ನುಡಿ ಹಬ್ಬ ನಗೆ ಹಬ್ಬ ಜಗಳೂರಿನಲ್ಲಿ ಜಲೋತ್ಸವ ಸಂಭ್ರಮದ ಹಬ್ಬ ಜರುಗಲು ಸಜ್ಜು
ಕನ್ನಡದ ನುಡಿ ಜಾತ್ರೆಗೆ ಪ್ರತಿಯೊಬ್ಬರು ಸಹಕಾರ ನೀಡಿ ಕನ್ನಡದ ತೇರು ಎಳೆಯೋಣ ತಾಲ್ಲೂಕು ಮಟ್ಟದ ಅನುಷ್ಠಾನ ಅಧಿಕಾರಿಗಳೊಂದಿಗೆ ಶಾಸಕರ ನೇತೃತ್ವದಲ್ಲಿ ಪಟ್ಟಣದ ಗುರುಭವನದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡು ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿದರು ತನು ಮನ ಧನ ಸಹಾಯ ನೀಡಿ ಸಹಾಯಸ್ತ ಚಾಚುವ ಮೂಲಕ 14ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ಆಚರಿಸೋಣ ನಾಡ ನುಡಿ ಸೇವೆಗೆ ಸದಾ ಸೇವೆಗೆ ಸಿದ್ದರಾಗುವಂತೆ ಸಲಹೇ ನೀಡಿದರು
ಪಟ್ಟಣದ ಬಯಲು ರಂಗ ಮಂದಿರ ವೇದಿಕೆಯಲ್ಲಿ ದಿನಾಂಕ ಜನವರಿ 11 _12 ರಂದು ಜಿಲ್ಲಾ ಸಮ್ಮೇಳನ ಜರುಗಲಿದೆ ದಿನಾಂಕ 13 ರಂದು ಜಗಳೂರು ಜಲೋತ್ಸವ ರಸ ಮಂಜರಿ ಕಾರ್ಯಕ್ರಮ ನಡೆಯಲಿದೆ.
ಕಳೆದ ಮೂವತ್ತು ವರ್ಷಗಳ ನಂತರ ಕ್ಷೇತ್ರದಲ್ಲಿ 14 ನೇ ಜಿಲ್ಲಾ ಸಮ್ಮೇಳನದ ಉದ್ಗಾಟನೆಗೆ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಡಾ ಪುರಷೋತ್ತಮ ಬಿಳಿಮಲೆ ಆಗಮಿಸಲಿದ್ದು ಸಮ್ಮೇಳನದಲ್ಲಿ ಮಹಾಲಿಂಗ ರಂಗ ವೇದಿಕೆಯನ್ನ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜನ ಉದ್ಗಾಟಿಸಲಿದ್ದು ಜಿಲ್ಲಾ ಸಂಸದರಾದ ಪ್ರಭಾ ಮಲ್ಲಿಕಾರ್ಜನ ಸೇರಿದಂತೆ ಸಮ್ಮೇಳನದ ಸರ್ವಾಧ್ಯಕ್ಷರಾದ ಎ.ಬಿ ರಾಮಚಂದ್ರಪ್ಪ ಜಿಲ್ಲಾಧ್ಯಕ್ಷರಾದ ವಾಮದೇವಪ್ಪ .ಮಾಜಿ ಶಾಸಕರುಗಳು ವಿಧಾನ ಪರಿಷತ್ ಸದಸ್ಯರುಗಳು.ಕ ಸಾ.ಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ್ ಜೋಶಿ ಹಾಗೂ ಸಾಹಿತಿಗಳು ಚಿಂತಕರು ಭಾಗವಹಿಸಿ ಕಾರ್ಯಕ್ರಮವನ್ನ ಯಶಸ್ವಿಗೋಳಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮೆರವಣಿಗೆ.ಧ್ವಜಾರೋಹಣ. ವಿವಿಧ ಸಾಹಿತ್ಯಗೋಷ್ಠಿ ಜಗಳೂರಿನ ಪರಂಪರೆ ಸಾಂಸ್ಕ್ರತಿಕ ನೆಲೆಗಳು ವಿವಿಧ ಕಾರ್ಯಕ್ರಮಗಳು ಮತ್ತು ವಿವಿಧ ಕವಿಗಳ ಕೃತಿ ಲೋಕರ್ಪಣೆ .ವಿಚಾರಗೋಷ್ಠಿಗಳು ಸಾಧಕರ ಸನ್ಮಾನ ಹತ್ತು ಹಲವು ಬಗೆಯ ಕಾರ್ಯಕ್ರಮಗಳು ಜಗಳೂರು ಕ್ಷೇತ್ರದಲ್ಲಿ ಕನ್ನಡ ನುಡಿ ಜಾತ್ರೆ ಅದ್ದೂರಿಯಾಗಿ ಜರುಗಲಿದೆ . ಈಗಾಗಲೇ ಕನ್ನಡದ ರಥ ತಾಲ್ಲೂಕಿನ ಪ್ರತಿ ಗ್ರಾಮಗಳಿಗೆ ತೆರಳಿ ಸಮ್ಮೇಳನಕ್ಕೆ ಜನರನ್ನು ಕರೆತರುವ ಕೆಲಸ ಮಾಡುವುದರ ಜೊತೆಗೆ ನಾಡುನುಡಿ ಬಗ್ಗೆ ಜಾಗೃತಿ ಸಂದೇಶ ಐತಿಹಾಸಿಕ ದಾಖಲೆಯಾಗಲಿದೆ. ಮೂರನೇ ದಿನದಂದು ಜಲೋತ್ಸವ ಜರುಗಲಿದೆ ಜಗಳೂರು ಇತಿಹಾಸದ ಬಗ್ಗೆ ಸಾಕ್ಷ್ಯಚಿತ್ರದ ಮೂಲಕ ಜಗಳೂರು ಪರಂಪರೆ ತಿಳಿಯಲಿದೆ.ನಂತರ ಖ್ಯಾತ ಸರಿಗಮಪ ಗಾಯಕ ಅರ್ಜುನ್ ಜನ್ಯರವರ ತಂಡದವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ .
ಇಂತ ವಿಶಿಷ್ಟ ಜಿಲಾ ಸಾಹಿತ್ಯ ಸಮ್ಮೇಳನದಲ್ಲಿ ತಮಗೆ ನೀಡಿರುವ ಜವಾಬ್ದರಿಗಳುನ್ನು ಚಾಚುತಪ್ಪದೆ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸಲಹೇ ನೀಡಿದರು
ಕಸಾಪ .ಜಿಲ್ಲಾಧ್ಯಕ್ಷ ವಾಮದೇವಪ್ಪ ಮಾತನಾಡಿ ಶಾಸಕರು ಉತ್ಸಹದಿಂದ ನಾಡ ಹಬ್ಬವನ್ನ ಅದ್ದೂರಿಯಾಗಿ ಆಚರಿಸಲು ಈಗಾಗಲೇ ಎಲ್ಲಾರ ಸಹಕಾರದಿಂದ ಕಾರ್ಯಚಟುವಟಿಕೆಗಳು ನಡೆಯಲಿದ್ದು ಸಮ್ಮೇಳನ ಒಂದು ಐತಿಹಾಸಿಕ ದಾಖಲೆಯಾಗಲಿದೆ ಕನ್ನಡಮ್ಮ ಸೇವೆ ಮಾಡಿದರೆ ತಾಯಿ ಭುವನೇಶ್ವರಿ ನಮನ್ನ ಕೈಬಿಡುವುದಿಲ್ಲ ಎಲ್ಲಾರು ಕೈಜೊಡಿಸುವಂತೆ ಕರೆ ನೀಡಿದರು .
ಪೂರ್ವಭಾವಿ ಸಭೆಯಲ್ಲಿ
.
ಪ್ರಾಸ್ತವಿಕವಾಗಿ ಜಗದೀಶ ಕೂಲಂಬಿ ಮಾತನಾಡಿದರು.
ಈ ಸಂದರ್ಭದಲ್ಲಿ
ತಹಶೀಲ್ದಾರ್ ಸೈಯದ್ ಖಲಿಂ ಉಲಾ .ಜಿಲ್ಲಾ ಕಸಾಪ ಅಧ್ಯಕ್ಷ ವಾಮದೇವಪ್ಪ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ ಎಲ್ ತಿಪ್ಪೇಸ್ವಾಮಿ. ಎನ್. ಟಿ ಎರ್ರಿಸ್ವಾಮಿ. ತಾ.ಕಸಾಪ ಅಧ್ಯಕ್ಷೆ ಸುಜಾತ. ಬಿ.ಮಹೇಶ್ವರಪ್ಪ .ಡಿ. ಡಿ ಹಾಲಪ್ಪ. ತಾಪಂ ಇಓ ಕೆಂಚಪ್ಪ. ಪ್ರಾಂಶುಪಾಲರಾದ ಬಿ.ಎನ್ ಸ್ವಾಮಿ. ದಿಳ್ಯಪ್ಪ. ತಾಲ್ಲೂಕು ಮಟ್ಟದ ಅಧಿಕಾರಿಗಳು ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಹಾಜುರಿದ್ದರು