ಪಂಚಾಯಿತಿ ಕಛೇರಿಗೆ ತಿರುಗಿ ನೋಡದ ಬಸವನಕೋಟೆ ಪ್ರಭಾರೆ ಪಿ.ಡಿ.ಓ ರಾಘವೇಂದ್ರ ನಯವಂಚಕ
ಜಗಳೂರು ತಾಲ್ಲೂಕಿನ ಬಸವನಕೋಟೆ ಗ್ರಾಮ ಪಂಚಾಯಿತಿ ಪಿಡಿಓ ಪಂಚಾಯಿತಿ ಕಾರ್ಯಾಲಕ್ಕೆ ಸರಿಯಾದ ರೀತಿ ಹಾಜುರಾಗುತ್ತಿಲ್ಲ .15 ದಿನಕೊಮ್ಮೆ ವಾರಕ್ಕೋಮೆ ಮಾವನ ಮನೆಗೆ ಬಂದಂತೆ ಬರುವ ಪಿಡಿಓ ರಾಘವೇಂದ್ರನಿಗೆ ಹೇಳುವವರಿಲ್ಲ ಕೇಳುವವರಿಲ್ಲದಂತಾಗಿದೆ .
ಇವನು ಆಡಿದ್ದೆ ಆಟ ಎಂಬಂತೆ ಸರ್ಕಾರಿ ಕೆಲಸ ನಾನು ಮಾಡುವುದು ಎಂಬುದನ್ನ ಬಹುಶ ಮರೆತುಹೋಗಿದ್ದಾನೆ. ಇಸ್ವತ್ತು ಮಾಡಿಸಲು ಬರುವಂತ ಸಾರ್ವಜನಿಕರ ಕೆಲಸಗಳಿಗೆ ಹಿನ್ನಡೆ ಮಾಡುವ ನಯವಂಚಕ ಪಿಡಿಓ ಬಣ್ಣಬಯಲಾಗಿದೆ . ಪಂಚಾಯಿತಿಗೆ ಸಾರ್ವಜನಿಕರಿಂದ ವಸೂಲಿಯಾದ ಕಂದಾಯದ ಹಣವನ್ನ ನುಂಗಿ ನೀರು ಕುಡಿದಿದ್ದಾನೆ .ನೋಡಲು ನಯವಾಗಿ ಮಾತನಾಡುವ ಈತ ರಾಜಕೀಯ ಮಾಡುತ್ತಾನೆ. ನನಗೆ ಅವರು ಇವರು ಗೊತ್ತು ಎಂದು ಗತ್ತು ತೋರಿಸಿಕೊಂಡು ಪಿಲ್ಡಪ್ ರಾಜನಂತೆ ವರ್ತಿಸುವ ಈತ ಸಾರ್ವಜನಿಕರಿಂದ ವಸೂಲಿಯಾದ 6 ಲಕ್ಷ ಕಂದಾಯದ ಹಣವನ್ನು ಬೇಕಾಬಿಟ್ಟಿ ಬಳಕೆ ಮಾಡಿಕೊಂಡಿರುತ್ತಾನೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ .
ನಾಗರೀಕರು ಪಂಚಾಯಿತಿಗೆ ಕೆಲಸ ನಿಮಿತ್ತ ಬರುವ ಸಾರ್ವಜನಿಕರಿಗೆ ಈತ ಮಿನಿಸ್ಟರ್ ಕಂಡ ಹಾಗೆ ಕಾಣುವನಂತೆ ಆಮಾವಾಸೆ ಹುಣ್ಣಿಮೆಗೆ ಬರುವ ಪಿಡಿಓ ಕರಾಳ ಮುಖವಾಡ ಕಳಚಿ ಬಿದ್ದಿದೆ. .ಈತನ ಹಾಜುರಾತಿ ಪರಿಶೀಲನೆ ಮಾಡಿದರೆ ಸಾಕು ಎಷ್ಟು ದಿನಕ್ಕೊಮ್ಮೆ ಪಂಚಾಯಿತಿ ಕಛೇರಿಗೆ ಬರುವನು ಎಂದು ತಿಳಿಯಲಿದೆ ಕೆಲ ಸದಸ್ಯರು ಕೂಡ ಈತನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ..ತಾಪ, ಇಓ ಕೆಂಚಪ್ಪರವರು ಇಂತ ಪಿಡಿಓ ಗಳನ್ನ ಹದ್ದುಬಸ್ತಿನಲ್ಲಿಡಲು ವಿಫಲರಾಗಿದ್ದಾರೆ.