ತಾರೆ. ಶ್ರೀಯುತರು ಪ್ರಸ್ತುತದಲ್ಲಿ ಆಂದ್ರಪ್ರದೇಶದ ಶ್ರೀ ಕೃಷ್ಣ ದೇವಾರಾಯ ಕೃಷಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಲಿದ್ದಾರೆ.ಇವರ ಸಾಧನೆಗೆ ಸಂಬಂಧಿಕರು ಸ್ನೇಹಿತರು ಸಹೋದರಿಯರು ಶಿಕ್ಷಕ ವೃಂದದವರು. ಪೋಷಕರು ಶುಭಾ ಹಾರೈಸಿದ್ದಾರೆ.