ಸಾರ್ವಜನಿಕರು ವಂಚಕರಿಂದ ಜಾಗೃತರಾಗಬೇಕಾಗಿದೆ :ಐಜಿಪಿ ರಮೇಶ್ ಬಾನೋತ್ ಕಿವಿಮಾತು
ಜಗಳೂರು : ಸಾರ್ವಜನಿಕರು ಅನ್ ಲೈನ್ ವಂಚಕರಿಂದ ಎಚ್ಚರಿಕೆ ವಹಿಸಬೇಕು ಪೂರ್ವವಲಯ ಐಜಿಪಿ ರಮೇಶ್ ಬಾನೋತ್ ಹೇಳಿದರು
ಶುಕ್ರವಾರ ಪಟ್ಟಣದ ಜಗಳೂರು ಪೋಲಿಸ್ ಠಾಣೆಗೆ ದಿಢೀರನೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದರು , ಇತ್ತೀಚಿನ ದಿನಮಾನಗಳಲ್ಲಿ ಸಾರ್ವಜನಿಕರು ಅನ್ ಲೈನ್ ವಂಚನೆಗೆ ಬಲಿಯಾಗುತ್ತಿರುವ ಪ್ರಕರಣಗಳು ಪ್ರತಿ ನಿತ್ಯ ನಮ್ಮ ಠಾಣೆಗಳಲ್ಲಿ ಹೆಚ್ಚಾಗಿ ದಾಖಲಾಗುತ್ತಿದ್ದು ಸಾರ್ವಜನಿಕರು ಅಂತವರಿಂದ ಎಚ್ಚರಿಕೆಯಿಂದ ಇರುವಂತೆ ತಿಳಿಸಿದರು ಅನಾಮೆದೆಯ ಯಾವುದೋ ಕರೆಗಳನ್ನ ಮಾಡಿ ನಿಮಗೆ ಇಲ್ಲ ಸಲ್ಲದ ಆಸೆ ಆಮಿಷವೊಡ್ಡಿ ಹಣ ಡಬಲ್ ಖಾತೆಗೆ ಜಮಾವಾಗುತ್ತದೆ ಎಂದು ನಂಬಿಸಿ ನಿಮ್ಮ ಬ್ಯಾಂಕ್ ಖಾತೆಗಳಲ್ಲಿನ ಹಣವನ್ನು ಲಾಪಟಾಯಿಸಿ ವಂಚಿಸುವ ಪ್ರಕರಣಗಳು ಹೆಚ್ಚಾಗಿವೆ. ಆದ್ದರಿಂದ ಘಟನೆ ನಡೆದ ತಕ್ಷಣ 1930 ಸಹಾಯವಾಣಿಗೆ ಕರೆ ಮಾಡಿ ಇಲ್ಲವೇ ಅತ್ತಿರದ ಠಾಣೆಗೆ ದೂರು ನೀಡಿದರೆ ವಂಚಕರನ್ನು ಎಡೆಮುರಿ ಕಟ್ಟಿ ಜೈಲಿಗೆ ಕಳುಹಿಸಲಾಗುವುದು.ವಂಚನೆಗೋಳಗಾದ ಆರ್ಹರಿಗೆ ಆರೋಪಿಯಿಂದ ಹಣ ವಾಪಸ್ಸು ಕೋಡಿಸಲು ಸಹಕಾರಿಯಾಗುತ್ತದೆ ಎಂದರು.ಒಟ್ಟಾರೆ ಘಟನೆ ನಡೆದು ಎಂಟು ದಿನಗಳು ಕಳೆದ ನಂತರ ಬಂದು ದೂರು ನೀಡಿದರೆ ಆರೋಪಿಯು ತಪ್ಪಿಸಿಕೊಳ್ಳಲು ಸಾಧ್ಯತೆ ಹೆಚ್ಚು ಎಂದರು
ತಾಲ್ಲೂಕಿನ ಬಿಳಿಚೋಡು ಮತ್ತು ಜಗಳೂರು ಪೋಲಿಸ್ ಠಾಣೆಗಳಲ್ಲಿ ಸಿಬ್ಬಂದಿಗಳ ಸಂಖ್ಯೆ ಕಡಿಮೆಯಾಗಿದೆ ಎಂಬ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಐ.ಜಿ.ಪಿ ಪೋಲಿಸ್ ಠಾಣೆ ಪ್ರಾರಂಭದಲ್ಲಿ ಮಂಜೂರಾತಿಯಂತೆ ಹುದ್ದೆಗಳನ್ನು ನೆಮಕ ಮಾಡಲಾಗಿತ್ತು ಇದೀಗ ಸಿಬ್ಬಂದಿ ಅವಶ್ಯಕತೆಯಿದ್ದು ನಿಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು
.ಚಿತ್ರದುರ್ಗ ,ದಾವಣಗೆರೆ, ಹಾವೇರಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಜಗಳೂರು ತಾಲೂಕಿನಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿವೆ ಎಂದು ತಿಳಿಸಿದರು..
ಪಟ್ಟಣದಲ್ಲಿ ಸಿಸಿ ಕ್ಯಾಮರಗಳನ್ನು ಆಳವಡಿಸಲಾಗಿದೆ ಆದರೆ ಪಟ್ಟಣದ ಹೋರಭಾಗದಲ್ಲಿ ಸಿಸಿ ಕ್ಯಾಮರ ಆಳವಡಿಕೆ ಮಾಡಿದರೆ ಮತ್ತಷ್ಟು ಅಪರಾಧಗಳನ್ಜು ತಡೆಯಲು ಅನುಕೂಲವಾಗಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಸ್ಥಳಿಯ ಸಂಘ ಸಂಸ್ಥೆಗಳಿಗೆ ಠಾಣೆಯಿಂದ ಪ್ರಸ್ತಾವನೆ ಸಲ್ಲಿಸಿದ್ದಾರೆ ಮುಂದಿನ ದಿನಗಳಲ್ಲಿ ಆಳವಡಿಸಲಾಗುವುದು ಎಂದರು.
ಪ್ರಸ್ತುತದಲ್ಲಿ ಯುವಸಮೂಹ ವಿಲಾಸಿ ಜೀವನ ನಡೆಸುವ ಗೀಳು ಒಂದು ಕಡೆಯಾದರೆ ಒಂದೇ ತಿಂಗಳಲ್ಲಿ ಒಂದು ಲಕ್ಷ ಡಬಲ್ ಆಗುತ್ತದೆ ಎಂದು ನಂಬಿ ಅಮಾಯಕರು ಕಂಪನಿಗಳಿಗೆ ಕೋಟಿ ಗಟ್ಟಲೇ ಇನ್ವೆಸ್ಟ್ ಮಾಡುತ್ತಾರೆ ಇದರಿಂದ ಮೋಸಹೋಗುತ್ತಾರೆ ಯಾವುದೇ ಕಂಪನಿಯವರು ಒಂದೇ ತಿಂಗಳಲ್ಲಿ ಡಬಲ್ ಆಗುವುದಿಲ್ಲ ಇದನ್ನು ಪ್ರತಿಯೋಬ್ಬರು ಅರಿಯಬೇಕು ಎಂದರು
ಪೋಲೀಸ್ ಸಿಬ್ಬಂದಿಗಳಿಗನುಗುಣವಾಗಿ ವಸತಿ ಗೃಹಗಳಿಲ್ಲ ಎಂಬ ಮಾಹಿತಿಯಿದ್ದು ಸರ್ಕಾರಿ ಜಮೀನಿನಲ್ಲಿ ಹೆಚ್ಚುವರಿ ವಸತಿಗೃಹ ಕಟ್ಟಡಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಂಧರ್ಭದಲ್ಲಿ ಡಿವೈಎಸ್ ಪಿ ಬಸವರಾಜ್ ,ಸಿಪಿಐ ಶ್ರೀನಿವಾಸ್ ರಾವ್,ಪಿಎಸ್ ಐ ಆಶಾ, ಎಎಸ್ ಐ ನಟರಾಜ್ ಸೇರಿದಂತೆ ಮತ್ತಿತರರು ಹಾಜುರಿದ್ದರು.