ಸುದ್ದಿ ಜಗಳೂರು
ಜಗಳೂರು ಪಟ್ಟಣದ ಐತಿಹಾಸಿಕ ಬೃಹತ್ ಕೆರೆಗೆ ಸಿರಿಗೆರೆ ಶ್ರೀಗಳಿಂದ ಬಾಗಿನ ಅರ್ಪಣೆ ಕಾರ್ಯಕ್ರಮ ಜರುಗಲಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು .
ಪಟ್ಟಣದ ಕೊಟ್ಟರು ರಸ್ತೆಯ ಕೆರೆ ಬದಿಯಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಸಿದ್ದತೆ ನಡೆಸುವ ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ದಿನಾಂಕ ಅಕ್ಟೋಬರ್ 13 ರಂದು ಭಾನುವಾರ ಬೆಳಿಗ್ಗೆ 11 ಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಲಿದೆ.ಕೆರೆ ವಿಸ್ತೀರ್ಣ ಸುಮಾರು 500 ಎಕರೆ ಹೊಂದಿದ್ದು ಕೆರೆಯನ್ನು ಅಂದಿನ ಅರಸರ ಆಡಳಿತಾವಧಿಯಲ್ಲಿ ರಾಜ ಮತ್ತಿ ತಿಮ್ಮಣ್ಣ ನಾಯಕ ಕಟ್ಟಿಸಿದ ಕೆರೆ ಸುಮಾರು 50 ವರ್ಷಗಳ ನಂತರ ಕೆರೆ ಕೋಡಿ ಬಿದ್ದಿದ್ದು ಇದೊಂದು ಸುದೈವ ದಸರಮೋಹತ್ಸವ ದಿನದಂದೆ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಜಗಳೂರಿನ ಜನತೆ ಪಾಲಿಗೆ ಸೃಷ್ಠಿಕರ್ತ ದೇವರು ಗಂಗೆಯನ್ನೆ ಹರಿಸಿದಂತಾಗಿದೆ .
ಇನ್ನು ತಾಲೂಕಿನ ಅನೇಕ ಕೆರೆಗಳು ತುಂಬಿ ಕೋಡಿ ಬಿದ್ದು ಹರಿಯುತ್ತಿವೆ ಸಿರಿಗೆರೆ ಶ್ರೀಗಳ ಅಶಿರ್ವಾದದಿಂದ ಸರ್ಕಾರಗಳ ಶ್ರಮ ಹಾಗೂ ಅಂದಿನ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ. ಕುಮಾರಸ್ವಾಮಿ.ಹಾಗೂ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ.ಮತ್ತು ಮಾಜಿ ಸಚಿವ ಎಚ್ ಆಂಜನೇಯ. ಮಾಜಿ ಶಾಸಕರಗಳು.ಮತ್ತು ಇನ್ನಿತರೆ ಜನಪ್ರತಿನಿಧಿಗಳ ಶ್ರಮದಿಂದ 57 ಕೆರೆ ತುಂಬಿಸುವ ಯೋಜನೆಡಿ ಯಶಸ್ವಿಯಾಗಿ ತುಂಗಾಭದ್ರ ನದಿ ನೀರಿನ ಮೂಲಕ ಹಾಗೂ ವರುಣನ ಕೃಪೆಯಿಂದ ಇದೀಗ ಕೆರೆ ತುಂಬಿರುವುದರಿಂದ ಶ್ರೀಗಳ ಅಮೃತ ಅಸ್ತದಿಂದ ಬಾಗಿನ ಅರ್ಪಿಸುವ ಕಾರ್ಯಕ್ರಮ ಹಾಗೂ ವೇದಿಕೆ ಕಾರ್ಯಕ್ರಮ ಜರುಗಲಿದೆ
.ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ. ಜಿಲ್ಲಾ ಸಂಸದೆ ಪ್ರಭಾಮಲ್ಲಿಕಾರ್ಜನ್. ಮಾಜಿ ಶಾಸಕರುಗಳಾದ ಎಸ್.ವಿ ರಾಮಚಂದ್ರಪ್ಪ.ಎಚ್ ಪಿ ರಾಜೇಶ್ ಸೇರಿದಂತೆ ವಿವಿಧ ಗಣ್ಯರು ಹಾಗೂ ಅಧಿಕಾರಿಗಳು ಪಾಲ್ಗೊಲಿದ್ದಾರೆ. ಕಾರ್ಯಕ್ರಮಕ್ಕೆ ಮುನ್ನ ಮಹಿಳೆಯರಿಂದ ಕುಂಭಮೇಳ ವಾದ್ಯಗೋಷ್ಠಿಯೊಂದಿಗೆ ಶ್ರೀಗಳನ್ನು ಬರಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಎಸ್ ಟಿ.ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಡಿ ಕೀರ್ತೀಕುಮಾರ್. ಮುಖಂಡರಾದ ಎನ್ ಎಸ್.ರಾಜಣ್ಣ.ಶಿವನಗೌಡ್ರು. .ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆಂಚಪ್ಪ.ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್. ಗುತ್ತಿಗೆದಾರ ದೀಪಕ್ ಪಾಟಿಲ್.ಕೆಚ್ಚೆನಹಳ್ಳಿ ಹರೀಶ್.ಪಪಂ ಸದಸ್ಯರಾದ ರಮೇಶ್ ರೆಡ್ಡಿ. ಕಾಂಗ್ರೆಸ್ ಎಸ್ ಸಿ. ಘಟಕದ ತಾಲ್ಲೂಕು ಅಧ್ಯಕ್ಷ ಮಹೇಶ್ವರಪ್ಪ. ಪಲ್ಲಾಗಟ್ಟೆ ಶೇಖರಪ್ಪ.ಮಹಮದ್ ಗೌಸ್ .ಕಲೀಲಣ್ಣ.. ಶಾಸಕರ ಅಪ್ತ ಸಹಾಯಕ ಮಧು. ಸೇರಿದಂತೆ ಮುಂತಾದವರು ಹಾಜುರಿದ್ದರು.