filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 128;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39;

ಪ್ರತಿ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮಾದರಿ ಗ್ರಾಮ ಪಂಚಾಯತಿಯನ್ನಾಗಿ ಮಾಡುವ ಸಂಕಲ್ಪ ಹೊಂದಿರುತ್ತೆವೆ. ಜನರ ಸಹಕಾರ ಅತಿ ಮುಖ್ಯ ಸಾಮಾಜಿಕ ಪರಿಶೋಧನ ಗ್ರಾಮ ಸಭೆಯಲ್ಲಿ ಹಿರೆಮಲ್ಲನಹೋಳೆ ಗ್ರಾಪಂ ಅಧ್ಯಕ್ಷ ಶ್ರೀನಿವಾಸ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿ ;: ಜಗಳೂರು

ಸಾಮಾಜಿಕ ಪರಿಶೋಧನಾ ಗ್ರಾಮ ಸಭೆ ಬುಧವಾರ ಗ್ರಾಪಂ ಅದ್ಯಕ್ಷರ ನೇತೃತ್ವದಲ್ಲಿ ಸಾರ್ವಜನಿಕವಾಗಿ ಹಿರೆಮಲ್ಲನಹೋಳೆ ಗ್ರಾಪಂ ಆವರಣದಲ್ಲಿ ಜರುಗಿತು.
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿಯೋಜನೆ ಹಾಗೂ 15 ನೇ ಹಣಕಾಸು ಯೋಜನೆಯಡಿಯಲ್ಲಿ ಚರಂಡಿ ಸ್ವಚತೆ ಬೀದಿ ದೀಪಾ ಮೋಟರ್ ದುರಸ್ತೆ ಸೇರಿದಂತೆ.ದನದ ಕೊಟ್ಟಿಗೆ ನಿರ್ಮಾಣ .ಆಶ್ರಯ ವಸತಿ ಯೋಜನೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ತಗಲಿರುವ ವೆಚ್ಚಾ ಕುರಿತು.
ಹಿರೆಮಲ್ಲನಹೋಳೆ ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಕಾರ್ಯಕ್ರಮವನ್ನು ಉದ್ಗಾಟನೆ ಮಾಡಿ ನಂತರ ಭೆಯನ್ನುದ್ದೆಶಿಸಿ ಮಾತನಾಡಿದರು ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಬರುವಂತ 12 ಗ್ರಾಮಗಳಿಗೂ ಸಹ ಕುಡಿಯುವ ನೀರು ಚರಂಡಿ ದುಡಿಯುವ ಕೈಗಳಿಗೆ ಕೆಲಸ ವಯಕ್ತಿಕ ದನದ ಕೊಟ್ಟಿಗೆ ರೈತರ ಜಮೀನುಗಳಲ್ಲಿ ಬದು ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮಾದರಿ ಗ್ರಾಮ ಪಂಚಾಯತಿಯನ್ನಾಗಿ ಮಾಡುವ ಸಂಕಲ್ಪ ಹೊಂದಿರುತ್ತೆವೆ. ಜನರ ಸಹಕಾರ ಅತಿ ಮುಖ್ಯ .2024 _25 ಸಾಲಿನಲ್ಲಿ ಖಾತ್ರಿ ಯೋಜನೆಯಡಿಯಲ್ಲಿ ಸರಿ ಸುಮಾರು 20 ಲಕ್ಷ ರೂಗಳ ಕಾಮಗಾರಿ ಮಾಡಲಾಗಿದೆ .

15 ನೇ ಹಣಕಾಸು ಯೋಜನೆಯಡಿಯಲ್ಲಿ 30 ಲಕ್ಷ ರೂಗಳಲ್ಲಿ ವಿವಿಧ ಗ್ರಾಮಗಳಲ್ಲಿ ಚರಂಡಿ .ಕುಡಿಯುವ ನೀರು ಪೈಪುಗಳ ಖರಿದಿ .ಬೀದಿ ದೀಪಾ ಬಲ್ಬ ಸೇರಿದಂತೆ ಮೂಲಸೌಕರ್ಯಕ್ಕಾಗಿ ವೆಚ್ಚಾ ಮಾಡಲಾಗಿದೆ ಎಂದು ಸಭೆ ಗಮನಕ್ಕೆ ತಂದರು‌

ಸಾಲೆಹಳ್ಳಿ ಗ್ರಾಮದಲ್ಲಿ ಚರಂಡಿ ನಿರ್ಮಾಣಯಿಲ್ಲದೆ ಸೊಳ್ಳೆ ಕಾಟ ತಡೆಯಲಾಗುತ್ತಿಲ್ಲ ಸೊಳ್ಳೆ ಕಾಟಕ್ಕೆ ಹೈರಾಣಗಿದ್ದೆವೆ.ಗ್ರಾಮದಲ್ಲಿ ಶುದ್ದ ನೀರಿನ ಘಟಕ ದುರಸ್ತೆ ಮಾಡಿಸುವಂತೆ ಸಭೆಯಲ್ಲಿ ಗ್ರಾಮಸ್ಥರು ಮನವಿ ಮಾಡಿಕೊಂಡರು ಗ್ರಾಮಸ್ಥರ ಮನವಿಗೆ ಸ್ವಂದಿಸಿದ ಅದ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿ ಅರವಿಂದ ತಿಳಿಸಿದರು

ಗ್ರಾಮಕ್ಕೆ ಚರಂಡಿ ನಿರ್ಮಾಣ ಮಾಡಲು ಈಗಾಗಲೇ ಕ್ರಿಯಯೋಜನೆ ತಯಾರಿಸಿದ್ದು ಶೀಘ್ರವೆ ಅತ್ಯವಶ್ಯಕವಾಗಿ ಚರಂಡಿ ನಿರ್ಮಿಸಿ ಶುದ್ದೀಕರಣ ಘಟಕ ರಿಪೇರಿ ಮಾಡಿಸಲಾಗುವುದು .ದುಡಿಯುವ ಕೈಗಳಿಗೆ ಕೆಲಸ ನೀಡಲಗುವುದು. ಒಂದು ವೇಳೆ ಅನಿವಾರ್ಯ ಸಂಧರ್ಭದಲ್ಲಿ ಗರಿಷ್ಟ 15 ದಿನಗಳಿಗೆ ಮೀರದಂತೆ ಕೂಲಿ ಪಾವತಿಸುವುದು ಕಡ್ಡಾಯ. ತಪ್ಪಿದ್ದಲ್ಲಿ ಕೂಲಿ ವಿಳಂಬ ಪರಿಹಾರ ಭತ್ಯೆ ಪಡೆಯಲು ಅವಕಾಶವಿರುತ್ತದೆ. ಕೂಲಿಕಾರರು ನಮೂನೆ -6 ರಲ್ಲಿ ಕೆಲಸಕ್ಕಾಗಿ ಬೇಡಿಕೆ ಸಲ್ಲಿಸಿದ ನಂತರ ಸೂಚಿಸಿದ ಸ್ಥಳದಲ್ಲಿ ಮತ್ತು ಸಮಯದಲ್ಲಿ ಹಾಜರಾಗಿ ನಿಗಧಿಪಡಿಸಿದ ಕೆಲಸವನ್ನು ನಿರ್ವಹಿಸಬೇಕು. ಕೂಲಿ ಹಣ ನೇರವಾಗಿ ನಿಮ್ಮ ಖಾತೆಗೆ ಇ.ಎಫ್.ಎಂಎಸ್ ಮೂಲಕ ವರ್ಗಾಯಿಸಲಾಗುವುದು. ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಳಿಸಿದರು

ಗ್ರಾಪಂ ನೋಡಲ್ ಅಧಿಕಾರಿ ಹಾಗೂ ಪಶುಪಾಲನ ಇಲಾಖೆ ಸಹಾಯಕ ನಿರ್ದೇಶಕ ಲಿಂಗಾರಾಜ್ ಮಾತನಾಡಿದರು ಸಾರ್ವಜನಿಕರು ನಿಮ್ಮ ಸಮಸ್ಯೆಗಳು ಆಹಾವಲುಗಳಿದ್ದರೆ ನಮಗೆ ನೇರವಾಗಿ ತಿಳಿಸಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವಂತ‌ ಎಲ್ಲಾ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳುವಂತೆ ಸಲಹೇ ನೀಡಿದರು.

ತಾಲೂಕ ಸಾಮಾಜಿಕ‌ ಸಂಯೋಜಕರಾದ ಗೀರಿಶ ಸಭೆಯಲ್ಲಿ ವರದಿ ಮಂಡಿಸಿದರು.


ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಈರಮ್ಮ ಶಿವಣ್ಣ.ವಿಶಾಲಮ್ಮ ಮೈಲಾರಪ್ಪ.ರಜೀಯಾ.ಬಿ ಕಲೀಲ್.ಸುರೇಶ್.ನಾರಯಣರೆಡ್ಡಿ.ಯಶೋದಮ್ಮ.ಮಾರಣ್ಣ.ಗ್ರಾಪಂ ಸಿಬ್ಬಂದಿಗಳಾದ ಹೇಮಣ್ಣ.ಸೇರಿದಂತೆ ವಿವಿಧ ಸಿಬ್ಬಂದಿಗಳು ಗ್ರಾಮಸ್ಥರು. ಸೇರಿದಂತೆ ಹಾಜುರಿದ್ದರು.

 

Leave a Reply

Your email address will not be published. Required fields are marked *

You missed

error: Content is protected !!