ತಾಯಿ ಭುವನೇಶ್ವರಿ ರಥ ಸಂಚಾರ ನಿರ್ವಹಣೆ ಸಮಿತಿ ಅಧ್ಯಕ್ಷ ಬಿ ಮಹೇಶ್ ರವರ ನೇತೃತ್ವದಲ್ಲಿ ಯಶಸ್ವಿಯಾಗಿ ಸಾಗಿದ ಕನ್ನಡ ರಥ

ಜಗಳೂರು‌ ಬೌಗೋಳಿಕವಾಗಿ ಬರದ ನಾಡು ಆಗಿರಬಹುದು ಆದರೆ ನಾಡು ನುಡಿ ಕನ್ನಡ ಪ್ರೇಮಾ ಭಾಷೆಗೆ ಏನು ಕಡಿಮೆಯಿಲ್ಲ ಎಂದು ತೋರಿಸಿಕೊಟ್ಟ ಇಲ್ಲಿನ ಜನತೆ. ಜಗಳೂರಿನಲ್ಲಿ ನಡೆಯುವ ದಿನಾಂಕ ೧೧. ೧೨ .೧೩ ರಂದ ಜರುಗಲಿರು 14 ನೇ ಜಿಲ್ಲಾ ಸಮ್ಮೇಳನ
ಮತ್ತು ಜಗಳೂರು ಜಲೋತ್ಸವದ ಅಂಗವಾಗಿ ಕ್ಷೇತ್ರದ ಶಾಸಕ.ಬಿ ದೇವೇಂದ್ರಪ್ಪರವರ ಒತ್ತಾಸೆಯಂತೆ ಗ್ರಾಮೀಣ ಬಾಗಕ್ಕೆ ಕನ್ನಡ ರಥ ತೆರಳಿ ಜನರುನ್ನು ಕರೆ ತರುವುದು ಹಾಗೂ ಕನ್ನಡ ನುಡಿ ಹಬ್ಬದ ಸಾರವನ್ನು ತಿಳಿಸು ಮಹತ್ವಕಾಂಕ್ಷೆಯಂತೆ ಕನ್ನಡ ರಥ ಗ್ರಾಮೀಣ ಬಾಗಗಳಿಗೆ ಯಶಸ್ವಿಯಾಗಿ ಸಾಗತ್ತಿದ್ದಂತೆ .ಗ್ರಾಮೀಣ ಬಾಗದ ಜನರು ಕನ್ನಡ ರಥ ಗ್ರಾಮಕ್ಕೆ ಪ್ರವೇಶವಾಗುತ್ತಿದ್ದಂತೆ ಹಾರ ಹಿಡಿದು ವಿವಿಧ ವಾಧ್ಯಗೋಷ್ಠಿಗಳ ಮೂಲಕ ಸ್ವಾಗತಿಸುವ ಸಂಭ್ರಮವೆ ಸಂಭ್ರಮ .ಮಹಿಳೆಯರು ಮಕ್ಕಳು ಕುಂಬಮೇಳ ಹೊತ್ತು ಕನ್ನಡಮ್ಮನ ರಥ ಮುಂದೆ ಸಾಲಾಗಿ ನಿಂತು ಗೌರವಿಸಿ ಹಾರ ತುರಾಯಿ ಹಣ್ಣು ಕಾಯಿಯೊಂದಿಗೆ ಕೈಮುಗಿದು ಪೂಜಿಸಿ ತಾಯಿ ಭುವನೇಶ್ವರಿಗೆ ಜೈ ಎನ್ನುವ ಜನತೆ ಜೈಘೋಣಗಳ ಹರ್ಷದ್ಗೋರ .ಮತ್ತು‌ ಶಾಲಾ ಮಕ್ಕಳು ಸಿಂಗಾರಗೊಂಡು ಡ್ಯಾನ್ಸ್ ನೃತ್ಯಗಳ ಮೂಲಕ ಗ್ರಾಮದಿಂದ ಬಿಳ್ಕೋಡುವ ಸಂಸ್ಕೃತಿ ಸಂಸ್ಕಾರ ಕನ್ನಡ ನಾಡ ಜನಾಭಿಮಾನಕ್ಕೆ ಸಾಕ್ಷಿಯಾಯಿತು.

ಇನ್ನು ನಿರ್ವಹಣೆ ಸಮಿತಿ ಅಧ್ಯಕ್ಷರಾದ ಬಿ ಮಹೇಶಣ್ಣರವರು ಕನ್ನಡ ನಾಡು ನುಡಿ.ನೆಲ ಜಲಕ್ಕಾಗಿ ದಿನಾಂಕ ಜನವರಿ ಅನ್ನೂಂದರಿಂದ ಅದಿಮೂರರ ದಿನಾಂಕದವರೆಗೂ ಜಗಳೂರು ಜಗಮಗಿಸುವ ಕನ್ನಡ ನುಡಿ ಹಬ್ಬ ಮತ್ತು ಜಗಳೂರು ಜಲೋತ್ಸವ ಹಬ್ಬಕ್ಕೆ ತಾವುಗಳೆಲ್ಲ ಬರುವಂತೆ ಜನರನ್ನ ಕೈ ಮುಗಿದ ಕರೆಯುವ ಸೌಜನ್ಯದ ಮಾತುಗಳಿಗೆ ಪೀದಾ ಆಗಿರು ತಾಲ್ಲೂಕಿನ ಜನತೆಯ ಪ್ರೀತಿ ವಿಶ್ವಾಸಗಳ ಅಂದರವೆ ಬೆಲೆ ಕಟ್ಟಲು ಸಾದ್ಯವಿಲ್ಲ .ಒಟ್ಟಾರೆ ಕನ್ನಡ ಕಟ್ಟಾಳು ‌ನಿವೃತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ .ಮಹೇಶ್ ನೇತೃತ್ವದಲ್ಲಿ ಕನ್ನಡ ರಥ ಒಂದು ಇತಿಹಾಸ ದಾಖಲೆ ಎಂದು ಹೇಳಲು ಸಂತೋಷವಾಗುತ್ತದೆ. .ಯಶಸ್ವಿಯಾಗಿ ಸಾಗಿದೆ ಅದ್ದೂರಿ ಸ್ವಾಗತದ ಮೂಲಕ ಹಬ್ಬವೆ ಹಬ್ಬ ಇಂತ ಪುಣ್ಯದ ಕಾರ್ಯಕ್ಕೆ ಸಂತೋಷದ ಕಡಲು…….

Leave a Reply

Your email address will not be published. Required fields are marked *

You missed

error: Content is protected !!