ಶುಕ್ರದೆಸೆ ನ್ಯೂಸ್: ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಗೊಂದಲಮಯ ಯಾರ ಹೆಗಲಿಗೆ ಒಲಿಯಲಿದೆ ಕಾಂಗ್ರೆಸ್ ಮಾಲೆಯ ಟಿಕೆಟ್ . ಬಿ ಜೆ ಪಿ ಅಭ್ಯರ್ಥಿ ಪಿಕ್ಸ್ ಎಸ್ ವಿ ರಾಮಚಂದ್ರಪ್ಪ. ಟಿಕೆಟ್ ಘೋಷಣೆ. ಜಗಳೂರು ವಿಧಾನಸಭಾ ಕ್ಷೇತ್ರದ ಎಸ್ಟಿ ಮೀಸಲು ಕ್ಷೇತ್ರದಲ್ಲಿ ಕೈ ಟಿಕೆಟ್ ಗಾಗಿ ಅಭ್ಯರ್ಥಿಗಳಲ್ಲಿ ಗೊಂದಲಮಯವಾಗಿದೆ. . ಮಾಜಿ ಶಾಸಕ ಎಚ್ ಪಿ ರಾಜೇಶ್ ಸೇರಿದಂತೆ ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಮಾಜಿ ಜಿಪಂ ಸದಸ್ಯ ಹಾಗೂ ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ ಪಿ ಪಾಲಯ್ಯ ಮತ್ತು ಪುಷ್ಪಾಲಕ್ಮಣ ಸ್ವಾಮಿ ಇವರ ನಡುವೆ ಟಿಕೆಟ್ ಗಾಗಿ‌ ಬಾರಿ ಕಸರತ್ತು ನಡೆದಿದೆ ಎನ್ನಲಾಗಿದೆ. ಒಟ್ಟು ಆರು ಜನ ಕೈ ಪಕ್ಷದ ಆಕಾಂಕ್ಷಿಗಳಿದ್ದಾರೆ.ಬಸಾವಪುರ ರವಿಚಂದ್ರ.ಹನುಮಂತಪ್ಪ.ಈ ಮೇಲಿನ ಅಭ್ಯರ್ಥಿಗಳಿದ್ದು ಇದರಲ್ಲಿ ಈಗಾಗಲೇ ಕೇಂದ್ರಕ್ಕೆ ಎರಡು ಹೆಸರು ಸೂಚಿಸಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂಬ ಬಲ್ಲ ಮೂಲಗಳಿಂದ ತಿಳಿದು ಬಂದಿದೆ ಇದರಲ್ಲಿ ಯಾರಿಗೆ ಕೈ ಟಿಕೆಟ್ ಎಂಬ ನೀರಿಕ್ಷೆಯಲ್ಲಿ ಕ್ಷೇತ್ರದ ಜನರುನ್ನು ಬಾರಿ ಕುತೂಹಕಾರಿ ಮೂಡಿಸಿದೆ. ಮಾಜಿ ಶಾಸಕ ಎಚ್ ಪಿ ರಾಜೇಶ್ ಮತ್ತು ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಇವರ ಮದ್ಯ ಪ್ರಬಲ ಪೈಪೋಟಿ ನಡೆದಿದೆ.ಇವರ ಮದ್ಯ ಕೈ ಟಿಕೆಟ್ ನಿರ್ಧಾರವಾಗಲಿದೆಯೇ ? ಎಂಬುದು ಕಾದು ನೋಡಬೇಕಾಗಿದೆ.ಕಳೆದ ಬಾರಿ 2018 ರ ಸಾರ್ವತ್ರಿಕ ವಿಧಾನ ಸಭೆ ಚುನಾವಣೆಗೆ ಸ್ವರ್ಧಿಸಲು ದೇಹಲಿಯವರೆಗೆ ಮಹಿಳಾ ಕೂಟದಲ್ಲಿ‌ ಟಿಕೆಟ್ ಪಡೆಯಲು ಹರಸಾಹಸ ಮಾಡಿ ಮಾಜಿ ಕೌಶಲ್ಯ ನಿಗಮ ಮಂಡಳಿ ಅಧ್ಯಕ್ಷೆ ಪುಷ್ಪಲಕ್ಷ್ಮಸ್ವಾಮಿ ಬಿ ಪಾರಂ ಗಿಟ್ಟಿಸಿಕೊಂಡಿದ್ದರು ನಂತರ ರಾಜೇಶ್ ಬೆಂಬಲಿಗರ ಪ್ರತಿಭಟನೆ ಮಾಡಿದ್ದರ ಫಲವಾಗಿ ಕೇಂದ್ರ ಮತ್ತು ರಾಜ್ಯ ಕೈ ವರೀಷ್ಠರು ಪ್ರತಿಭಟನೆ ಗಮನ ಸೆಳೆದು ಕೊನೆ ಹಂತದಲ್ಲಿ ಮಾಜಿ ಶಾಸಕ ರಾಜೇಶ್ ರವರಿಗೆ ಟಿಕೆಟ್ ಒಲಿದು ಬಂದಿತ್ತು.ಇದೀಗ ಸದ್ಯದ ಪರಿಸ್ಥಿತಿಯಲ್ಲಿ ಈ ಹಿಂದೆ ನಡೆದ ಪೈಪೋಟಿಯಂತೆ ಜಗಳೂರು ಕ್ಷೇತ್ರದ ಕೈ ಟಿಕೆಟ್ ಬಾರಿ ಪೈಪೋಟಿ ನಡೆದಿದೆ ಎನ್ನಬಹುದು… ಇದೀಗ ಈಗಾಗಲೇ ಶಾಸಕ ಎಸ್ ವಿ ರಾಮಚಂದ್ರಪ್ಪರವರಿಗೆ ಬಿ ಜೆ ಪಿ ಪಕ್ಷದ ಅಭ್ಯರ್ಥಿಯೆಂದು ಘೋಷಣೆ ಮಾಡಿ ಪಟ್ಟಿ ಬಿಡುಗಡೆ ಮಾಡಲಾಗಿದೆ.ಕಣದಲ್ಲಿ ಶಾಸಕ ಎಸ್ ವಿ ರಾಮಚಂದ್ರಪ್ಪರವರು‌ ಸೇರಿದಂತೆ ತಮಲೇಹಳ್ಳಿ ಕಲೇಶಪ್ಪ ಟಿಕೆಟ್ ಆಕಾಂಕ್ಷಿಯಾಗಿದ್ದರು ಆದರೆ ಇವರ ನಡುವೆ ಯಾವುದೇ ಪೈಪೋಟಿಯಿಲ್ಲದೆ ಈಗಾಗಲೆ ಶಾಸಕ ಎಸ್ ವಿ ರಾಮಚಂದ್ರಪ್ಪರವರಿಗೆ ಟಿಕೆಟ್ ಘೋಷಣೆ ಮಾಡಿದ್ದು ಇದೀಗ ಚುನಾವಣೆ ಪ್ರಚಾರಕ್ಕೆ ಸಜ್ಜಾಗಲಿದ್ದಾರೆ. ಆದರೆ ಇದೆ ತಾಲ್ಲೂಕಿನ ತಮಲೆಹಳ್ಳಿ ಗ್ರಾಮದ ಡಿ ವೈ ಎಸ್ ಪಿ ಕಲೇಶಪ್ಪರವರು ತನ್ನ ಹುದ್ದೆಗೆ ರಾಜಿನಾಮೆ ನೀಡಿ ರಾಜಕೀಯಕ್ಕೆ ಪ್ರವೇಶ ಮಾಡುವ ಒತ್ತಾಸೆಯಂತೆ ಸರ್ಕಾರಿ ನೌಕರಿಗೆ ಗುಡ್ ಬಾಯಿ ಹೇಳಿ ರಾಜಕೀಯದ ಕಡೆ ಮುಖ ಮಾಡಿದ್ದರು… ಇನ್ನು‌ ಇತರೆ ಪಕ್ಷಗಳಾದ ಎಎಪಿ ಪಕ್ಷಕ್ಕೆ ದಾವಣಗೆರೆ ಮೂಲದ ಗೋವಿಂದರಾಜ್ ಏಕೈಕ ಅಭ್ಯರ್ಥಿ ಈಗಾಗಲೇ ಘೋಷಣೆಯಾಗಿ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರದ ಭರಾಟೆಯಲ್ಲಿ ತೊಡಗಿದ್ದಾರೆ.ಪ್ರಾದೇಶಿಕ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ‌ ಮಿಲಿಟರಿ ತಿಪ್ಪೇಸ್ವಾಮಿ ‌ಯವರುನ್ನು ಜೆ ಡಿ ಎಸ್ ಮುಖಂಡ ಕಲ್ಲೆರುದ್ರೇಶ್ ರವರು‌‌ ಕಣಕ್ಕಿಸಲು ತಯಾರಿ ನಡೆಸಿದ್ದು ಒಟ್ಟಾರೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಗಾಗಿ ಅಭ್ಯರ್ಥಿಗಳು ಟಿಕೆಟ್ ಲಾಬಿ ಮಾಡಿಕೊಳ್ಳಲು ಕೊನೆ ಗಳಿಗೆಯಲ್ಲೂ ಸಹ ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ ಆದರೆ ಯಾರಿಗೆ ಒಲಿಯಲಿದೆಯೊ ಕಾಂಗ್ರೆಸ್ ಮಾಲೆ ದಿನಗಣನೆ ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *

You missed

error: Content is protected !!