ಶಾಸಕ.ಬಿ.ದೇವೇಂದ್ರಪ್ಪ ಜಿನಿಗಿಹಳ್ಳದ ಬ್ರಿಡ್ಜ್ ಕಂ ಬ್ಯಾರೇಜ್ ನ ನೀರಿನ ಒಳಹರಿವು ವೀಕ್ಷಣೆ
ಜಗಳೂರು ಸುದ್ದಿ:ತಾಲೂಕಿನ ಸಿದ್ದಿಹಳ್ಳಿ ಗ್ರಾಮದ ಬಳಿ ₹4ಕೋಟಿ ವೆಚ್ಚದ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ಪೂರ್ಣಗೊಂಡು ನೀರು ಹರಿಯುತ್ತಿರುವುದನ್ನು ಶಾಸಕ.ಬಿ.ದೇವೇಂದ್ರಪ್ಪ ಅವರು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಅವರು,ನಿಗದಿತ ಸಮಯದಲ್ಲಿ ಪೂರ್ಣಗೊಂಡ ಬ್ರಿಡ್ಜ್ ಕಂ ಬ್ಯಾರೇಜ್ ನಿಂದ ತೊರೆಸಾಲಿನ ಭಾಗದಲ್ಲಿ ಜಿನಿಗಿ ಹಳ್ಳದ ನೆರೆಹೊರೆಯ ಗ್ರಾಮಗಳ ಜಮೀನಿನಲ್ಲಿ ಬೋರ್ ವೆಲ್ ಅಂತರ್ಜಲ ಹೆಚ್ಚಳವಾಗುವುದಲ್ಲದೆ.ಜನಜಾನುವಾರುಗಳಿಗೆ ಜಲದಾಹ ತೀರಿಸುತ್ತದೆ.ಸೇತುವೆ ಮೇಲೆ ಸುಗಮ ರಸ್ತೆ ಸಂಚಾರ ನಡೆಸಬಹುದು.ಆದ್ದರಿಂದ ಕಾಮಗಾರಿ ಹಂತದಲ್ಲಿರುವಾಗ ಭೇಟಿ ನೀಡಿ ಗುತ್ತಿಗೆದಾರರಿಗೆ ಇಂಜಿನಿಯರ್ ಗಳಿಗೆ ತ್ವರಿತಗತಿಯಲ್ಲಿ ಗುಣಮಟ್ಟದ ಕಾಮಗಾರಿ ನಿರ್ಮಿಸಲು ಖಡಕ್ ಎಚ್ಚರಿಕೆ ನೀಡಲಾಗಿತ್ತು ಎಂದರು.
ಪ್ರಸಕ್ತವಾಗಿ ಅತಿವೃಷ್ಟಿಯಿಂದ ಜಿನಿಗಿ ಹಳ್ಳಮೈದುಂಬಿ ಹರಿಯುತ್ತಿದೆ.ಈ ಭಾಗದ ರೈತರಲ್ಲಿ ಮಂದಹಾಸ ಮೂಡಿದೆ ಎಂದರು.
ಸಂದರ್ಭದಲ್ಲಿ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್ ಮುಖಂಡರಾದ ಬಿ.ಮಹೇಶ್ವರಪ್ಪ,ಗೌಸ್ ಪೀರ್,ತಿಪ್ಪೇಸ್ವಾಮಿ,ಮಾಜಿ ಮಂಜುನಾಥ್,ಗಿಡ್ಡನಕಟ್ಟೆ ಕಾಂತರಾಜ್,ಸೇರಿದಂತೆ ಇದ್ದರು.