ಆಶಾ ಕಾರ್ಯಕರ್ತರ ವೇತನ ಹೆಚ್ಚಳ ಮಾಡುವಂತೆ ಚಳಿಗಾಲ ಅಧಿವೇಶನದಲ್ಲಿ ದ್ವನಿ ಎತ್ತುವಂತೆ ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ ರವರಿಗೆ ಜಗಳೂರು ಆಶಾ ಕಾರ್ಯಕರ್ತರು ಮನವಿ ಸಲ್ಲಿಸಿದರು

,ಮನವಿ ಸ್ವೀಕರಿಸಿದ ಶಾಸಕರು ಕೆಳ ಹಂತದ ಕಾರ್ಯಕರ್ತರ ಸೇವೆ ಶ್ಲಾಘನೀಯವಾಗಿದ್ದು ನಿಮ್ಮ ಪರವಾಗಿ ಸಭೆಯಲ್ಲಿ ದ್ವನಿ ಮಾಡುವೆ ಎಂದು ಭರವಸೆ ನೀಡಿದರು

ಜಗಳೂರು ಸುದ್ದಿ-: ಆಶಾ ಕಾರ್ಯಕರ್ತರ ಸಂಘಟನೆ ಪದಾಧಿಕಾರಿಗಳು ಕ್ಷೇತ್ರದ ಶಾಸಕರ ನಿವಾಸಕ್ಕೆ ತೆರಳಿ ವೇತನ ಹೆಚ್ಚಿಸುವಂತೆ ವಿಧಾನ ಸಭೆಯಲ್ಲಿ ದ್ವನಿ‌ ಮಾಡಿ ಎಂದು ಇತ್ತೀಚೆಗೆ ಶಾಸಕ ಬಿ.ದೇವೇಂದ್ರಪ್ಪ ರವರಿಗೆ ಮನವಿ ಸಲ್ಲಿಸಿ ನಮ್ಮ ಹಬುದಿನದ ಬೇಡಿಕೆ ಹಿಡೇರಿಸುವಂತೆ ಒತ್ತಾಯಿಸಿದರು.
.ಈ ವೇಳೆ ಆಶಾ ಕಾರ್ಯಕರ್ತರ ರಾಜ್ಯ ಕಾರ್ಯಧರ್ಶಿ ಇಂದಿರಾ ಗುರುಸ್ವಾಮಿ ಮಾತನಾಡಿ ನಾವು ಸುಮಾರು ವರ್ಷಗಳಿಂದ ಸಂಬಂಧಿಸಿದ ಆರೋಗ್ಯ ಇಲಾಖೆಯಲ್ಲಿ ಕಡಿಮೆ ವೇತನಕ್ಕಾಗಿ ದುಡಿಯುತ್ತಿದ್ದು ನಮ್ಮ ಜೀವನ ನಿರ್ವಹಣೆ ಕಷ್ಠಕರವಾಗಿದೆ .ಸರ್ಕಾರ ಕನಿಷ್ಠ ವೇತನ ನೀಡದೆ ನಮ್ಮನ್ನ ದುಡಿಸಿಕೊಳ್ಳುತ್ತಿದೆ ತಾವುಗಳು ಸಭೆಯಲ್ಲಿ ದ್ವನಿ ಎತ್ತುವ ಮೂಲಕ ಆಶಾ ಕಾರ್ಯಕರ್ತೆಯರ ನೆರವಿಗೆ ಧಾವಿಸುವಂತೆ ಮನವಿ ಸಲ್ಲಿಸಿದರು .ಆಶಾ ಕಾರ್ಯಕರ್ತರ ಪ್ರಮಾಣಿಕ ಕೆಲಸಕ್ಕೆ ಭದ್ರತೆ ಒದಗಿಸಲು ಮೀನಾಮೇಷ ಎಣಿಸುತ್ತಿದೆ ಎಂದು ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರಕಾರ ಇದುವರೆಗೆ ಮಾಸಿಕ 6 ಸಾವಿರ ರೂ. ಮಾತ್ರ ವೇತನವನ್ನು ನೀಡುತ್ತಿತ್ತು. ಆದರೆ, ನೆರೆಯ ಆಂಧ್ರಪ್ರದೇಶದಲ್ಲಿಆಶಾ ಕಾರ್ಯಕರ್ತೆಯರು ಮಾಸಿಕ 10,500 ರೂ. ವೇತನ ಪಡೆಯುತ್ತಿದ್ದಾರೆ. ಮತ್ತು, ಕರ್ನಾಟಕಕ್ಕೆ ಹೋಲಿಸಿದರೆ ಇತರೆ ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರ ವೇತನ ಜಾಸ್ತಿಯಿದೆ. ಹಾಗಾಗಿ, ಕೇಂದ್ರ ಸರಕಾರದ 7ನೇ ವೇತನ ಆಯೋಗದ ಶಿಫಾರಸ್ಸುಗಳ ಅನ್ವಯ ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 18 ಸಾವಿರ ರೂ. ಕನಿಷ್ಠ ವೇತನ ನೀಡುವಂತೆ ಮತ್ತು ನೌಕರಿಯನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಸಿಐಟಿಯು ಸಂಘಟನೆಯ ನೇತೃತ್ವದಲ್ಲಿಹಲವು ಭಾರಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರ ಬೇಡಿಕೆಯಾಗಿದೆ ಎಂದರು .ರಾಜ್ಯ ಆಶಾ ಕಾರ್ಯಕರ್ತರ ಸಂಘದ ಕಾರ್ಯಧರ್ಶಿ ಇಂದಿರಾ ಗುರುಸ್ವಾಮಿ.ತಾಲ್ಲೂಕು ಅದ್ಯಕ್ಷ ತಿಪ್ಪಕ್ಕ .ಶಶಿಕಲಾ. ಪದ್ಮ.ಲೀಲಾವತಿ‌.ಚಾಂದಿನಿ.ಈರಮ್ಮ ಮಂಜುಳ ಪದ್ಮಾವತಿ.ಸೇರಿದಂತೆ ಪದಾಧಿಕಾರಿಗಳು ಹಾಜುರಿದ್ದರು..

Leave a Reply

Your email address will not be published. Required fields are marked *

You missed

error: Content is protected !!