ಅನ್ಯಾಯದ ವಿರುದ್ದ ಸದಾ ದ್ವನಿ ಎತ್ತುವ ಮೂಲಕ ಕನ್ನಡ ನಾಡು ನುಡಿ ಸೇವೆಗೆ ಯುವ ಕರ್ನಾಟಕ ವೇದಿಕೆ ಬೀದಿಗೆ ನಿಂತು ಹೋರಾಟ ಮಾಡುವಂತೆ ರಾಜ್ಯಾಧ್ಯಕ್ಷ ರೂಪೇಶ್ ರಾಜಣ್ಣ ಕರೆ ನೀಡಿದರು.

ಸುದ್ದಿ ಜಗಳೂರು

ಜಗಳೂರು ಪಟ್ಟಣದ ಬಯಲು ರಂಗಮಂದಿರ ವೇದಿಕೆಯಲ್ಲಿ ಯುವ ಕರ್ನಾಟಕ ವೇದಿಕೆ ವತಿಯಿಂದ ದಿನಾಂಕ ನವೆಂಬರ್ 9 ರಂದು ಆಯೋಜಿಸಲಾಗಿದ್ದ 69 ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಪದಾಧಿಕಾರಿಗಳ ಪದಗ್ರಹಣ ಮತ್ತು ಶೈನಿಂಗ್ ಸ್ಟಾರ್ ಮೇಲೊಡಿಸ್ ವತಿಯಿಂದ ರಸಮಂಜರಿ ಕಾರ್ಯಕ್ರಮವನ್ನ ಉದ್ಗಾಟನೆ ಮಾಡಿ ನಂತರ ವೇದಿಕೆಯನ್ನುದ್ದೇಶಿಸಿ ಮಾತನಾಡಿದರು ಪ್ರಸ್ತುತದಲ್ಲಿ ಪರಭಾಷೆ ವ್ಯಾಮೋಹದಿಂದ ಕನ್ನಡ ಭಾಷೆ ಆಪತ್ತಿನಲ್ಲಿದ್ದು ಕನ್ನಡ ನಾಡು ನುಡಿ ಕಲೆ ಸಂಸ್ಕೃತಿ ಉಳಿವಿಗೆ ಪ್ರತಿಯೊಬ್ಬರು ಕನ್ನಡ ಪದ ಬಳಕೆ ಮಾಡುವ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡೋಣ ನಾನು ಬಿಗ್ ಬಾಸ್ ಮನೆಗೆ ಹೋದಾಗ ಅಲ್ಲಿ ಕೇವಲ ಪರಭಾಷೆ ಬಳಕೆಯಿತ್ತು ಅದನ್ನು ಖಂಡಿಸಿ ಕನ್ನಡ ಭಾಷೆ ಬಳಸಲು ದ್ವನಿ ಎತ್ತಿದ್ದು ನಮ್ಮ ಯುವ ಘಟಕ ಇಂತ ಹತ್ತು ಹಲವು ಹೋರಾಟಗಳನ್ನು ಮಾಡುವುದರ ಜೊತೆಗೆ ಸಂಘಟನೆ ರಾಜ್ಯಾದ್ಯಂತ ವಿಸ್ತರಣೆಯಾಗಿ ಇದೀಗ ಜಗಳೂರಿನ ಜನತೆಯ ಮಡಿಲಿಗೆ ಹಾಕಿದ್ದು ನಮ್ಮ ಯುವ ಕರ್ನಾಟಕ ವೇದಿಕೆ ಪದಾಧಿಕಾರಿಗಳಿಗೆ ಕ್ಷೇತ್ರದ ಶಾಸಕರು ಹಾಗೂ ಸಾರ್ವಜನಿಕರು ಸಹಕಾರ ನೀಡುವಂತೆ ಸಲಹೇ ನೀಡಿದರು. ನಮ್ಮ ಸಂಘಟಕರು ಎಲ್ಲಾ ವರ್ಗದ ಜನರಿಗೆ ನ್ಯಾಯ ಕೋಡಿಸಲು ಅನ್ಯಾಯದ ವಿರುದ್ದ ದ್ವನಿ ಎತ್ತಲು ಹಿಂಜರಿಕೆ ಬೇಡ ಹೋರಾಟಕ್ಕೆ ಸಿದ್ದರಾಗುವಂತೆ ತಿಳಿಸಿದರು.

ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ ವೇದಿಕೆ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು ಭಾರತ ದೇಶದಲ್ಲಿಯೆ ಕನ್ನಡ ಭಾಷೆಗೆ ವಿಶೇಷವಾದ ಸ್ಥಾನಮಾನವಿದ್ದು ಕನ್ನಡದ ವೈಶಿಷ್ಟ್ಯ ಪರಂಪರೆಯನ್ನ ಸಾರುವ ನಿಟ್ಟಿನಲ್ಲಿ ಉತ್ತಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಈ ಸಮಿತಿ ಸಂಘಟಕರು ಕುರ್ಚಿಗೆ ಬಯಸುವವರಲ್ಲ ಸೇವೆ ಬಯಸುವ ಸೇನಾನಿಗಳು ನಾವು ಕೂಡ ಸದಾ ನಿಮ್ಮ ಉತ್ತಮ ಹೋರಾಟಗಳಿಗೆ ಕೈಜೋಡಿಸುವೆ ಕನ್ನಡಕ್ಕೆ ಆಪತ್ತು ಬಂದರೆ ನನ್ನ ಶಾಸಕತ್ವದ ಅಧಿಕಾರವನ್ನ ಪಕ್ಕಕ್ಕೆಯಿಟ್ಟು ಹೋರಾಟ ಮಾಡುವೆ ಎಂದರು .ಯುವ ಕರ್ನಾಟಕ ವೇದಿಕೆ ಗೌರವಾಧ್ಯಕ್ಷ ಬರಕತ್ ಆಲಿವರು ಜೈ ಭಾರತ್ ಟ್ರಸ್ಟ್ ನೊಂದಿಗೆ ಯುವಕರ ತಂಡ ಕಟ್ಟಿಕೊಂಡು ಜನಪಯೋಗಿ ಸೇವೆ ಸಾರ್ಥಕವಾಗಿದೆ .ಪ್ರಥಮದಲ್ಲಿ ಒಂದು ಆಂಬುಲೇನ್ಸ್ ಬಿಟ್ಟು ಉತ್ತಮ ಸೇವೆ ನೀಡುವ ಮೂಲಕ ಇದೀಗ ಮತ್ತೊಂದು ಅಂಬುಲೇನ್ಸ್ ಬಿಡಗಡೆ ಮಾಡಿ ಕ್ಷೇತ್ರದ ಜನತೆಗೆ ಜನಸ್ನೇಹಿಯಾಗಿ ಪರೋಪಕಾರಿ ಸೇವೆಯೆ ಹೃದಯ ಸ್ಪರ್ಶಿಯಾಗಿದೆ .
ನಿರಾಶ್ರಿತರ ಕೇಂದ್ರದ ಯೋಗೇಶ್ 148 ಅನಾಥ ವೃದ್ದರ ಸೇವೆ ಮಾಡುವ ಮೂಲಕ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ ಪ್ರಸ್ತುತದಲ್ಲಿ ಈ ರೀತಿ ಸೇವೆ ಮಾಡುವರ ಸಂಖ್ಯೆ ವಿರಳ ಹೇಳುವವರ ಸಂಖ್ಯೆ ಹೆಚ್ಚಾಗಿದೆ.ಸಮಾಜಮುಖಿ ಕೆಲಸ ಮಾಡುವಂತ ಯುವಕರು ಕೆಲವರು ಮಾಡುವ ನಿಂದನೆಗೆ ಅಪಹಾಸ್ಯ ಮಾಡುವವರಿಗೆ ಬೆಲೆ ಕೊಡಬೇಡಿ ನಿಮ್ಮ ಸಾಧನೆ ಹಾದಿ ಕಡೆ ಸಾಗುವಂತೆ ಕಿವಿ ಮಾತು ಹೇಳಿದರು ನಾನು ಒಂದು ಸಾರಿ ನಿಮ್ಮ ಆಶ್ರಮಕ್ಕೆ ಭೇಟಿ ನೀಡಿ ಆಶ್ರಮದಲ್ಲಿ ಒಂದು ದಿನ ನಮ್ಮ ಯುವ ಕರ್ನಾಟಕ ವೇದಿಕೆ ತಂಡದೊಂದಿಗೆ ಬೃಷ್ಠಾನ ಭೋಜನದ ಸೇವೆ ಮಾಡಲು ಆವಕಾಶ ನೀಡುವಂತೆ ತಿಳಿಸಿದರು.

ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಪಿ.ಮೂರ್ತಿ ಮಾತನಾಡಿ ಕನ್ನಡ ನಾಡು ನುಡಿ ಸೇವೆ ಮಾಡುವ ಯುವಕರು‌ ಹೋರಾಟದ ಮನೋಭಾವನೆ ಬೆಳೆಸಿಕೊಳ್ಳಿ ಅನ್ಯಭಾಷೆಗರ ದಬ್ಬಾಳಿಕೆ ವಿರುದ್ದ ದ್ವನಿ ಎತ್ತಿ ನಮ್ಮ ಸಂಯುಕ್ತ ಸಂಘಟನೆ ಬೆಂಬಲ ಸದಾ ನಿಮ್ಮ ಜೊತೆಗಿದ್ದೆವೆ .ಸಂವಿಧಾನ ಶಿಲ್ಪಿ‌ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ರವರ ಸಂವಿಧಾನದ ತಳಹದಿಯ ಮೇಲೆ ಆಡಳಿತ‌ ನಡೆಸುವ ಸರ್ಕಾರಗಳು ಕನ್ನಡಿಗರಿಗೆ ಉದ್ಯೋಗ ಸೃಷ್ಠಿಸುವಂತ ಕೆಲಸವಾಗಬೇಕು.ನಾಡು ನುಡಿ ನೆಲ ಜಲ ಪ್ರಾಂತ್ಯದಲ್ಲಿ ವಾಸಿಸುವ ಪರಭಾಷೆಗರು ಕನ್ನಡ ಮಾತನಾಡಿ ಈ ನೆಲದ ಭಾಷೆಗೆ ಗೌರವಿಸಬೇಕು.ಇದೀಗ ದೇಶದಲ್ಲಿ ಸಂವಿಧಾನವೆಂವ ಅಸ್ತ್ರದಿಂದ ಪ್ರತಿ ವರ್ಗದ ಜನರು ಬದುಕು ಬದಲಾಗಿದೆ.ಅಂದು ಅಂಬೇಡ್ಕರ್ ರವರಿಗೆ ಅಸ್ಪೃಶ್ಯತೆ ಆಚರಣೆ ಮಾಡಿ ಶಾಲಾ ಆವರಣದಲ್ಲಿ ಸರಿಸಮನಾಗಿ ಕಾಣದೆ ಅವಮಾನ ಮಾಡಿ ದೂರ ಕೂರಿಸಲಾಗುತ್ತಿತ್ತು . ಅಂಬೇಡ್ಕರ್ ರವರು ಮನೆಯಿಂದ ಗೋಣಿಚೀಲ ತಂದು ಅದರ ಮೇಲೆ ಕುಳಿತು ಶಿಕ್ಷಣ ಕಲಿತು ಕಡುಕಷ್ಠದಿಂದ ಓದಿ ದೇಶಕ್ಕೆ ಸಂವಿಧಾನ ರಚಿಸಿದರು ಯಾವ ಜನ ಅವಮಾನದಿಂದ ಕಂಡಂತ ದೇಶದ ಜನರ ಹಣೆಬರಹವನ್ನೆ ಬದಲಾಯಿಸಿದ ಮಹಾನಾಯಕನೆ ವಿಶ್ವದ ಜ್ಘಾನಿಯಾಗಿದ್ದಾರೆ. ಆದ್ದರಿಂದ ರೂಪೇಶ್ ರಾಜಣ್ಣ ನೇತೃತ್ವದ ಯುವ ಕರ್ನಾಟಕ ವೇದಿಕೆ ದಲಿತಪರ‌ ರೈತಪರ ಸಾಮಾನ್ಯರ ಪರವಾದ ನಿಲುವಿನ ಹೋರಾಟಕ್ಕೆ ಅಣಿಯಾಗಲಿದೆ ಕೈಜೋಡಿಸುವಂತೆ ಕರೆ ನೀಡಿದರು..

ಈ ಸಂದರ್ಭದಲ್ಲಿ ಜನಸ್ನೇಹಿ ನಿರಾಶ್ರಿತರ ಕೇಂದ್ರ ಯೋಗೇಶ್ ಮಾತನಾಡಿದರು ಸೂರ್ಯ .ಚಂದ್ರ.ಗಾಳಿ.ಬೆಳಕಿಗೆ ಇಲ್ಲದ ಜಾತಿ ಮನುಷ್ಯರಾದ ನಮಗೆ ಜಾತಿ ಸೃಷ್ಠಿಸಿ ತಾರತಮ್ಯಧೋರಣೆ ಹುಟ್ಟು ಹಾಕಿದ ಮೂಲಭೂತವಾದವನ್ನ ಕಿತ್ತೆಸೆದು ಕನ್ನಡವೆ ಜಾತಿ ಭಾರತವೆ ನನ್ನ ಮನುಷ್ಯ ಜಾತಿ ಎಂದು ಮಾನವೀಯತೆ ಮೆರೆಯಬೇಕು. ನಾನು ಕೇವಲ 7 ನೇ ತರಗತಿ ಓದಿದ ಸಾಮಾನ್ಯ ಯುವಕ‌ ನನ್ನ ಸ್ವಂತದಿಂದ ಆಶ್ರಮ ಕಟ್ಟಿ ಬೆಳೆಸಿ ಇದೀಗ 148 ಅನಾಥರುನ್ನು ಸಾಕುತ್ತಿದ್ದು ಅವರ ಲಾಲನೆ ಪಾಲನೆ ಮಾಡುವ ಕಾರ್ಯವೆ ನನಗೆ ದೇವರ ಕಾರ್ಯವೆಂದು ಭಾವಿಸುವೆ .ಪ್ರಸ್ತುತದಲ್ಲಿ ಮಾನವೀಯತೆ ಮರೆಯಾಗಿ ಹೆತ್ತವರನ್ನು ಕೆಲವರು ಬೀದಿಗೆ ತಳ್ಳುತ್ತಾರೆ ಅಂತ‌ ಅನಾಥ ವೃದ್ದರನ್ನು ಕರೆ ತಂದು ಊಟ ವಸತಿ ನೀಡಿ ಪೋಷಣೆ ಮಾಡುಲಾಗುತ್ತಿದೆ ಆದರೆ‌ ಕೆಲವರು ನನ್ನ ಮೇಲೆ ಆಪಾಧನೆ ಮಾಡಿ ಕ್ಷುಲ್ಲಕದಿಂದ ನಿಂದಿಸಿ ನನ್ನ ಬೆಳವಣಿಗೆ ಸಹಿಸುತ್ತಿಲ್ಲ ನಾನು ನಿಂದಕರ ಮುಂದೆ ಬೆಳೆದು ನಿಲ್ಲುವ ದಿಟ್ಟತನವಿದೆ .ಸಮಾಜದಲ್ಲಿ ಉತ್ತಮ ಕೆಲಸ ಮಾಡುವವರಿಗೆ ಸಹಾಯಸ್ತ ಚಾಚಿ ಇಲ್ಲ ಕೈಲಾಗದಿದ್ದರೆ ಸುಮ್ಮನೆ ನೋಡಿ ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಕೋರ ಚಲನಚಿತ್ರ ತಂಡದ ನಾಯಕ ನಟ ನಿರ್ಮಾಪಕ ಪಿ. ಮೂರ್ತಿ.ಸುನಾಮಿ ಕಿಟ್ಟಿ. ಗೋವಿಂದಗೌಡ. ಮಾಜಿ ಜಿಪಂ ಸದಸ್ಯ ಕೆ.ಪಿ ಪಾಲಯ್ಯ.ಕಾಂಗ್ರೆಸ್ ಎಸ್ ಸಿ ಘಟಕದ ಅಧ್ಯಕ್ಷ ಬಿ.ಮಹೇಶ್ವರಪ್ಪ.ವಕೀಲರ ಸಂಘದ ತಾಲ್ಲೂಕು ಅದ್ಯಕ್ಷ ಮರೆನಹಳ್ಳಿ ಬಸವರಾಜ್. ಪಪಂ ಅಧ್ಯಕ್ಷರಾದ ನವೀನ್ ಕುಮಾರ್. ಪಪಂ ಸದಸ್ಯರಾದ ಲುಖ್ಮಾನ್ ಖಾನ್. ಪಾಪಲಿಂಗಪ್ಪ.ಶಕೀಲ್ ಆಹಮದ್. ಕಾಯಿ ರೇವಣ್ಣ.ಹನುಮಂತಪ್ಪ. ಯುವ ಘಟಕದ ರಾಜ್ಯ ಪದಾಧಿಕಾರಿಗಳಾದ ಮಂಜು.ಚೇತನ್. ಸೇರಿದಂತೆ ಜಗಳೂರು ಯುವ ಕರ್ನಾಟಕ ವೇದಿಕೆ ಗೌರವ ಅದ್ಯಕ್ಷ ಬರಕತ್ ಆಲಿ. ತಾಲ್ಲೂಕು ಅದ್ಯಕ್ಷ ಬಂಗಾರಕ್ಕನಗುಡ್ಡದ ಮಲ್ಲಿಕಾರ್ಜುನ.ಉಪಾಧ್ಯಕ್ಷ ಮರೆನಹಳ್ಳಿ ನಾಗರಾಜ. ಜಿ.ಟಿ. ಸಂಚಾಲಕರಾದ ನರಸಿಂಹಮೂರ್ತಿ.ನಜೀರ್ ಆಹಮದ್.ಗುರುಕಿರಣ್. .ಶ್ರೀಕಾಂತ.ರಮೇಶ್ ಸೇರಿದಂತೆ ಪದಾಧಿಕಾರಿಗಳು ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!