ಸರ್ಕಾರದ ಸೌಲಭ್ಯಗಳು ಗ್ರಾಮೀಣ ಬಾಗದ ಜನರ ಬದುಕಿಗೆ ಸಹಕಾರಿಯಾಗುವಂತೆ ಯೋಜನೆಗಳನ್ನು ಜಾರಿಗೋಳಿಸುವಂತೆ :ಸಿರಿಗೆರೆ ಶ್ರೀ ಸಲಹೆ ನೀಡಿದರು
ಜಗಳೂರು ಸುದ್ದಿ:
ಪ್ರಸ್ತುತ ಆಡಳಿತ ಸರ್ಕಾರದ ಕೆಲ ಯೋಜನೆಗಳು ಜನರ ಬದುಕಿಗೆ ಅತ್ಯಂತ ಸಹಕಾರಿಯಾಗಿದ್ದು ನೀರಾವರಿ ಯೋಜನೆಗೆ ಆದ್ಯತೆ ನೀಡಿ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಶ್ರೀ ಶಿವಮೂರ್ತಿ ಶಿವಚಾರ್ಯ ಸ್ವಾಮೀಜಿ ಸಲಹೆ ನೀಡಿದರು.
ಶುಕ್ರವಾರ ತಾಲೂಕಿನ ವಿವಿಧ ಗ್ರಾಮಗಳ ಹಿರೇಅರಕೆರೆ,ಮುಷ್ಟಿಗರಹಳ್ಳಿ,ಗೋಡೆ, ಮರಿಕುಂಟೆ,ಅಸಗೋಡು ಕೆರೆಗಳಿಗೆ ಬಾಗೀನ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಅಸಗೋಡು ಗ್ರಾಮದಲ್ಲಿ ಆಯೋಜಿಸಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಆಶೀರ್ವಾಚನ ನೀಡಿದರು.
ಗ್ರಾಮೀಣ ಬಾಗದ ಜನರು ಮುಗ್ಧತೆ ಮನಸ್ಸಿನ ಮಕ್ಕಳಿದ್ದಂತೆ ಅವರಿಗೆ ಶಿಕ್ಷಣದ ಜ್ಞಾನವಿಲ್ಲದೆ ಇರಬಹುದು ಆದರೆ ಸಾಮಾನ್ಯ ಜ್ಞಾನ ಬುದ್ದಿಶಕ್ತಿ ಮಾನವೀಯತೆ ಉಳ್ಳವರಾಗಿದ್ದಾರೆ. ಆದರೆ ಆಧುನಿಕ ಭರಾಟೆಯಲ್ಲಿ ಜನರು ಕೇಳದಿದ್ದರೂ ಸರ್ಕಾರ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡುತ್ತಿರುವುದು ವಿಷಾಧನೀಯ ಸರ್ಕಾರ ಬೀರು ಬಾಟಲಿ ಕೊಡುವ ಬದಲು ಪ್ರತಿವರ್ಷ ₹60000 ಕೋಟಿ ಅನುದಾನ ಮೀಸಲಿಟ್ಟು ನೀರಾವರಿ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಿ ನೀರು ಕೊಡಿ 5 ವರ್ಷಗಳಲ್ಲಿ ರಾಜ್ಯವೇ ಸಂಪತ್ಭರಿತ ಸಮೃದ್ದ ನಾಡಾಗಲಿದೆ ಎಂದು ಹೇಳಿದರು.
‘ ಪ್ರಥಮದಲ್ಲಿ ಏತ ನೀರಾವರಿ ಯೋಜನೆ ಯಶಸ್ವಿಯಾಗುವುದಿಲ್ಲ ಎಂಬ ವದಂತಿಗಳು ಹಬ್ಬಿಸಿದ್ದರು ಆದರೆ .ಭರಮಸಾಗರ,ಜಗಳೂರು,ಸಾಸ್ವೇಹಳ್ಳಿ ಏತ ನೀರಾವರಿಗಳು ಸಾಕಾರಗೊಂಡು ಕೆರೆಗಳು ಕೋಡಿ ಬಿದ್ದಿರುವುದು ಏತ ನೀರಾವರಿ ಯೋಜನೆ ಅತ್ಯಂತ ಯಶಸ್ವಿಗೊಂಡು ರಾಜ್ಯಕ್ಕೆ ಮಾದರಿಯಾಗಿರುವುದು ಸಾಕ್ಷಿಯಾಗಿದೆ.ಕೆರೆಗೆ ಬಾಗೀನ ಅರ್ಪಿಸುವ ಕಾರ್ಯಕ್ರಮಗಳು ಸಾಮರಸ್ಯತೆ,ನಿರಂತರ ಸಂಘಟನೆಗೆ ಮಾದರಿಯಾಗುವಂತೆ ತಿಳಿಸಿದರು.
‘ಕೆರೆ ಕಟ್ಟೆಗಳು ಭರ್ತಿಯಾಗಿ ಜಗಳೂರು ಜೌಗೂರಾಗಿ ಪರಿವರ್ತಿತಗೊಳ್ಳುತ್ತಿದೆ.ರೈತರು ಜಮೀನಿನಲ್ಲಿ ಮುತ್ತು,ರತ್ನದಂತಹ ಬೆಳೆಗಳನ್ನು ಬೆಳೆಯುವ ಕಾಲ ಸನ್ನಿಹಿತವಾಗಲಿದೆ.ಶಾಲೆಗಳಲ್ಲಿ ಮಕ್ಕಳಿಗೆ ಸಂಗೀತ,ನೃತ್ಯ ಶಿಕ್ಷಣ ಕಡ್ಡಾಯವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು .
ಶಾಸಕ.ಬಿ.ದೇವೇಂದ್ರಪ್ಪ ಮಾತನಾಡಿ,’57 ಕೆರೆ ತುಂಬಿಸುವ ಯೋಜನೆ,ತರಳಬಾಳು ಭವನ,ತಾಲೂಕಿನಲ್ಲಿ ನಡೆದ ಎರಡು ತರಳಬಾಳು ಹುಣ್ಣಿಮೆಯ ಇತಿಹಾಸದ ಕುರುಹುಗಳಾಗಿ ದಾಖಲಾಗಿದೆ. ನೀರಾವರಿ ಯೋಜನೆ ಸಾಕಾರಗೊಳ್ಳಲು ಮೂರು ಜನ ಶಾಸಕರು,ಮೂರು ಜನ ಮುಖ್ಯಮಂತ್ರಿಗಳು ಬದಲಾದರು ಆದರೆ ಸಿರಿಗೆರೆ ಶ್ರೀಗಳು ಮಾತ್ರ ಒಬ್ಬರಾಗಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಶಾಸಕ ಸ್ಥಾನ ಮಲ್ಲಿಗೆ ಹೂವಿದ್ದಂತೆ ಇಬ್ಬರೂ ಮುಡಿದು ಬಿಟ್ಟ ಮೇಲೆ ನನ್ನ ಮುಡಿಗೇರಿದೆ.ಭವಿಷ್ಯದಲ್ಲಿ ಯಾರ ಅದೃಷ್ಟವೋ ಗೊತ್ತಿಲ್ಲ ಎಂದು ಮಾಜಿ ಶಾಸಕರ ಹೇಳಿಕೆಗೆ ನಿದರ್ಶನ ನೀಡಿದರು.
ಬರದನಾಡಿನಲ್ಲಿ ಕುಡಿಯುವ ನೀರಿಗೂ ಆಹಾಕಾರವಿರುವುದನ್ನು ಕಂಡು ಹೆಣ್ಣು ಕೊಡಲು ಮುಂದಾಗುತ್ತಿರಲಿಲ್ಲ.ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ ಎಲ್ಲಾ ಕಾನೂನು ತೊಡಕುಗಳನ್ನು ಇತ್ಯರ್ಥಪಡಿಸಿದ ಪರಿಣಾಮ ತ್ವರಿತವಾಗಿ ಕೆರೆಗಳು ಭರ್ತಿಯಾಗಿವೆ. ಇದೀಗ ಹೆಣ್ಣು ಕೊಡಲು ತುದಿಗಾಲಲ್ಲಿ ನಿಂತಿರುವುದು ಸಂತಸದ ಸಂಗತಿ’ಮಾಜಿ ಶಾಸಕ.ಎಸ್ ವಿ ರಾಮಚಂದ್ರ
‘ನನ್ನ ಆಡಳಿತಾವಧಿಯಲ್ಲಿ ನಡೆದ ತರಳಬಾಳು ಹುಣ್ಣಿಮೆಯಲ್ಲಿ ಸಿರಿಗೆರೆ ಶ್ರೀಗಳ ಸಂಕಲ್ಪದಂತೆ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ,ಅಂದಿನ ಮುಖ್ಯಮಂತ್ರಿಯಾಗಿ ಸಹಕಾರ. ನೀಡಿದ್ದರು.ಭರಮಸಾಗರ,ಜಗಳೂರು ಅವಳಿ ನೀರಾವರಿ ಯೋಜನೆಗಳ ಸಾಕಾರಕ್ಕೆ ಕಾಳಜಿ ವಹಿಸಿದ ಮಾಜಿ ಮುಖ್ಯಮಂತ್ರಿಗಳಾದ. ಯಡಿಯೂರಪ್ಪ,ಕುಮಾರಸ್ವಾಮಿ ಅವರಿಗೆ ಅಬಾರಿಯಾಗೋಣ’. ಮಾಜಿ ಶಾಸಕ ಎಚ್ ಪಿ ರಾಜೇಶ್.
:
”
ಜಾತ್ಯಾತೀತ ಕೇಂದ್ರವಾಗಿರುವ ಅಸಗೋಡು ಗ್ರಾಮದಲ್ಲಿ ಜನಿಸಿದ ನಾನು 51 ವರ್ಷ ಕಳೆದರೂ ನನ್ನ ಮೇಲಿಟ್ಟಿರುವ ಗ್ರಾಮಸ್ಥರ ವಿಶ್ವಾಸ,ಪ್ರೀತಿಯಿಂದ ರಾಜ್ಯಮಟ್ಟದಲ್ಲಿ ನಾಯಕನಾಗಿ ಗುರುತಿಸಿಕೊಂಡಿರುವೆ.ಪ್ರತಿಯೊಬ್ಬ ವ್ಯಕ್ತಿ ದುರಾಸೆ ತೊರೆದು ಸಮಾಜದಲ್ಲಿ ಸಜ್ಜನರಾಗಿ ಬದುಕಬೇಕು’.ಅಸಗೋಡು ಜಯಸಿಂಹ ಅಧ್ಯಕ್ಷರು ಬ್ರಾಹ್ಮಣ ಅಭಿವೃದ್ಧಿ ನಿಗಮ ಬೆಂಗಳೂರು
—
ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯರಾದ ಕೆ.ಪಿ.ಪಾಲಯ್ಯ,ಎಸ್.ಕೆ.ಮಂಜುನಾಥ್,ಎಚ್.ಸಿ.ಮಹೇಶ್,ಆರೈಕೆ ಆಸ್ಪತ್ರೆಯ ಡಾ.ರವಿಕುಮಾರ್,ಗ್ರಾ.ಪಂ.ಅಧ್ಯಕ್ಷೆ ನಾಗಮ್ಮಚನ್ನಬಸಪ್ಪ,ಉಪಾಧ್ಯಕ್ಷೆ ಶಕುಂತಲಾ ತಿಮ್ಮಪ್ಪ,ಮಾಜಿ ಅಧ್ಯಕ್ಷ ರವಿಕುಮಾರ್,ಮುಖಂಡರಾದ ಗುಡದಯ್ಯ,ಶರಣಯ್ಯ,ಬಸವರಾಜಪ್ಪ,ಶಂಭುಲಿಂಗಪ್ಪ,ನಿವೃತ್ತ ಪ್ರಾಂಶುಪಾಲ ಸಿದ್ದಪ್ಪ,ಸೇರಿದಂತೆ ಮಹಿಳೆಯರು,ನೆರೆಹೊರೆಯ ಗ್ರಾಮಗಳ ಭಕ್ತರು ಇದ್ದರು.