ನಾಡು ನುಡಿ ಜಾತ್ರೆ ಮತ್ತು ಜಲೋತ್ಸವ ಸಂಭ್ರಮಕ್ಕೆ ಮಧುವಣಗಿತ್ತಿಯಂತೆ ಸಜ್ಜಗೊಂಡಿರುವ ಬಯಲು ರಂಗಮಂದಿರ ವೇದಿಕೆಯನ್ನ ವೀಕ್ಷಣೆ ನಡೆಸಿದ
:ಶಾಸಕ ಬಿ.ದೇವೇಂದ್ರಪ್ಪ

ಜಗಳೂರು ಸುದ್ದಿ

ದಿನಾಂಕ :ಜ 11 ,12. ,13 ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಜಲೋತ್ಸವ ಕಾರ್ಯಕ್ರಮಕ್ಕೆ ಜಗಮಗಿಸುವಂತೆ ಜಗಳೂರು ಪಟ್ಟಣ ಮಧುವಣಗಿತ್ತಿಯಂತೆ ಶೃಂಗಾರ ತೋರಣದಂತೆ ಕಂಗೋಳಿಸುತ್ತಿದೆ.

ಪಟ್ಟಣದ ಬಯಲು ರಂಗಮಂದಿರದಲ್ಲಿ ಎರಡುದಿನಗಳ ಕಾಲ ಜಿಲ್ಲಾ ಸಾಹಿತ್ಯ ಸಮ್ಮೇಳನದ ಮೊದಲನೇ ದಿನದಂದು ಪ್ರಗತಿಪರ ಚಿಂತಕ ಸಾಹಿತಿ ಎ.ಬಿ‌ .ರಾಮಚಂದ್ರಪ್ಪರವರ ಸಮ್ಮೇಳನದ ಸರ್ವಾಧ್ಯಕ್ಷರ ನೇತೃತ್ವದಲ್ಲಿ
14 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಬೆಳಿಗ್ಗೆ 8 ಗಂಟೆಗೆ ರಾಷ್ಟ್ರ,ನಾಡ ಧ್ವಜಗಳ ಧ್ವಜಾರೋಹಣ,9 ಗಂಟೆಗೆ ಮೆರವಣಿಗೆ ಬೆಳ್ಳಿರಥದ ಮೂಲಕ 100 ಡೊಳ್ಳು,ಹಲಗೆ,ಕಹಳೆ,ವಾದ್ಯವೃಂದಗಳು,
10 ಕಲಾತಂಡಗಳು ಮೂಲಕ ಅದ್ದೂರಿ ಮೆರವಣಿಗೆ ಸೇರಿದಂತೆ.ಕುಂಭಮೇಳದ ಮೂಲಕ ಬಯಲು ರಂಗಮಂದಿರ ವೇದಿಕೆವರೆಗೂ ಸರ್ವಾಧ್ಯಕ್ಷರ ಮೆರವಣಿಗೆ ಹಾಗೂ ವಿವಿಧ ಇಲಾಖೆಗಳಿಂದ ಸ್ತಂಬ್ದ ಚಿತ್ರ ನಾಡ ಭುವನೇಶ್ವರಿ ರಥದೊಂದಿಗೆ ತಹಶೀಲ್ದಾರ್ ಕಛೇರಿ ಮುಖಾಂತರ,ಅಂಬೇಡ್ಕರ್ ವೃತ್ತದ ಮೂಲಕ ಮಹಾತ್ಮಗಾಂಧಿ ವೃತ್ತದಿಂದ ಬಯಲು ರಂಗಮಂದಿರ ತಲುಪಲಿದೆ ..

ನಂತರ ಸಮ್ಮೇಳನದ ಉದ್ಘಾಟನೆಯನ್ನು ಅಧ್ಯಕ್ಷರು ಡಾ. ಪುರುಷೋತ್ತಮ ಬಿಳಿಮಲೆ ಕನ್ನಡ ಅಭಿವೃದ್ದಿ ಪ್ರಾಧಿಕಾರ .ಮಹಾಲಿಂಗ ವೇದಿಕೆಯನ್ನ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್,ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ವೇದಿಕೆ ಅಧ್ಯಕ್ಷತೆಯನ್ನ ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ ವಹಿಸಿಕೊಳ್ಳಲಿದ್ದಾರೆ. ಸಮ್ಮೇಳನದ ಅಧ್ಯಕ್ಷತೆ ಎ.ಬಿ ರಾಮಚಂದ್ರಪ್ಪ. ಹಾಗೂ ಜಿಲ್ಲಾ ಕ. ಸಾ ಪ ಅಧ್ಯಕ್ಷ ವಾಮದೇವಪ್ಪ.ಮಾಜಿ ಶಾಸಕರುಗಳಾದ ಟಿ.ಗುರುಸಿದ್ದನಗೌಡ್ರು. ಎಸ್ ವಿ ರಾಮಚಂದ್ರಪ್ಪ.ಹೆಚ್ ಪಿ ರಾಜೇಶ್. ಸೇರಿದಂತೆ ನಿಕಟಪೂರ್ವ ಸಮ್ಮೇಳನ ಅಧ್ಯಕ್ಷರು ಸಿ.ವಿ ಪಾಟೀಲ್. ವಿವಿಧ ಗಣ್ಯಮಾನ್ಯರು ಕಾರ್ಯಕ್ರಮದಲ್ಲಿ ಪಾಲ್ಗೋಳಲಿದ್ದಾರೆ. ವೇದಿಕೆಯಲ್ಲಿ ವಿವಿಧ ಕೃತಿಗಳು ಅನಾವರಣಗೊಳ್ಳಲಿವೆ .ಜಗಳೂರಿನ ಪ್ರಾತ್ಯನಿಧಿಕ ಕವನ ಸಂಕಲನ .ಹಾಗೂ . ಸುಜಾತಮ್ಮರವರ ಪಾರಿಜಾತ.ಕಿರು ಬೆಳಕಿನ ಸೂಜಿ ಗೀತಾ ಮಂಜು. ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ರಚಿಸಿರುವ ಬಯಲು ಸಿರಿ. ಅಂತರ್ಮುಖಿ ಸತ್ಯಭಾಮ. ಮಂಜುನಾಥ. ನೆನಪಿನ ಕುದರೆ. ಬಿ.ಕೆ ಕುಲಕರ್ಣಿ. ಕನಸಿನ ಕಡಲು ಶಾಂತಕುಮಾರ್. ಪಲ್ಲಾಗಟ್ಟೆ.ಗ್ರಾಮ ದೇವತೆಗಳು ರುದ್ರಮುನಿ ಹಿರೆಮಠ. ಲೋಕರ್ಪಣೆಗೋಳ್ಳಲಿವೆ.

ಒಟ್ಟು 5000 ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.ಶಾಸಕರ ಸಂಕಲ್ಪದಂತೆ ಕಾರ್ಯಕ್ರಮ ಯಶಸ್ವಿಗೊಳ್ಳಲಿದೆ ವಿವಿಧ ಚಿಂತಕರಿಂದ ಸಾಹಿತಿಗಳಿಂದ ವಿವಿಧ ಗೋಷ್ಠಿಗಳು ಜರುಗಲಿವೆ.

.ಸಮಾರೋಪ ಸಮಾರಂಭಕ್ಕೆ ಬರಗೂರು ರಾಮಚಂದ್ರಪ್ಪ ಅವರು ಭಾಗವಹಿಸಲಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ ಅವರು ತಿಳಿಸಿದರು.

ಶಾಸಕ ಬಿ.ದೇವೇಂದ್ರಪ್ಪ ಅವರು ಸಜ್ಜುಗೊಳ್ಳುತ್ತಿರುವ ವೇದಿಕೆಯನ್ನು ವೀಕ್ಷಣೆ ನಡೆಸಿದರು..

ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎ. ಎಲ್ ತಿಪ್ಪೇಸ್ವಾಮಿ,ಪ.ಪಂ ಸದಸ್ಯರಾದ ಶಕೀಲ್ ಅಹಮ್ಮದ್, ಕಾಂಗ್ರೇಸ್ ಎಸ್ ಸಿ. ಘಟಕದ ತಾಲ್ಲೂಕು ಅಧ್ಯಕ್ಷರಾದ
ಬಿ. ಮಹೇಶ್ವರಪ್ಪ,.ಮುಖಂಡ ವೆಂಕಟೇಶ್,ಕಾಟಪ್ಪ,ಮಾಜಿ ಮಂಜಣ್ಣ,ಕಾಂತರಾಜ್ ಗಿಡ್ಡನಕಟ್ಟೆ ,ಮಹಮ್ಮದ್ ಗೌಸ್,ಪ್ರಕಾಶ್ ರೆಡ್ಡಿ,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!