ಮಹಾನೀಯರ ಜಯಂತಿಗಳನ್ನು ಅಧಿಕಾರಿಗಳು ಕಡ್ಡಾಯವಾಗಿ ಆಚರಿಸಿ:ಶಾಸಕ ಬಿ.ದೇವೇಂದ್ರಪ್ಪ ತಾಕೀತು
ಜಗಳೂರು ಸುದ್ದಿ:ಮಹರ್ಷಿ ವಾಲ್ಮೀಕಿ ಸೇರಿದಂತೆ ವಿವಿಧ ಮಹಾನೀಯರ ಜಯಂತಿಯನ್ನು ಇಲಾಖೆಗಳಲ್ಲಿ ಕಡ್ಡಾಯವಾಗಿ ಅಧಿಕಾರಿಗಳು ಆಚರಿಸಲು ಶಾಸಕ ಬಿ.ದೇವೇಂದ್ರಪ್ಪ ತಾಕೀತು ಮಾಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅ.17 ರಂದು ನಡೆಯಲಿರುವ ವಾಲ್ಮೀಕಿ ಜಯಂತ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಸರ್ಕಾರದ ನಿರ್ದೇಶನದಂತೆ ಇಲಾಖೆ ಅಧಿಕಾರಿಗಳನ್ನೊಳಗೊಂಡಂತೆ ಸರಳವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಆಚರಿಸಬೇಕು.ನಂತರ ವಾಲ್ಮೀಕಿ ಸಮಾಜದವರೊಂದಿಗೆ ಚರ್ಚಿಸಿ ಅದ್ದೂರಿಯಾಗಿ ಆಚರಿಸಲು ಸೂಕ್ತನಿರ್ಧಾರಕೈಗೊಳ್ಳಲಾಗುವುದು’ಎಂದು ತಿಳಿಸಿದರು.
ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ ಮಾತನಾಡಿ,’ಸರ್ಕಾರದ ನಿರ್ದೇಶನದಂತೆ ಸರಳ ಆಚರಣೆ ನಂತರ ಶಾಲಾಕಾಲೇಜು ಗಳಲ್ಲಿ ಆಚರಿಸುವ ಮೂಲಕ ವಿದ್ಯಾರ್ಥಿಗಳಿಗೆ ಮಹಾನೀಯರ ಆದರ್ಶಗಳನ್ನು ತಿಳಿಸಲಾಗುವುದು’ ಎಂದು ಹೇಳಿದರು.
ಸಂದರ್ಭದಲ್ಲಿ ಪ.ಪಂ ಅಧ್ಯಕ್ಷ ನವೀನ್ ಕುಮಾರ್,ನಿವೃತ್ತ ಶಿಕ್ಷಕ ಪಾಲಯ್ಯಓಮಣ್ಣ, ಎಸ್ ಟಿ ಇಲಾಖೆಸಹಾಯಕ ನಿರ್ದೇಶಕ ಮಂಜುನಾಥ್,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರಪ್ಪ,ಪ.ಪಂ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ,ಮುಖಂಡರಾದ ಹಟ್ಟಿ ತಿಪ್ಪೇಸ್ವಾಮಿ,ಸೂರಗನಹಳ್ಳಿ ಕುಬೇಂದ್ರಪ್ಪ,ಸೂರಲಿಂಗಪ್ಪ,ಪಾಪಣ್ಣ,ಸೇರಿದಂತೆ ಇದ್ದರು.