ಬುಡಕಟ್ಟು ಸಮುದಾಯದಲ್ಲಿ ವಿಶಿಷ್ಠ ಸಂಸ್ಕೃತಿ,ಹೊರಾಟದ ಬದುಕು ಅಡಗಿದೆ :ಡಾ.ಮಲ್ಲಿಕಾರ್ಜುನ್

ಜಗಳೂರು ಸುದ್ದಿ:ಬುಡಕಟ್ಟು ಸಮಯದಾಯಗಳಲ್ಲಿ ವಿಶಿಷ್ಠ ಸಂಸ್ಕೃತಿ,ಹೋರಾಟದ ಬದುಕು ಅಡಗಿರುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಸಾಹಿತಿ ಮಲ್ಲಿಕಾರ್ಜುನ್ ಕಲಮರಹಳ್ಳಿ ತಿಳಿಸಿದರು.

ಎರಡನೇ ದಿನದ 14 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಬುಡಕಟ್ಟು ಸಮುದಾಯಗಳ ಸಂಸ್ಕೃತಿ ವಿಷಯ ಕುರಿತು ಗೋಷ್ಠಿಯಲ್ಲಿ ಅವರು ವಿಷಯ ಮಂಡಿಸಿದ ಅವರು.

‘ರಾಜ್ಯದಲ್ಲಿ 60 ಬುಡಕಟ್ಟು ಸಮುದಾಯಗಳನ್ನುವಿದ್ವಾಂಸರು ಗುರುತಿಸಿದ್ದಾರೆ.ಅವರ ದೈವಗಳುಅಮೂರ್ತಸ್ವರೂಪವಾಗಿರುತ್ತದೆ.ಮರಗಿಡ,ಆಯುಧ,ಕೇಲು ಗಳಾಗಿರುತ್ತವೆ.ಮನುಕುಲದಲ್ಲಿ ಜನಿಸಿ ವಿಶಿಷ್ಠ ದೈವ ಸಿದ್ದಿಗಳನ್ನು ಗಳಿಸಿರುತ್ತಾರೆ.ಜನಪರವಾಗಿ ಹೊರಾಟ ನಡೆಸುತ್ತಾ ಮಡಿದು ವೀರಗಾರರಾಗಿದ್ದಾರೆ.ಮೈಮೇಲೆ ದೇವರುಗಳು ಬಂದು ಕುರುಹು ನೀಡುತ್ತಾರೆ.ಕಟ್ಟೆ,ಅಂಬೆ ಕೊಂಬೆಗಳಂತಹ ವಿಶಿಷ್ಠ ಸಂಸ್ಕೃತಿಗಳು ನೆಲೆಸಿರುತ್ತವೆ.ಬುಡಕಟ್ಟುಗಳಲ್ಲಿ ಮಾಂಗಲ್ಯಕ್ಕೆ ಮಹತ್ವವಿಲ್ಲ ಏಕತ್ವದ ಸೂತ್ರದಡಿಯಲ್ಲಿರದೆ ಬಹುತ್ವದ ಸಂಸ್ಕೃತಿ ಹೊಂದಿರುತ್ತವೆ.ಸಾಂಸ್ಕೃತಿಕ ಅನನ್ಯತೆಗಳನ್ನು ಮುಂದಿಟ್ಟುಕೊಂಡು ಏಕತ್ವದ ಒತ್ತಡ ಬಂದರೆ ಪ್ರತಿರೋಧಿಸುವ ಅನಿವಾರ್ಯತೆಯಿದೆ.ಎಂದು ಹೇಳಿದರು‌.

ಜೇನುಕುರುಬ,ಸೋಲಿಗ,ಕಾಡುಗೊಲ್ಲ,ಲಂಬಾಣಿ,ಮ್ಯಾಸಬುಡಕಟ್ಟು ಜನಾಂಗಗಳ ಬದುಕಿನ ಶೈಲಿ,ಉಡುಗೆ ತೊಡುಗೆ,ಸಮಾಜೋ,ಸಂಸ್ಕೃತಿ ಆಚರಣೆಗಳು ಸಾಮೂಹಿಕ ಕ್ರಿಯೆಗಳಾಗಿರುವುದನ್ನು.ಗರ್ಭಾವಸ್ಥೆಯಿಂದ ಜನನದಿಂದ ಮರಣದವರೆಗೆ ಅನುಸರಿಸುವ ಸಾಂಪ್ರಾದಾಯಿಕ ಕಲೆಗಳನ್ನು,ಆರಾಧ್ಯ ದೈವ,ಹಬ್ಬ ಹರಿದಿನಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ದಾವಣಗೆರೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯೆ ಡಾ.ಜಿ.ಕೆ.ಪ್ರೇಮಾ ವಿಷಯ ಮಂಡಿಸಿದ ಅವರು,’ಬುಡಕಟ್ಟು ಸಮುದಾಯಗಳ ಸಾಮಾಜಿಕ ಸ್ಥಿತಿಗತಿ, ಪರಂಪರೆಗಳನ್ನು ವರ್ತಮಾನಕ್ಕೆ ತುಲನೆಮಾಡಬೇಕಿದೆ.ಇತ್ತೀಚಿನ ಸಾಹಿತ್ಯ ಸಮ್ಮೇಳನಗಳಲ್ಲಿ ಬುಡಕಟ್ಟು ಸಮುದಾಯಗಳ ಧ್ವನಿಯಾಗುತ್ತಿರುವುದು ಶ್ಲಾಘನೀಯ.ಬುಡಕಟ್ಟು ಸಮುದಾಯಗಳ ಕುರಿತು ಅಧ್ಯಯನ ಮಾಡಿದ ವಿದ್ವಾಂಸರುಗಳು ವಿರಳಮಾತ್ರ.ಬುಡಕಟ್ಟು ಸಮುದಾಯಗಳ ಅಸ್ಮಿತೆಯನ್ನು ತೋರುವ ಅನಿವಾರ್ಯತೆಗಳಿವೆ.ಸಾಮಾಜಿಕ ಭದ್ರತೆಯಿಲ್ಲ.ಕೃಷಿ,ಹೈನುಗಾರಿಕೆ,ಕುರಿಗಾಹಿಗೆ ಅವಲಂಬಿಸಿರುವ ಬುಡಕಟ್ಟು ಸಮುದಾಯಗಳ 9ಸಾವಿರಕ್ಕೂ ಅಧಿಕ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ‌.ಸರ್ಕಾರಗಳು ಅಭಿವೃದ್ದಿ ನೆಪದಲ್ಲಿ ಬದುಕು ಅತಂತ್ರಗೊಳಿಸಿವೆ ಎಂದು ಹೇಳಿದರು.

ಸಾಹಿತಿ ಹನಗವಾಡಿ ರುದ್ರಪ್ಪ ಮಾತನಾಡಿ,ರಾಜಕಾರಣ ವ್ಯವಸ್ಥೆ ಕಲುಷಿತಗೊಂಡಿದೆ.ರೈತ,ಬುಡಕಟ್ಟು ಸಮುದಾಯಗಳ ಒಕ್ಕಲೆಬ್ಬಿಸುವ ಹುನ್ನಾರನಡೆಯುತ್ತಿದೆ.ಅಸೂಕ್ಷ್ಮ ಜನರ ಮಧ್ಯೆಯಲ್ಲಿ ಬುಡಕಟ್ಟು ಸಂಸ್ಕೃತಿ ಅಲಕ್ಷಿತಗೊಂಡಿವೆ.ಶೈಕ್ಷಣಿಕ,ಸಾಮಾಜಿಕ,ಆರ್ಥಿಕ ಅಭಿವೃದ್ದಿ ಪರ ಇಚ್ಛಾಶಕ್ತಿಯ ರಾಜಕಾರಣ ಅನಿವಾರ್ಯತೆಯಿದೆ ಎಂದರು.

ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಎ.ಬಿ.ರಾಮಚಂದ್ರಪ್ಪ, ಸಾಹಿತಿ ಹನಗವಾಡಿ ರುದ್ರಪ್ಪ ಅಧ್ಯಕ್ಷತೆ ವಹಿಸಿಕೊಂಡಿದ್ದರು.ಮೋತಿ ಪರಮೇಶ್ವರ್ ರಾವ್,ಅನಮೋಲ್ ವಿದ್ಯಾಸಂಸ್ಥೆ ಸಿಜಿ ದಿನೇಶ್,ಸಾಹಿತಿ ಎನ್.ಎಂ.ರವಿಕುಮಾರ್,ವಕೀಲ ಡಿ.ಶ್ರೀನಿವಾಸ್,ಗೌರವ ಉಪಸ್ಥಿತಿವಹಿಸಿದ್ದರು.ಡಿಎಸ್ ಎಸ್ ಸಂಚಾಲಕ ಸತೀಶ್ ಮಲೆಮಾಚಿಕೆರೆ ನಿರೂಪಿಸಿದರು.

ಸಾಮಾಜಿಕ ಕುಂದುಕೊರತೆಗಳಿಗೆ ಸ್ಪಂದಿಸುವ ಕವಿತೆಗಳು ಹೊರಹೊಮ್ಮಲಿ:ಸಾಹಿತಿ ಚಂದ್ರಶೇಖರ್ ತಾಳ್ಯ.

ಜಗಳೂರು ಸುದ್ದಿ:ಸಾಮಾಜಿಕ ಕುಂದುಕೊರತೆಗಳಿಗೆ ಸ್ಪಂದಿಸುವ ಜವಾಬ್ದಾರಿಯುತ ಕವಿತೆಗಳು ಕವಿಗಳದ್ದಾಗಬೇಕು ಎಂದು ಸಾಹಿತಿ ಚಂದ್ರಶೇಖರ್ ತಾಳ್ಯ ಹೇಳಿದರು.

ಎರಡನೇ ದಿನದ 14 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ ಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಲಿಂಗತಾರತಮ್ಯ,ಜಾತೀಯತೆ,ಕೋಮುವಾದ ಹರಡುವ ದೇಶದಲ್ಲಿ ಸಮುದಾಯ ದೃಷ್ಠಿಯಿಂದ ಕವಿತೆಗಳು ಹೆಚ್ಚು ಹೆಚ್ಚು ಹೊರಹೊಮ್ಮಬೇಕಿದೆ.ಕವಿಗಳು ಜಾಗರೂಕರಾಗಿ ಬರವಣಿಗೆ ಮೈಗೂಡಿಸಿಕೊಳ್ಳಬೇಕಿದೆ.ಜಾತಿವ್ಯವಸ್ಥೆ ಬಿಗಿಯಾಗಿದ್ದು ದೇಶದಲ್ಲಿ ಮರ್ಯಾದೆ ಹತ್ಯೆ,ಭ್ರೂಣ ಹತ್ಯೆಗಳು ನಡೆಯುತ್ತಿವೆ.ಪ್ರತಿಯೊಂದು ಮನಸ್ಸುಗಳು ವಿಕಾರಗೊಳ್ಳುತ್ತಿವೆ.ಅಪಾಯವನ್ನು ಎದುರಿಸುತ್ತಿದ್ದೇವೆ.ಮನೆಯ ಒಳಗಡೆಯೂ ಅನೇಕ ಭಿನ್ನತೆ ಅನುಭವಿಸುತ್ತಿದ್ದೇವೆ.ಹಂತಹಂತವಾಗಿ ಕುಟುಂಬದಲ್ಲಿ ಸರಿಪಡಿಸಿಕೊಳ್ಳಬೇಕಿದೆ.ಭಾಷೆ,ಶಿಕ್ಷಣ ದೃಷ್ಠಿಯಿಂದ ದೇಶದಲ್ಲಿನ ಬಿಕ್ಕಟ್ಟುಗಳು ಮೈತುಂಬ ಗಾಯಗಳಾಗಿ ಮಾರ್ಪಟ್ಟಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಇದೇ ವೇಳೆ 20 ಕ್ಕೂ ಅಧಿಕ ಕವಿ ಕವಯಿತ್ರಿಯರು ಸ್ವರಚಿತ ಕವಿತೆಗಳನ್ನು ವಾಚಿಸಿದರು.

ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಸಾಹಿತಿ ಎಬಿ.ರಾಮಚಂದ್ರಪ್ಪ,ಚುಟುಕು ಸಾಹಿತ್ಯದ ಜಿಲ್ಲಾಧ್ಯಕ್ಷ ರಾಜಶೇಖರ ಗುಂಡಗಟ್ಟಿ,ಕದಳಿ ಮಹಿಳಾ ವೇದಿಕೆ,ಸಿಡಿಪಿಓ ಮೇಲ್ವಿಚಾರಕಿ ಎಚ್.ವಿ.ಶಾಂತಮ್ಮ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!