ಮನುವಾದಕ್ಕೆ ಅಂತ್ಯವಾಡಿದ ಸಂವಿಧಾನದ ಕರ್ತೃ ಅಂಬೇಡ್ಕರ್ ಜೀವಂತ :ಶಾಸಕ ಬಿ.ದೇವೇಂದ್ರಪ್ಪ ಅಭಿಮತ

ಜಗಳೂರು ಸುದ್ದಿ:ವಿಜೃಂಭಿಸುತ್ತಿದ್ದ ಮನುವಾದಕ್ಕೆ ಅಂತ್ಯವಾಡಿದ ಸಂವಿಧಾನದ ಕರ್ತೃ ಡಾ.ಬಿ.ಆರ್ ಅಂಬೇಡ್ಕರ್ ಅವರ ಆಶಯಗಳು ಸಾರ್ವಕಾಲಕ್ಕೂ ಜೀವಂತ ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಮತ ವ್ಯಕ್ತಪಡಿಸಿದರು.

ಶುಕ್ರವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಡಿಎಸ್ ಎಸ್ ಹಾಗೂ ಮಾನವಬಂಧುತ್ವ ವೇದಿಕೆ,ಪ್ರಗತಿಪತ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರ 68 ನೇ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂದಿನ ಯುವಪೀಳಿಗೆ ಬುದ್ದ,ಬಸವ,ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು,ಸಮಾಜದಲ್ಲಿ ಜಾಗೃತಿ ಮೂಡಿಸುವ ಅನಿವಾರ್ಯತೆಯಿದೆ.ಸಚಿವ ಸತೀಶ್ ಜಾರಕಿಹೊಳಿ ಅವರ ನೇತೃತ್ವದ ಮಾನವಬಂಧುತ್ವ ವೇದಿಕೆಯಡಿಯಲ್ಲಿ ಮೂಢನಂಬಿಕೆ ಕಂದಾಚಾರಗಳನ್ನು ಹೋಗಲಾಡಿಸಲು ತಾಲೂಕಿನಲ್ಲಿ ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು’. ಎಂದು ಭರವಸೆ ನೀಡಿದರು.

‘ಪಟ್ಟಣದ ಹೃದಯಭಾಗದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣವಾಗಿರುವುದು ಸಂತಸದ ಸಂಗತಿ ಪುತ್ಥಳಿ ನಿರ್ವಹಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.ಅಂಬೇಡ್ಕರ್ ಅವರ ದೇಹ ದೂರವಾದರೂ ಜ್ಞಾನ ಭಂಡಾರ ನಮಗೆ ಆದರ್ಶವಾಗಿದೆ’. ಎಂದರು‌‌.

ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಮುಖಂಡ ಕೆ.ಪಿ.ಪಾಲಯ್ಯ ಮಾತನಾಡಿ,ಅಂಬೇಡ್ಕರ್ ಅವರ ಪರಿನಿರ್ವಾಣ ಕಾರ್ಯಕ್ರಮದ ಅಂಗವಾಗಿ ಸಚಿವ ಅವರ ನೇತೃತ್ವದ ಸ್ಮಶಾನವಾಸ್ತವ್ಯ ಕಾರ್ಯಕ್ರಮಗಳು ಅಂಬೇಡ್ಕರ್ ವಿಚಾರಧಾರೆಗಳನ್ನು ಸಮಾಜಕ್ಕೆ ಪರಿಚಯಿಸುವ ಮೂಲಕ ಸಂವಿಧಾನದ ಆಶಯಗಳನ್ನು ಸಕಾರಗೊಳಿಸಲಾಗುತ್ತಿವೆ.ಮನುವಾದಿಗಳು ಸರ್ಕಾರಿ ಸ್ವಾಮ್ಯದ ಇಲಾಖೆಗಳನ್ನು ಖಾಸಗೀರಣಗೊಳಿಸುವ ಮೂಲಕ ಸಂವಿಧಾನಬದ್ದ ಮೀಸಲಾತಿಗೆ ಕೊಡಲಿಪೆಟ್ಟು ತರುವುದು ಆತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.

ವಕೀಲ ಸಂಘದ ತಾಲೂಕು ಘಟಕದ ಅಧ್ಯಕ್ಷ ಟಿ. ಬಸವರಾಜ್ ಮಾತನಾಡಿ,’ರಾಜಪ್ರಭುತ್ವ ವ್ಯವಸ್ಥೆಯಲ್ಲಿ ಬಂಡವಾಳ ಶಾಹಿಗಳಿಗೆ ಸೀಮಿತವಾಗಿದ್ದ ಮತದಾನದ ಹಕ್ಕನ್ನು ಸಾರ್ವತ್ರೀಕರಣಗೊಳಿಸಿದ ಅಂಬೇಡ್ಕರ್ ಸಂವಿಧಾನವನ್ನು ವಿರೋಧಿಸುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳ ಮನಸ್ಥಿತಿ ಬದಲಾಗಬೇಕು’.ಎಂದರು.

ಡಿಎಸ್ ಎಸ್ ಮುಖಂಡ ಜಿ.ಎಸ್.ಶಂಭುಲಿಂಗಪ್ಪ ಮಾತನಾಡಿ,’ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಗುಲಾಮಗಿರಿಯಿಂದ ನರಳುವ ವೇಳೆ, ಅಸ್ಪೃಶ್ಯತೆ ವಿಜೃಂಭಣೆ ಅನುಭವಿಸಿ ಸಂವಿಧಾನ ರಚಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿ ಶೋಷಿತ ವರ್ಗಕ್ಕೆ ಬೆಳಕಾಗಿದ್ದಾರೆ.ಆದರೆ ಇಂದಿಗೂ ಕೆಲ ರಾಜಕೀಯ ಹಿತಾಸಕ್ತಿಯಿಂದ ಜಾತಿ ವ್ಯವಸ್ಥೆ ತಾಂಡವಾಡುತ್ತಿರುವುದು ಶೋಚನೀಯ ಸ್ಥಿತಿ’. ಎಂದು ವಿಷಾಧಿಸಿದರು.

ಸಂದರ್ಭದಲ್ಲಿಪ.ಪಂ‌.ಅಧ್ಯಕ್ಷ ನವೀನ್ ಕುಮಾರ್,ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ,ತಾ.ಪಂ ಇಓ ಕೆಂಚಪ್ಪ,ಪ.ಪಂ.ಮುಖ್ಯಾಧಿಕಾರಿ ಲೋಕ್ಯಾನಾಯ್ಕ,ಪಿಐ ಶ್ರೀನಿವಾಸ್ ರಾವ್,ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರಪ್ಪ,ಸಿಡಿಪಿಓ ಬೀರೇಂದ್ರಕುಮಾರ್,ತಾಲೂಕು ನಾಯಕ ಸಮಾಜದ ಕಾರ್ಯದರ್ಶಿ ವಕೀಲ ತಿಪ್ಪೇಸ್ವಾಮಿ,ಮುಖಂಡರಾದ ಬಿ.ಮಹೇಶ್ವರಪ್ಪ,ಪಲ್ಲಾಗಟ್ಟೆ ಶೇಖರಪ್ಪ,ಕುಬೇಂದ್ರಪ್ಪ,ರಂಗಪ್ಪ,ಸತೀಶ್ ಮಲೆಮಾಚಿಕೆರೆ,ಧನ್ಯಕುಮಾರ್,ರಾಜನಹಟ್ಟಿ ಚಂದ್ರಪ್ಪ,ಹನುಮಂತಾಪುರಸತೀಶ್ ,ಸತ್ಯಮೂರ್ತಿ,
ವೆಂಕಟೇಶ್,ಹೊನ್ನೂರಪ್ಪ,ಓಬಣ್ಣ,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!