ಕಾಂಗ್ರೆಸ್ ಗೆಲುವಿಗೆ ಜಗಳೂರಿನಲ್ಲಿ ಪಟಾಕಿ ಸಿಡಿಸಿ,ಸಿಹಿಹಂಚಿ ಸಂಭ್ರಮ.
ಜಗಳೂರು ಸುದ್ದಿ:ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ರಾಜ್ಯದ ಶಿಗ್ಗಾಂವಿ,ಸಂಡೂರು,ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟಾಕಿ ಸಿಡಿಸಿ,ಸಿಹಿಹಂಚಿ ಸಂಭ್ರಮಿಸಿದರು.
ಶಾಸಕ.ಬಿ.ದೇವೇಂದ್ರಪ್ಪ ಮಾತನಾಡಿ,’ರಾಜ್ಯದಲ್ಲಿನ ಕಾಂಗ್ರೆಸ್ ಆಡಳಿತ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನಪರ ಆಡಳಿತಕ್ಕೆ ಮೂರು ಉಪಚುನಾವಣೆಯ ಫಲಿತಾಂಶವೇ ಕೈಗನ್ನಡಿಯಾಗಿದೆ.ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಾ ಸ್ವಾರ್ಥಕ್ಕಾಗಿ ಮೈತ್ರಿ ಅನೈತಿಕ ರಾಜಕಾರಣ ನಡೆಸುತ್ತಿರುವ ಕೋಮುವಾದಿ ಬೆಂಬಲಿತ ಬಿಜೆಪಿ ವಿರೋಧ ಪಕ್ಷಕ್ಕೆ ಮೂರು ವಿಧಾನ ಸಭಾ ಕ್ಷೇತ್ರಗಳಲ್ಲಿ ಮತದಾರರು ತಕ್ಕ ಪಾಠ ಕಲಿಸಿದ್ದಾರೆ.ಜಾತ್ಯಾತೀತ,ಬಡಕೂಲಿಕಾರ್ಮಿಕರ ಪಕ್ಷ ಕಾಂಗ್ರೆಸ್ ಎಂದರು.
‘ಜಗಳೂರು ಪಟ್ಟಣ ಪಂಚಾಯಿತಿ ಉಪಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ನಿಶ್ಚಿತ,ನನ್ನ ಆಡಳಿತಾವಧಿಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನ ಸರಣಿ ಸಂಭ್ರಮ ಹರ್ಷ ತರಲಿದೆ..
ಕೆಪಿಸಿಸಿ ಎಸ್ ಟಿ ಘಟಕ ರಾಜ್ಯ ಮುಖಂಡ ಕೆ.ಪಿ.ಪಾಲಯ್ಯ ಮಾತನಾಡಿ,’ರಾಜ್ಯದಲ್ಲಿ ಅರಾಜಕತೆ ಸೃಷ್ಠಿಸುವ ಪಕ್ಷಗಳನ್ನ ಮತದಾರರು ಉತ್ತಮ ತೀರ್ಪು ನೀಡಿ ಕಾಂಗ್ರೆಸ್ ಕೈ ಹಿಡಿದಿರುವುದು 5 ಗ್ಯಾರಂಟಿ ಯೋಜನೆಗಳ ಪ್ರತಿಫಲ ಎಂದರು .
ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್ ಮಾತನಾಡಿ,’ರಾಜ್ಯದ ಸಂಡೂರು,ಚನ್ನಪಟ್ಟಣ ವಿಧಾನ ಸಭಾಕ್ಷೇತ್ರಗಳು ಕಾಂಗ್ರೆಸ್ ಪಕ್ಷದ ತೆಕ್ಕೆಯಲ್ಲಿದ್ದವು.ಡೊಲಾಯಮಾನವಾದ ಸ್ಥಿತಿಯಲ್ಲಿದ್ದ ಶಿಗ್ಗಾಂವಿ ಕ್ಷೇತ್ರದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ಸಂಪೂರ್ಣ ಹಿಡಿತ ಸಾಧಿಸಿ ಕಾಂಗ್ರೆಸ್ ಪಕ್ಷದ ಗೆಲುವಿನ ರುವಾರಿಯಾಗಿದ್ದಾರೆ ವಿಶ್ವಾಸ ವ್ಯಕ್ತಪಡಿಸಿದರು.
ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ಪ.ಪಂ.ಸದಸ್ಯರಾದ ಶಕೀಲ್ ಅಹಮ್ಮದ್,ಮಹಮ್ಮದ್ ಅಲಿ,ರಮೇಶ್,ಮುಖಂಡರಾದ ಸಿ.ತಿಪ್ಪೇಸ್ವಾಮಿ,ಶಂಭುಲಿಂಗಪ್ಪ,ಬಿ.ಮಹೇಶ್ವರಪ್ಪ,ಚಂದ್ರಪ್ಪ,ಇಕ್ಬಾಲ್ ಅಹಮ್ಮದ್,ಮಾಳಮ್ಮನಹಳ್ಳಿ ವೆಂಕಟೇಶ್,ಗಿಡ್ಡನಕಟ್ಟೆ ಕಾಂತರಾಜ್ ವಕೀಲ ತಿಪ್ಪೇಸ್ವಾಮಿ,ಮಾಜಿ ಮಂಜುನಾಥ್,ಹಟ್ಟಿತಿಪ್ಪೇಸ್ವಾಮಿ,ಮಾರುತಿಸಿಎಂಹೊಳೆ,ಕ್ಯಾಂಪ್ ಶಿವಣ್ಣ,ನಾಗರಾಜ್,ಸೇರಿದಂತೆ ಇದ್ದರು.