₹6ಕೋಟಿ ವೆಚ್ಚದ ಎನ್ ಎಚ್-45 ರಸ್ತೆ ನವೀಕರಣ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ.
ಜಗಳೂರು ಸುದ್ದಿ:
ತಾಲೂಕಿನ ದೊಣೆಹಳ್ಳಿ ಗ್ರಾಮದಲ್ಲಿ ₹6 ಚಳ್ಳಕೆರೆ- ಅರಭಾವಿ ಎಸ್ ಎಚ್-45 ನ ₹6ಕೋಟಿ ವೆಚ್ಚದ
ರಸ್ತೆ ನವೀಕರಣ ಕಾಮಗಾರಿಗೆ ಶಾಸಕ.ಬಿ.ದೇವೇಂದ್ರಪ್ಪ ಭೂಮಿಪೂಜೆ ನೆರವೇರಿಸಿದರು.
ನಂತರ ವೇದಿಕೆ ಕಾರ್ಯಕ್ರಮದಲ್ಲಿ ಅವರು,ಮಾತನಾಡಿದರು’ಗುತ್ತಿಗೆದಾರರು ಹಾಗೂ ಇಂಜಿನಿಯರ್ ಗಳು ಕಾಳಜಿವಹಿಸಿ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಗುಣಾತ್ಮಕ ಮತ್ತು ಪರಿಮಾಣಾತ್ಮಕವಾಗಿರಲಿ ಕಳಪೆ ಕಾಮಗಾರಿ ಸಲ್ಲದು ಎಂದು ಸೂಚಿಸಿದರು.
‘ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಸರಕಾರ ಜನಪರ,ಅಭಿವೃದ್ದಿಪರ ಯೋಜನೆಗಳನ್ನು ಜಾರಿಗೊಳಿಸುತ್ತಿದೆ.ರೈತರ ಅನುಕೂಲಕ್ಕಾಗಿ ಸಿದ್ದಿಹಳ್ಳಿ ಮೂಡಲಮಾಚಿಕೆರೆ ಮಧ್ಯೆ ಜಿನಿಗಿಹಳ್ಳದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಿರುವೆ ವಿರೋಧ ಪಕ್ಷಗಳ ಟೀಕೆ ಟಿಪ್ಪಣಿಗಳನ್ನು ಸ್ವಾಗತಿಸುವೆ. ನನಗೆ ಅಧಿಕಾರ ಶಾಶ್ವತವಲ್ಲ ಜನಸೇವೆಯೇ ನನ್ನ ಗುರಿಯಾಗಿದೆ.ದೊಣೆಹಳ್ಳಿ ಯಲ್ಲಿ ಬೀದಿದೀಪ ಅಳವಡಿಕೆ ಸೇರಿದಂತೆ ಮೂಲಸೌಕರ್ಯ ಒದಗಿಸಲಾಗುವುದು.ಅಂತೆಯೇ ಔಟ್ ಪೋಸ್ಟ್ ಪೋಲೀಸ್ ಠಾಣೆ ಆರಂಭಿಸಲು ನನ್ನ ಸಹಮತವಿದೆ.ಅಧಿವೇಶನದ ನಂತರ ಗೃಹಸಚಿವರ ಬಳಿ ನಿಯೋಗತೆರಳಿ ಮನವಿಮಾಡಲಾಗುವುದು ಎಂದು ಭರವಸೆ ನೀಡಿದರು.
ಅಪ್ಪರ್ ಭದ್ರಾ ಕಾಮಗಾರಿ ತ್ವರಿತಗತಿಯಲ್ಲಿ ಸಾಗಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನು ಭೆಟಿಮಾಡಿ ಚರ್ಚಿಸಲಾಗಿದೆ.ಮುಖ್ಯ ಇಂಜಿನಿಯರ್ ಚಿತ್ತಯ್ಯ ಅವರು 2025 ಅಕ್ಟೋಬರ್ 2 ಗಾಂಧಿಜಯಂತಿ ವೇಳೆಗೆ ತಾಲೂಕಿಗೆ ನೀರು ಹರಿಸುವ ಭರವಸೆನೀಡಿದ್ದಾರೆ ಎಂದು ತಿಳಿಸಿದರು.
ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಮುಖಂಡ ಕೆ.ಪಿ.ಪಾಲಯ್ಯ ಮಾತನಾಡಿ,’ಸೋಲಿನಿಂದ ಹತಾಶರಾಗಿ ವಿರೋಧ ಪಕ್ಷದವರು 5 ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರಮಾಡುತ್ತಿದ್ದಾರೆ.ಗ್ಯಾರಂಟಿ ಯೋಜನೆಅನುದಾನ ಅಭಿವೃದ್ದಿ ಇಲಾಖೆಗಳ ಅನುದಾನ ಬೇರೆ ಬೇರೆಯಾಗಿದ್ದು.ಅನುದಾನಕ್ಕೆ ಕೊರತೆಯಿಲ್ಲ ಅಭಿವೃದ್ದಿ ಕಾಮಗಾರಿಗಳು ಸುಗಮವಾಗಿ ನಡೆಯುತ್ತವೆ ಎಂದು ಅಭಿಮತ ವ್ಯಕ್ತಪಡಿಸಿದರು.
ಇಂಜಿನಿಯರ್ ಸೌರಬ್ ಮಾಹಿತಿನೀಡಿ,’,ಸಿಆರ್ ಐ ಎಫ್ ಫಂಡ್ ನಲ್ಲಿ ಎಸ್ ಎಚ್-45 ,ಚಳ್ಳಕೆರೆ ಅರಭಾವಿ ರಸ್ತೆಯ ದೊಣೆಹಳ್ಳಿಯಿಂದ ಜಗಳೂರು ಮಾರ್ಗ ಉದ್ಗಟ್ಟ ಗೇಟ್ ವರೆಗೆ ₹508 ಟೆಂಡರ್ ಹಣದಲ್ಲಿ ಒಟ್ಟು 6.65 ಕಿ.ಮೀ ದೂರದ ವ್ಯಾಪ್ತಿಯ ರಸ್ತೆ ತಗ್ಗುಗುಂಡಿ ಮುಚ್ಚುವುದು,ಮರುಡಾಂಬರೀಕರಣ ಕಾಮಗಾರಿ ನಡೆಯಲಿದೆ.ಒಟ್ಟು ₹508 ಟೆಂಡರ್ ಹಣ ಬ
ಇದೇ ವೇಳೆ ಪಿಎಂಜಿವೈ ಯೋಜನೆಯಲ್ಲಿ 21ಮನೆಗಳು ಮಂಜೂರಾಗಿದ್ದು ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಲಾಯಿತು.
ಸಂದರ್ಭದಲ್ಲಿ ,ಹಿರಿಯ ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ಗ್ರಾ.ಪಂ.ಅಧ್ಯಕ್ಷ ತಿಪ್ಪೇಸ್ವಾಮಿ,ಸದಸ್ಯರಾದ ಸುಧಾ,ಸಾವಿತ್ರಮ್ಮ,ರಾಮಣ್ಣ,ಜಿ.ಪಂ.ಮಾಜಿ ಸದಸ್ಯ ಕೆ.ಪಿ.ಪಾಲಯ್ಯ,ಮುಖಂಡರಾದ ಜಗದೀಶ್,ಬಿ.ಮಹೇಶ್ವರಪ್ಪ,ಪಲ್ಲಾಗಟ್ಟೆ ಶೇಖರಪ್ಪ,ಚೌಡಮ್ಮ,ಗುತ್ತಿಗೆದಾರ ದೀಪಕ್ ಪಟೇಲ್,ಸೇರಿದಂತೆ ಇದ್ದರು.