ಬಿಜೆಪಿಯ ಮತ್ತೊಂದು ವಿಕೆಟ್ ಪತನ : ಪಕ್ಷದ ಹಿರಿಯ ಮುಖಂಡ ಸೊಗಡು ಶಿವಣ್ಣ ರಾಜೀನಾಮೆ?
ಶುಕ್ರದೆಸೆ ನ್ಯೂಸ್, : ತುಮಕೂರು ನಗರ ಕ್ಷೇತ್ರದ ಬಿಜೆಪಿ ಟಿಕೆಟ್‌ನ್ನು ಹಾಲಿ ಶಾಸಕ ಜ್ಯೋತಿ ಗಣೇಶ್‌ಗೆ ನೀಡಿದ್ದರಿಂದ ಆಕ್ರೋಶಗೊಂಡೊರುವ ಜಿಲ್ಲೆಯ ಪ್ರಭಾವಿ ಮುಖಂಡ ಸೊಗಡು ಶಿವಣ್ಣ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ಬುಧವಾರ ಬೆಂಬಲಿಗರ ಜತೆ ಸಭೆ ನಡೆಸಿದ ಬಳಿಕ ಅವರು ರಾಜೀನಾಮೆ ಘೋಷಿಸಿದರು.
ಈ ಬಗ್ಗೆ ಸೊಗಡು ಶಿವಣ್ಣ ಪ್ರತಿಕ್ರಿಯಿಸಿದ್ದು, ನಾನು ರಾಜೀನಾಮೆ ಕೊಡೋದು ಸತ್ಯ. ನೂರಕ್ಕೆ ನೂರು ಪಾಲು ನಾಳೆ ರಾಜೀನಾಮೆ ಕೊಡ್ತೀನಿ. ಚುನಾವಣೆಗೆ ಜೋಳಿಗೆ ಹಾಕಿಕೊಂಡು ನಿಂತ್ಕೋತ್ತೀನಿ. ನಮ್ಮ ಕ್ಷೇತ್ರದ ಮತದಾರ ದೇವರ ಸತ್ಯ ಮಾಡಿ ಹೇಳ್ತೀನಿ. ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತೀನಿ ಎಂದು ಹೇಳಿದರು.
ಬಿಜೆಪಿ ತುಮಕೂರಿನ ಯುವ ಶಾಸಕ ಹಾಗೂ ಜನಪ್ರಿಯತೆ ಹೊಂದಿರುವ ಜ್ಯೋತಿ ಗಣೇಶ್ ಅವರನ್ನೇ ನೆಚ್ಚಿಕೊಂಡು ಟಿಕೆಟ್ ನೀಡಿದೆ. ಇದುವರೆಗೆ ಪ್ರಚಾರದಲ್ಲಿದ್ದ ಸೊಗಡು ಶಿವಣ್ಣ ಅವರಿಗೆ ಇದು ಭಾರಿ ಹಿನ್ನಡೆಯಾದ ಕಾರಣ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಪಕ್ಷೇತರನಾಗಿ ಕಣಕ್ಕಿಳಿಯುವ ನಿರ್ಧಾರ ಮಾಡಿದ್ದಾರೆ.