ಡಾ ಬಿ ಆರ್ ಅಂಬೇಡ್ಕರ್ ರವರ ಸಮ ಸಮಾಜದ ಪರಿಕಲ್ಪನೆಯ ಸಂವಿಧಾನ ವಿಶ್ವಕ್ಕೆ ಮಾದರಿ ಮಹಾನಾಯಕ ಅಂಬೇಡ್ಕರ್ ರವರ ಕೊಡುಗೆ ದೇಶಕ್ಕೆ ಆಪಾರ ತಹಶೀಲ್ದಾರ್ ಜಿ. ಸಂತೋಷ್ ಕುಮಾರ್
ಶುಕ್ರದೆಸೆ ನ್ಯೂಸ್:ಜಗಳೂರು ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ವೃತ್ತ ಬಳಿ ನೂತನವಾಗಿ ನಿರ್ಮಿಸಿರುವ ಡಾ!! ಬಿ.ಆರ್. ಅಂಬೇಡ್ಕರ್ ರವರ ಕಂಚಿನ ಪುತ್ಥಳಿಗೆ ತಾಲ್ಲೂಕು ಆಡಳಿತ ವತಿಯಿಂದ ಏಪ್ರಿಲ್ 14 ರ ಅಂಬೇಡ್ಕರ್ ಜಯಂತಿ ಅಂಗವಾಗಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಮತ್ತು ತಾಲೂಕು ಆಡಳಿತದಿಂದ ನೂತನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು.
ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿಯು ಸಹ ಸರಳವಾಗಿ ಡಾ.ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ತಹಶೀಲ್ದಾರ್ ರವರು ಪುಷ್ಪಾರ್ಚನೆ ಮಾಡಿ ಅಂಬೇಡ್ಕರ್ ರವರ ನೀಡಿದ ಕೊಡುಗೆಗಳು ಭಾರತ ದೇಶಕ್ಕೆ ದಾರಿದೀಪವಾಗಿದೆ.ಎಂದು ಸ್ಮರಿಸಿದರು.
ಅನೇಕ ಅತ್ಯುನ್ನತ ಪದವಿಗಳನ್ನು ಪಡೆದು ಭಾರತದ ಮೊಟ್ಟಮೊದಲ ಜ್ಘಾನಿಗಳ ಸಾಲಿನಲ್ಲಿ ಸಹಸ್ರಾರು ಹೋರಾಟಗಳ ಮೂಲಕ ಸಾಮಾಜಿಕ ಅಸಮಾನತೆ ದೇಶದಲ್ಲಿನ ಅನೇಕ ಲೋಪದೋಷಗಳಿಗೆ ಮಹಾನ್ ಚಿಕಿತ್ಸೆ ನೀಡಿ ಬಹುಜನರ ಬಹುಸಂಸ್ಕೃತಿಗಳ ಸಂಕೇತದ ಪರಿಕಲ್ಪನೆಯ ಶ್ರೇಷ್ಠ ಸಂವಿಧಾನ ದೇಶಕ್ಕೆ ಅರ್ಪಿಸಿದ ಕೀರ್ತಿ ಮಹಾನ್ ನಾಯಕ ಸಲ್ಲುತ್ತದೆ.ಪ್ರಸ್ತುತ ಯುವ ಸಮಾಜ ಅವರ ಜ್ಞಾನವನ್ನ ಪಾಲನೆ ಮಾಡಿ ಆದರ್ಶರಾಗಿ ಸಮಾಜದಲ್ಲಿ ಜೀವನ ಕಟ್ಟಿಕೊಳ್ಳಬೇಕಾಗಿದೆ. ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ಎಸ್.ರವಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ ತಾಪಂ ಇ.ಓ ಚಂದ್ರಶೇಖರ್. ಪೋಲಿಸ್ ಸಬ್ ಇನ್ಸ್ಪೆಕ್ಟರ್ ಶ್ರೀನಿವಾಸ್. ಪ.ಪಂ ಮುಖ್ಯ ಅಧಿಕಾರಿ ಲೋಕ್ಯಾ ನಾಯ್ಕ ಆರ್. ಐ ಕುಬೇರ ನಾಯ್ಕ.ಡಾ.ಬಿ.ಆರ್ ಅಂಬೇಡ್ಕ ರ್ ಪುತಳಿ ಸಮಿತಿ ಅಧ್ಯಕ್ಷ ತುಪ್ಪದಹಳ್ಳಿ ಪೂಜಾರ್ ಸಿದ್ದಪ್ಪ.ದಲಿತ ಮುಖಂಡರಾದ ಸತೀಶ್.ಸೂರಗೊಂಡನಹಳ್ಳಿ ಕುಬೇಂದ್ರಪ್ಪ. ರಾಜನಟ್ಟಿ ಚಂದ್ರಪ್ಪ. ಒಬಣ್ಣ.ದೇವೇಂದ್ರಪ್ಪ. ನಿಂಗಪ್ಪ ಪ್ರಭು. ಆನೇಕಲ್ ಬಸವರಾಜಪ್ಪ ಮುಖಂಡರಾದ ಇಕ್ಬಾಲ್ ಅಹಮದ್. ತೋರಣಗಟ್ಟೆ ಬಡಪ್ಪ. ಬಾಬು.ಲಿoಗಣ್ಣನಹಳ್ಳಿ ತಿಪ್ಪೇಸ್ವಾಮಿ. ಸೇರಿದಂತೆ ಮುಂತಾದವರು ಹಾಜರಿದ್ದರು.