ವಿಕಲಚೇತನ ಹಕ್ಕುಗಳು ಮತ್ತು ಸೌಲಭ್ಯಗಳನ್ನು ಲೋಪವಾಗದಂತೆ ಆರ್ಹ ಫಲಾನುಭಿಗಳಿಗೆ ಒದಗಿಸುವಂತೆ .
ಶಾಸಕ ಬಿ.ದೇವೇಂದ್ರಪ್ಪ ಕರೆ ನೀಡಿದರು.
ಸುದ್ದಿ ಜಗಳೂರು
ಸಮಾಜದಲ್ಲಿ ವಿಶಿಷ್ಟ ಚೇತನರನ್ನು ಪೂಜ್ಯ ಮನೋಭಾವನೆಯಿಂದ ಗೌರವಿಸಬೇಕು.
ಜಗಳೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ವಿಶೇಷ ಚೇತನರ ಜಾಗೃತಿ ಮಾಸಾಚರಣೆ ಕಾರ್ಯಕ್ರಮವನ್ನ ಉದ್ಗಾಟಿಸಿ ಅವರು ಮಾತನಾಡಿದರು.
ಅಂಗವಿಕಲರಿಗೆ ಮೂಲಭೂತ ಸೌಲಭ್ಯಗಳನ್ನು ಆಯಾ ಇಲಾಖೆ ಅಧಿಕಾರಿಗಳು ಚಾಚು ತಪ್ಪದೆ ಒದಗಿಸಿ ಪ್ರತಿ ಇಲಾಖೆಗಳಲ್ಲಿ ವಿಕಲಚೇತನರಿಗೆ ಸಹಾಯವಾಗುವಂತೆ ಇಳಿಜಾರು ಮೆಟ್ಟಿಲುಗಳನ್ನು ನಿರ್ಮಿಸುವಂತೆ ತಿಳಿಸಿದರು. ವಿಕಲಚೇತನರ 5 ಪರಿಷಂಟ್ ಅನುದಾನವನ್ನ ಲೋಪವಾಗಲು ಬಿಡುವುದಿಲ್ಲ ಮುಂದಿನ ದಿನಗಳಲ್ಲಿ ವಿಕಲಚೇತನರಿಗೆ ಸಮುದಾಯ ಭವನ ನಿರ್ಮಿಸಿ ಅವರ ಕಲ್ಯಾಣ ಕಾರ್ಯಗಳಿಗೆ ಸಹಾಯಸ್ತ ಚಾಚುವ ಮೂಲಕ ಅಭಿವೃದ್ಧಿಗೆ ಶ್ರಮಿಸೋಣ ಎಂದು ವಿಶ್ವಾಸ ವ್ಯಕ್ತಪಡಿಸಿದರು…
ಪಪಂ ಮಾಜಿ ಅಧ್ಯಕ್ಷರು ಹಾಗು ಹಾಲಿ ಸದಸ್ಯರಾದ ಆರ್ ತಿಪ್ಪೇಸ್ವಾಮಿ ಮಾತನಾಡಿದರು ವಿಕಲಚೇತನರು ಸರ್ಕಾರಿ ಸೌಲಭ್ಯಗಳನ್ನು ಪಡೆದು ಸಮಾಜದಲ್ಲಿ ಆತ್ಮಸ್ಥೈರ್ಯದಿಂದ ಬದುಕಬೇಕು.ಕೆಲ ವಿಶಿಷ್ಟ ಚೇತನರು ದುರುಪಯೋಗಪಡಿಸಿಕೊಳ್ಳಬಾರದು .ಸಮಾಜದಲ್ಲಿ ಅನೇಕ ವಿಶೇಷ ಚೇತನರು ಸಾಧಕರಾಗಿದ್ದಾರೆ.ವಿವಿಧ ಕ್ಷೇತ್ರದಲ್ಲಿ ತನ್ನದೆಯಾದ ಚಾಪು ಮೂಡಿಸಿರುತ್ತಾರೆ.ಶಾಪವಲ್ಲ ದೇವರು ಕೊಟ್ಟ ವರ ಎಂದರು.
ಜಿಪಂ ಉಪಾಕಾರ್ಯಧರ್ಶಿ ಆನಂದ ಮಾತನಾಡಿ ಪ್ರತಿ ಗ್ರಾಪಂಗಳಲ್ಲಿ ವಿಶೇಷ ಚೇತನರಿಗೆ ಇಳಿಜಾರು ಮೆಟ್ಟಿಲು ನಿರ್ಮಿಸಲು ಜಿಪಂ ವತಿಯಿಂದ ಸೂಚನೆ ನೀಡಲಾಗುವುದು . ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ವಿ ಅರ್ ಡಬ್ಲಿ ಮೂಲಕ ವಿಕಲಚೇತನರ ಅಭಿವೃದ್ಧಿಗಾಗಿ ಅವರನ್ನು ಗುರುತಿಸಿ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲು ಸಂಬಳ ಭತ್ಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಅಧಿಕಾರಿಗಳ ಮುಖೇನ ಒದಗಿಸುತಾ ಬಂದಿದ್ದೆವೆ ಎಂದರು.
ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್ ಮಾತನಾಡಿ ವಿಕಲಚೇತನರ ಪೋಷಕರು ತಮ್ಮ ವಿಶಿಷ್ಟ ಚೇತನರ ಮಕ್ಕಳನ್ನು ನಿರ್ಲಕ್ಷ್ಯಿಸಿಸಬಾರದು . ಅವರು ದೇವರ ಸಮಾನ ಪೋಷಕರು ಲಾಲನೆ ಪಾಲನೆ ಮಾಡುವ ಮೂಲಕ ಉತ್ತಮ ವಿಧ್ಯಾಭ್ಯಾಸ ಕೋಡಿಸುವಂತೆ ಸಲಹೇ ನೀಡಿದರು.
ವಿಕಲಚೇತನರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಮಹಾಂತೇಶ್ ಬ್ರಹ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು ಕ್ಷೇತ್ರದ ಶಾಸಕರ ಸಹಕಾರದಿಂದ ನಮ್ಮ ವಿಕಲಚೇತನರಿಗೆ ಸಿಗುವ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದಂತೆ ನಮಗೆ ಆತ್ಮಸ್ಥೈರ್ಯದ ಮಾತುಗಳು ನಮಗೆ ಸ್ಪೂರ್ತಿಯಾಗಿದೆ. ಎಂದರು.
ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷರಾದ ನವೀನಕುಮಾರ್.ಪಪಂ ಸದಸ್ಯರಾದ ಪಾಪಲಿಂಗಪ್ಪ.ಮಂಜಮ್ಮ..ಮುಖಂಡರಾದ ಒಮ್ಮಣ್ಣ.ಪಪಂ ನಾಮನಿರ್ದೇಶನ ಸದಸ್ಯರಾದ ಕುರಿ ಜಯ್ಯಣ್ಣ.ಸಣ್ಣತಾನಾಜಿ ಗೋಸಾಯಿ.ಡಿ ಎಸ್ ಎಸ್ ಸಂಚಾಲಕ ಕುಬೇರಪ್ಪ. ಸೇರಿದಂತೆ ಹಾಜುರಿದ್ದರು.