filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42;

ಬಾಲ್ಯದಲ್ಲಿಯೇ ಭರತ ನಾಟ್ಯ ಕಲೆಯನ್ನ ಮೈಗೂಡಿಸಿಕೊಂಡು ಜನಮೆಚ್ಚುಗೆಗೆ ಪಾತ್ರಳಾದ ಕೆ.ಶ್ರಾವಣಿ.

ಕಲೆ ಯಾರಪ್ಪನ ಸ್ವೊತ್ತಲ್ಲ ಕಲೆಗಾರರ ಸ್ವೊತ್ತು ಯಾರು ಶ್ತದ್ದ ಭಕ್ತಿಯಿಂದ ತನ್ನಲ್ಲಿ ಹುದುಗಿರುವ ಕಲೆಯನ್ನ ವೇದಿಕೆ ಸಮಾರಂಭಗಳಲ್ಲಿ ಅಭಿವ್ಯಕ್ತಿಗೋಳಿಸಿ ಪ್ರಸ್ತುತಪಡಿಸಿ ಜನಮೆಚ್ಚುಗೆ ಪಡುವಂತೆ ಕಲೆಯನ್ನ ಪ್ರದರ್ಶಿಸುವರು ಅವರ ಕಲೆಯ ನೆಲೆಯನ್ನ ಸಮಾಜ ಗುರುತಿಸಿ ಉನ್ನತ ಮಟ್ಟಕ್ಕೆ ಕೊಂಡುಯ್ಯುಲು ಸಾದ್ಯವಾಗುತ್ತದೆ.

ಮೂಲತ ದಾವಣಗೆರೆ ಮೂಲದ ಕೆ. ಶ್ರಾವಣಿ ನಾಲ್ಕನೇ ತರಗತಿ ಅಭ್ಯಾಸ ಮಾಡತ್ತಿರುವ ಈಕೆ ಚಿಕ್ಕ ವಯಸ್ಸಿನಲ್ಲಿಯೇ ಯಾವ ಡ್ಯಾನ್ಸ್ ಶಿಕ್ಷಕರಿಲ್ಲದೆ ತನ್ನ ಅತ್ತೆಯ ಮಾರ್ಗದರ್ಶನದಲ್ಲಿ ಭರತ ನಾಟ್ಯ ಕಲಿತು ಕಲೆಯನ್ನ ಮೈಗೂಡಿಸಿಕೊಂಡು ವಿವಿಧ ಸಮಾರಂಭ ಕಾರ್ಯಕ್ರಮ ವೇದಿಕೆಗಳಲ್ಲಿ ಜನಮೆಚ್ಚುವಂತೆ ಭರತ ನಾಟ್ಯ ನೃತ್ಯ ಮಾಡುವ ನೃತ್ಯಗಾತಿ ಹೌದು . ವಿಧ್ಯಾರ್ಥಿ ಶ್ರಾವಣಿ ಭಾರತದ ಕಲೆಯನ್ನ ಪ್ರಚಾರ ಪಡಿಸುವ ಒತ್ತಾಸೆ ಹೊಂದಿದ್ದಾಳೆ. ದಾವಣಗೆರೆ ನಗರದ ಶ್ರಾವಣಿ ತಂದೆ ಕೊಟ್ರೇಶ್ ತಾಯಿ ರೇಣುಕಮ್ಮ ಇವರ ದಂಪತಿಗಳ ಪುತ್ರಿಯಾಗಿ ಜನಿಸಿ ಹೆತ್ತವರ ಇಚ್ಚೆಯಂತೆ ಹಾಗೂ ಅತ್ತೆಯ ಒತ್ತಾಸೆಯಂತೆ ಮನೆಯಲ್ಲಿ ಒಂದು ಬಾರಿ ಮೈಕೋ ಮುಂದೆ ಸಹಜವಾಗಿ ಡ್ಯಾನ್ಸ್ ಮಾಡುತ್ತಾಳೆ ಆಗ ಅವಳ ಅತ್ತೆ ತುಂಬಾ ಉತ್ತಮವಾಗಿ ನೃತ್ಯ ಮಾಡುತೀಯ ಭರತ ನಾಟ್ಯ ಕಲಿ ಎಂದು ಪ್ರೋತ್ಸಹ ನೀಡಿದಂತೆ ದಿನಂಪ್ರತಿ ಅಭ್ಯಾಸ ಮಾಡಲು ಪ್ರಯತ್ನಿಸಿದ ಈಕೆ ಇದೀಗ ಉತ್ತಮ ನೃತ್ಯ ಮಾಡುವ ಮೂಲಕ ಎಲ್ಲಾರ ಗಮನ ಸೆಳೆಯುವ ಶ್ರಾವಣಿ ಜನಮೆಚ್ಚುವಂತ ಭರತನಾಟ್ಯ ಕಲೆಯನ್ನ ಮೈಗೂಡಿಸಿಕೊಂಡಿದ್ದಾಳೆ.ವೇದಿಕೆಗಳಲ್ಲಿ ನಿರ್ಭಯವಾಗಿ ನೃತ್ಯ ಮಾಡುವ ಮೂಲಕ ಜನ ಮೆಚ್ಚುಗೆ ಪಡೆದು ನೋಡುಗರು ಮೂಕವಿಸ್ಮಿತರಾಗುವಂತೆ ಪ್ರದರ್ಶಿಸುವಳು.ಈಕೆ ಪ್ರಸ್ತುತದಲ್ಲಿ ..ಕನ್ನಡ ಮಾದ್ಯಮ ಕೆ .ಕೆ..ಶಾಲೆಯಲ್ಲಿ 4 ನೇ ತರಗತಿ ಅಭ್ಯಾಸ ಮಾಡುತ್ತಿದ್ದಾಳೆ .ಶಾಲಾ ಸಮಾರಂಭಗಳಲ್ಲಿ ಶ್ರಾವಣಿ ನೃತ್ಯವೆ ನೋಡುಗರ ಕಣ್ಣಿಗೆ ಮೃದ ನೀಡಲಿದೆ .


ಜನರ ಚಪ್ಪಾ ಸಿಳ್ಳೆ ಹೊಡೆದು ಪ್ರೋತ್ಸಹಿಸುವ ಜನಾಭಿಮಾನಿಗಳು ಮನಸ್ಸು ಮಾಡಿದರೆ ಯಾರನ್ನು ಎಲ್ಲಿಗೆ ಯಾವ ಸ್ಥಾನಕ್ಕೂ ಬೇಕಾದರು ಕೂರಿಸುವ ಶಕ್ತಿಧಾತರು .
ಏಕೆಂದರೆ ನಾವು ಮಾಡುವ ಉತ್ತಮ ಕಾರ್ಯಕ್ಕೆ ಜನರು ನೀಡುವ ಸಹಕಾರಕ್ಕೆ ಬೆಲೆ ನೀಡಲು ಸಾದ್ಯವಿಲ್ಲ ಅಂತವರ ಮನಗೆದ್ದ ಶ್ರಾವಣಿ ಮತ್ತೋಷ್ಟು ವಿವಿಧ ಸಮಾರಂಭಗಳಲ್ಲಿ ನೃತ್ಯ ಪ್ರದರ್ಶಿಸಿ ರಾಜ್ಯಮಟ್ಟದಂತ ಜಿ ಕನ್ನಡದಂತ ವೇದಿಕೆಗಳಲ್ಲಿ ಆವಕಾಶ ಸಿಗಲಿ ಎಂದು ಶುಕ್ರದೆಸೆ ನ್ಯೂಸ್ ಪತ್ರಿಕೆ ಆಶಿಸಲಿದೆ. . .ಭರತ ನಾಟ್ಯ ಪ್ರಾಚೀನ ಕಲೆಗಳಲ್ಲಿ ಇದು ಒಂದಾಗಿದೆ ಇತ್ತಿಚಿನ ದಿನಗಳಲ್ಲಿ ಈ ಕಲೆಗೆ ಮಕ್ಕಳು ಹೆಚ್ಚು ಒತ್ತು ನೀಡಲಿದ್ದಾರೆ ಆದ್ದರಿಂದ ಇಂತ ಸಾಮಾನ್ಯ ಕುಟುಂಬದಲ್ಲಿ ಜನಿಸಿರುವ ಪ್ರತಿಭೆಗಳಿಗೆ ಮತ್ತೋಷ್ಟು ಆವಕಾಶಗಳು ಲಭಿಸಲಿ ಎಂದು ಹಾರೈಸುವೆ.

ಸಂಪಾದಕ

                    

Leave a Reply

Your email address will not be published. Required fields are marked *

You missed

error: Content is protected !!