ಶುಕ್ರದೆಸೆ ನ್ಯೂಸ್: ಕಾಂಗ್ರೆಸ್ ಪಕ್ಷದ ಡಿ ಕೆ ಶಿವಕುಮಾರ್ ಹಾಗೂ ಎಂ ಬಿ ಪಾಟೀಲ್ ರವರ ವಯಕ್ತಿಕ ತೆವಲಿನ ಲಾಭಿಗೆ ಮಣಿದು ನನಗೆ ಕೈ ಟಿಕೆಟ್ ವಂಚಿಸಿ ದೇವೆಂದ್ರಪ್ಪರವರಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ ಎಂದು ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರು ಆಕ್ರೋಶ ಹೊರಹಾಕಿದರು. ತಾಲ್ಲೂಕಿನ ಬಿದರಕೆರೆ ಗ್ರಾಮದ ಅವರ ತೋಟದ ಮನೆ ಆವರಣದಲ್ಲಿ ಶನಿವಾರ ಕಾರ್ಯಕರ್ತರ ಸಮಾಲೋಚನೆ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಂತೆ ಜಗಳೂರು ವಿಧಾನಸಭಾ ಕ್ಷೇತ್ರದ ‌ಕಾಂಗ್ರೆಸ್ ಟಿಕೆಟ್‌ ಪಟ್ಟಿ‌ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪರವರಿಗೆ ಘೋಷಣೆಯಾಗುತ್ತಿದ್ದಂತೆ ಸುದ್ದಿ ತಿಳಿದು ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರು ಅಭಿಮಾನಿಗಳ ವೇದಿಕೆ ಸಭೆಯಲ್ಲಿ ಆಕ್ರೋಶಭರಿತವಾಗಿ ಮಾತನಾಡಿದರು ಕಾಂಗ್ರೆಸ್ ಪಕ್ಷ ಕ್ಷೇತ್ರದಲ್ಲಿ ನಾಲ್ಕು ಬಾರಿ ಸಮೀಕ್ಷೆ ನಡೆಸಿದೆ ಸಮೀಕ್ಷೆಯಲ್ಲಿ ನಮ್ಮ ಹೆಸರು ಕೇಳಿ ಬಂದಿದ್ದು ಆ ಸಮೀಕ್ಷೆಯನ್ನು ಪರಿಗಣಿಸದೆ ಕಾಂಗ್ರೆಸ್ ವರೀಷ್ಠರು ಸೋಲುವ ಅಭ್ಯರ್ಥಿಗೆ ಟಿಕೆಟ್ ನೀಡಿದ್ದಾರೆ .ಕಾಂಗ್ರೆಸ್ ಪಕ್ಷ ನನ್ನನ್ನು ಪರಿಗಣಿಸಿ ಟಿಕೆಟ್ ನೀಡಿದ್ದರೆ 35 ಸಾವಿರ ಮತಗಳ ಅಂತರದಿಂದ ಜಯಗಳಿಸುತ್ತಿದ್ದೆ ಆದರೆ ಪಕ್ಷದ ವರೀಷ್ಠರು ಪಕ್ಷದ ಸಿದ್ದಾಂತ ಮತ್ತು ಮಾನದಂಡವನ್ನೆ ಗಾಳಿಗೆ ತೂರಿ ಪಕ್ಷ ನಿಷ್ಟೆ ಕಾರ್ಯಕರ್ತರಿಗೆ ಮಹಾ ಮೋಸ ವೇಸಗಿ ನಿಷ್ಠಾವಂತ ಕಾರ್ಯಕರ್ತರಿಗೆ ಮಾಡುವಂತ ಘನಘೋರ ಅನ್ಯಾಯ ಪ್ರದೇಶ ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ರವರು ಹಾಗೂ ಎಂ ಬಿ ಪಾಟೇಲ್ ರವರು ಅವರ ಸ್ವಹಿತಾಸಕ್ತಿ ವಾಣಿಜ್ಯ ತೆರಿಗೆ ಇಲಾಖೆ ಕಡತಗಳ ಪೈಲ್ ಗಳಿಗೆ ಸಂಬಂಧಿಸಿದಂತೆ ತೆರಿಗೆ ಇಲಾಖೆಯಲ್ಲಿ ಕಾರ್ಯನಿರ್ಹಿಸುತ್ತಿರುವ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪರವರ ಪುತ್ರ ವಿಜಯಕುಮಾರ್ ರವರ ಬಳಿ ಒಳ ಒಪ್ಪಂದ ಮಾಡಿಕೊಂಡು ಒತ್ತಡ ತರುವ ಮೂಲಕ ದೇವೆಂದ್ರಪ್ಪ ರವರು ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.ನನಗೆ ಕೈ ಟಿಕೆಟ್ ತಪ್ಪಿಸಲು ಅಸಗೋಡು ಜಯಸಿಂಹರ‌ವರ ಷಡ್ಯಂತ್ರವಿದೆ ಎಂದು‌ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಅದಲ್ಲದೆ ಹಾಲಿ‌ ಶಾಸಕ ಎಸ್ ವಿ ರಾಮಚಂದ್ರರವರು ಸಹ ಕಾರಣರಾಗಿದ್ದಾರೆ ಅವರು ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದರು ಇದೀಗ ಬಿ ಜೆ ಪಿ ಪಕ್ಷದಲ್ಲಿದ್ದುಕೊಂಡೆ ಕಾಂಗ್ರೆಸ್ ವರೀಷ್ಠರಿಗೆ ಟಿಕೆಟ್ ನೀಡದಂತೆ ಹುನ್ನಾರವಿದೆ ಏಕೆಂದರೆ ರಾಜೇಶ್ ರವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ತಪ್ಪಿದರೆ ಹಾಲಿ ಶಾಸಕ ಎಸ್ ವಿ ರಾಮಚಂದ್ರರವರ ಗೆಲುವು ಖಚಿತ ಎಂದು ಷಡ್ಯಂತ್ರ ಮಾಡಿ ನನಗೆ ಟಿಕೆಟ್ ಕೈ ತಪ್ಪುವಂತೆ ಮಾಡಿದ್ದಾರೆ .ಆದರೆ ನಾನು ಸುಮ್ಮನೆ ಶಾಂತಿಯಿಂದ ಇರಲಾರೆ ಈಗೇನೆಯಿದ್ದರು ಕ್ರಾಂತಿ ನನ್ನನ್ನು ನಂಬಿದ ಅಭಿಮಾನಿಗಳ ಜೊತೆಗಿದ್ದು ಪಕ್ಷೇತರ ಅಭ್ಯರ್ಥಿಯಾಗಿ ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ದಿನಾಂಕ ಏಪ್ರಿಲ್ 19 ರಂದು ನಾಮ ಪತ್ರ ಸಲ್ಲಿಸುವೆ ಚುನಾವಣೆಯಲ್ಲಿ ಸ್ವರ್ಧಿಸಿ ನೇರವಾಗಿ ಮತದಾರರ ಬಳಿ ಮತ ಯಾಚನೆ ಮಾಡಿ ಗೆಲುವು ಸಾಧಿಸುವೆ ಎಂದು ತಿಳಿಸಿದರು. ಹಾಲಿ ಶಾಸಕ ಎಸ್ ವಿ ರಾಮಚಂದ್ರರವರ‌ ಪುನ ಗೆಲ್ಲುವ ಹಗಲು ಕನಸು ಕಾಣುವರು‌ ಅವರ ಸೋಲು ಖಚಿತ ಅವರ ಸಾಧನೆ ಶೂನ್ಯವಾಗಿದೆ ನಮ್ಮ ಅಧಿಕಾರಾವಧಿಯಲ್ಲಿ 57 ಕೆರೆ ತುಂಬಿಸುವ ಯೋಜನೆಗೆ ಮಾನ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಆಡಳಿತಾವಧಿಯಲ್ಲಿ ಜಾರಿಗೆ ಬಂದ ಯೋಜನೆಗಳ ಮೇಲೆ ಅಧಿಕಾರ ಹಿಡಿಯಲು ಹೊರಟಿದ್ದಾರೆ. ಶಾಸಕರು ಸುಳ್ಳು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಗೌಡ.ಮುಖಂಡ ಎಲ್ ಬಿ ಬೈರೇಶ್.ಕಾಂಗ್ರೆಸ್ ಅರಸಿಕೆರೆ ಬ್ಲಾಕ್ ಅಧ್ಯಕ್ಷರಾದ ಕಂಬತ್ತಹಳ್ಳಿ‌ ಮಂಜಣ್ಣ.ಯಶವಂತ್ ಗೌಡ.ಕಾಂಗ್ರೆಸ್ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್.ಮಾಜಿ ಜಿಪಂ ಸದಸ್ಯ ಎಸ್ ಕೆ ರಾಮರೆಡ್ಡಿ.ಮುಖಂಡ ಪಲ್ಲಾಗಟ್ಟೆ ಶೇಖರಪ್ಪ.ಯು ಜಿ ಶಿವಕುಮಾರ್.ಮಾಜಿ ಜಿಪಂ ಸದಸ್ಯ ನಾಗರತ್ನಮ್ಮ ಮಲ್ಲೇಶಪ್ಪ.ಯರಬಳ್ಳಿ ಉಮಾಪತಿ.ಕಿತ್ತೂರು ಜೆಯ್ಯಣ್ಣ. ಮುಖಂಡ ಬಸಾವಪುರ ರವಿಚಂದ್ರ .ಮಾಜಿ ನಾಯಕ ಸಮಾಜದ ಕಾರ್ಯಧರ್ಶಿ ಲೋಕಣ್ಣ.ಮುಖಂಡ ಚಿತ್ತಪ್ಪ ಸೇರಿದಂತೆ ಆಪಾರ ಕಾರ್ತಕರ್ತರು ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!