ಶೀಘ್ರವೆ ಕೆ.ಎಸ್ ಆರ್ ಟಿಸಿ ಬಸ್ ಡಿಪೋ ಸ್ಥಾಪನೆ ಮಾಡುವಂತೆ ವಿಧ್ಯಾರ್ಥಿಗಳು ಪ್ರತಿಭಟನೆ ನಡೆಸಿ ಒತ್ತಾಯಿಸಿದರು
ಜಗಳೂರು ಸುದ್ದಿ:
ಜಗಳೂರಿನಲ್ಲಿ ಕೆ.ಎಸ್ ಆರ್ ಟಿ.ಸಿ ಡಿಪೋ ಸ್ಥಾಪನೆ ಮಾಡುವಂತೆ ಒತ್ತಾಯಿಸಿ ಎಸ್ ಎಫ್ ಐ ವಿಧ್ಯಾರ್ಥಿ ಸಂಘಟನೆ ಹಾಗೂ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಗ್ರಹಿಸಿದರು..
ಪ್ರತಿಭಟನೆಕಾರರು ಗುರುವಾರ ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ನೂರಾರು ಸಂಖ್ಯೆಯ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಘೋಷಣೆ ಕೂಗುತ್ತಾ ಮಹಾತ್ಮಗಾಂಧಿ ವೃತ್ತದ ಮೂಲಕ ಅಂಬೇಡ್ಕರ್ ವೃತ್ತದಿಂದ ತಾಲೂಕು ಕಛೇರಿ ಆವರಣದಲ್ಲಿ ಜಮಾಯಿಸಿ ಒಂದು ಗಂಟೆಗೂ ಅಧಿಕ ಕಾಲ ಕುಳಿತು ನಮ್ಮ ಮೂಲ ಬೇಡಿಕೆ ಈಡೇರಿಕೆ ಹಿಡೇರಿಸುವಂತೆ ಆಗ್ರಹಿಸಿ ನಂತರ ಗ್ರೇಡ್ -2 ತಹಶೀಲ್ದಾರ್ ಮಂಜಾನಂದ ಮತ್ತು,ಕೆ ಎಸ್ ಆರ್ ಟಿಸಿ ಡಿ ಎಂ ಕುಮಾರ್ ಅವರಿಗೆ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಎಸ್ ಎಫ್ ಐ ರಾಜ್ಯ ಮುಖಂಡ ಅನಂತರಾಜ್ ಮಾತನಾಡಿ,’ಕಳೆದ ದಶಕಗಳಿಂದ ಕೆ ಎಸ್ ಆರ್ ಟಿಸಿ ಬಸ್ ಡಿಪೋ ಆರಂಭಕ್ಕೆ ನಿರಂತರ ಹೊರಾಟ ನಡೆಸಲಾಗಿತ್ತು.ಕಳೆದ ಅವಧಿಯ ಆಡಳಿತ ಸರ್ಕಾರಗಳು ಹಾಗೂ ಕೆ.ಎಸ್ ಆರ್ ಟಿಸಿ ಅಧಿಕಾರಿಗಳು ಪಟ್ಟಣದ ಹೊರ ಹೊಲಯದಲ್ಲಿ ಸರ್ವೆ ನಂ.51/4 ರಲ್ಲಿ ಸರ್ಕಾರಿ ಜಮೀನಿನಲ್ಲಿ ಜಾಗವನ್ನು ಗುರುತಿಸಿ ಕಂದಾಯ ಇಲಾಖೆಯಿಂದ ಪಹಣಿ ಹಸ್ತಾಂತರಿಸಿ ಸುಮಾರು ಒಂದು ವರ್ಷಕ್ಕೆ ಕಳೆದರು ಸಹ ಯಾವುದೇ ಕಾಮಗಾರಿ ಮಾಡಿರುವುದಿಲ್ಲ ಎಂದು ಆರೋಪಿಸಿದರು..ಆದರೆ ಇದುವರೆಗೂ ಯಾವುದೇ ಕಾಮಗಾರಿಗೆ ಚಾಲನೆ ಸಿಗದೆ ದಿವ್ಯ ನಿರ್ಲಕ್ಷ್ಯ ವಹಿಸಿರುವುದು ವಿದ್ಯಾರ್ಥಿ ಸಮೂಹ ಸರ್ಕಾರಿ ಬಸ್ ಸೌಕರ್ಯದಿಂದ ವಂಚಿತರನ್ನಾಗಿಸಿರುವುದು’. ಖಂಡನೀಯ ಶೀಘ್ರವೆ ಬಸ್ ಡಿಪೊ ಸ್ಥಾಪನೆ ಮಾಡಿ ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.
ಕರುನಾಡ ನವನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಮಾತನಾಡಿ,’ತಾಲೂಕಿನ ಅನೇಕ ಹಳ್ಳಿಗಳು ಸರ್ಕಾರಿ ಬಸ್ ಸಂಪರ್ಕವಿಲ್ಲದೆ ಪ್ರತಿನಿತ್ಯ ವಿದ್ಯಾರ್ಥಿಗಳು ಕಾಲೇಜುಗಳಿಗೆ ಸಕಾಲದಲ್ಲಿ ಆಗಮಿಸದೆ ಪಾಠ ಪ್ರವಚನಗಳಿಗೆ ಅಡಚಣೆಯಾಗುತ್ತಿರುವುದಲ್ಲದೆ.ಕೂಡಲೇ ಕೆಎಸ್ ಆರ್ ಟಿಸಿ ಅಧಿಕಾರಿಗಳಿಗೆ ಕಳೆದ ವರ್ಷ ಸಲ್ಲಿಸಿದ ಮಾರ್ಗಗಳ ಅನ್ವಯ ತಾತ್ಕಾಲಿಕವಾಗಿ 5. ಬಸ್ ಗಳನ್ನು ಗ್ರಾಮೀಣ ಸಾರಿಗೆಗೆ ಓಡಿಸಬೇಕು ಎಂದು ಒತ್ತಾಯಿಸಿದರು.
ಎಐಟಿಯುಸಿ ಪ್ರಧಾನಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ್ ಮಾತನಾಡಿ,’ಪ್ರಸಕ್ತವಾಗಿ ಬರದ ನಾಡಿನಲ್ಲಿ ಅತಿವೃಷ್ಠಿಯಿಂದ ರೈತರು,ಕೂಲಿ ಕಾರ್ಮಿಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು.ಪೋಷಕರು ಮಕ್ಕಳ ವ್ಯಾಸಂಗಕ್ಕೆ ದುಬಾರಿ ಶೈಕ್ಷಣಿಕ ಶುಲ್ಕ ಭರಿಸಲಾಗಿದೆ ವಿದ್ಯಾರ್ಥಿಗಳು ಶಿಕ್ಷಣದಿಂದ ವಿಮುಖರಾಗುತ್ತಿದ್ದಾರೆ.ಇಂತಹ ಪರಿಸ್ಥಿತಿಯಲ್ಲಿ ಪ್ರತಿನಿತ್ಯ ಕಾಲೇಜುಗಳಿಗೆ ತೆರಳಿ ಖಾಸಗಿ ಬಸ್,ಆಟೋಗಳಿಗೆ ಹಣ ಭರಿಸುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಡಿಎಸ್ ಎಸ್ ಸಂಚಾಲಕ ಸತೀಶ್ ಮಲೆಮಾಚಿಕೆರೆ ಮಾತನಾಡಿ’,ತಾಲೂಕಿನಲ್ಲಿ ಪರಿಶಿಷ್ಟ,ಹಿಂದುಳಿದ ಬಡ ವರ್ಗದವರೇ ಅಧಿಕ ಸಂಖ್ಯೆಯಲ್ಲಿ ವಾಸವಿದ್ದು.ಉಳ್ಳವರು ನಗರಪ್ರದೇಶಗಳಲ್ಲಿ ಮಕ್ಕಳ ವಿದ್ಯಾಭ್ಯಾಸ ಕೊಡಿಸುತ್ತಾರೆ.ಆದರೆ ಬಡಜನರು ಪಟ್ಟಣದ ಕಾಲೇಜುಗಳನ್ನೇ ಅವಲಂಬಿಸಿದ್ದು 15 ದಿನಗಳೊಳಗೆ ಸರ್ಕಾರಿ ಗ್ರಾಮೀಣ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು.ಇಲ್ಲವಾದರೆ ಉಗ್ರ ಸ್ವರೂಪದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಸಂದರ್ಭದಲ್ಲಿ ವಕೀಲ ಆರ್ ಓಬಳೇಶ್, ಎಸ್ ಎಫ್ ಐ ತಾಲೂಕು ಅಧ್ಯಕ್ಷ ವಕೀಲ ತಮಲೇಹಳ್ಳಿ ಅಂಜಿನಪ್ಪ, ರೈತ ಸಂಘಟನೆ ಮುಖಂಡರಾದ ಕುಮಾರ್,ಲೋಕೇಶ್,ಡಿಎಸ್ ಎಸ್ ನ ಸತ್ಯಮೂರ್ತಿ,ಅಸಗೋಡು ಶಿವಕುಮಾರ್,ವಿದ್ಯಾರ್ಥಿಗಳಾದ ಅಶೋಕ,ಕಾಟಪ್ಪ,ಸುನಿತಾ,ಚಿತ್ತಪ್ಪ,ಓಬಳೇಶ್,ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.