filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 31;

ಜಗಳೂರಿನಲ್ಲಿ ಜರುಗಿದ ಜಲೋತ್ಸವ ಹಾಗೂ ಖ್ಯಾತ ಸರಿಗಮಪ ಗಾಯಕರಿಂದ ರಸಮಂಜರಿ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಜನಸಾಗರ.

ಜಗಳೂರು ಸುದ್ದಿ:

ಸಿರಿಗೆರೆ ಶ್ರೀಗಳ ಮಾರ್ಗದರ್ಶನದ ಸಂಕಲ್ಪದಂತೆ ದೂರದೃಷ್ಠಿ ಶಾಶ್ವತ ನೀರಾವರಿ ಯೋಜನೆ 57 ಕೆರೆ ತುಂಬಿಸುವ ಯೋಜನೆ ಸಾಕಾರಕ್ಕೆ ಕೈಜೋಡಿಸಿದ ಪ್ರತಿಯೊಂದು ಸರ್ಕಾರಗಳಿಗೂ ಅಬಿನಂದನೆಗಳು,ನನ್ನ ಆಡಳಿತಾವಧಿಯಲ್ಲಿ ಕೆರೆಗಳು ಕೋಡಿಬಿದ್ದ ಜಲ ಸಂಭ್ರಮಕ್ಕಾಗಿ ಜಲೋತ್ಸವಕ್ಕೆ ಸಾಕ್ಷಿಯಾದ ಕಾರ್ಯಕ್ರಮ ಅದ್ದೂರಿಯಾಗಿ ಜನಸಾಗರದ ಮದ್ಯೆ ಜರುಗಿದ ಜಲೋತ್ಸವ ಹಾಗೂ ರಸಮಂಜರಿ ಕಾರ್ಯಕ್ರಮ ನಡೆಯುತ್ತಿರುವುದು ಒಂದು ದಾಖಲೆಯಾಗಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಬಯಲು ರಂಗಮಂದಿರದಲ್ಲಿ ನಡೆದ ಜಲೋತ್ಸವ ಹಾಗೂ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

57 ಕೆರೆ ತುಂಬಿಸುವ ಯೋಜನೆ ಮೂರು ಜನ ಮುಖ್ಯಮಂತ್ರಿಗಳು,ಮೂರು ಜನ ಶಾಸಕರು,ಇಬ್ಬರು ಸಂಸದರನ್ನು ಕಂಡರೆ ಒಬ್ಬರೇ ಶ್ರೀಗಳ ಸಾರಥ್ಯದಲ್ಲಿ ಯಶಸ್ವಿಗೊಂಡು,ಅತಿವೃಷ್ಟಿಯಿಂದ ಪ್ರಸಕ್ತ ಸಾಲಿನಲ್ಲಿ ತಾಲೂಕಿನಾದ್ಯಂತ ಕೆರೆಗಳು ಮೈದುಂಬಿ ಹರಿಯುತ್ತಿರುವುದು ರೈತಾಪಿ ವರ್ಗದಲ್ಲಿ ನೀರಾವರಿ ಕನಸ್ಸು ನನಸಾಗಿಸಿದೆ.ನಾನು ತಾಲೂಕಿನ ಸಮಗ್ರ ನೀರಾವರಿಗೆ ಆಧ್ಯತೆ ನೀಡುವ ಮೂಲಕ ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತಗತಿಗೆ ಕ್ರಮವಹಿಸಲಾಗಿದ್ದು ಶೀಘ್ರದಲ್ಲಿ ಬರದನಾಡು ಹಸಿರುನಾಡಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬರದನಾಡಿನಲ್ಲಿ ಸಾಹಿತ್ಯ,ಸಂಸ್ಕೃತಿ,ಕಲೆಗೆ ಬರವಿಲ್ಲ.ಕ್ಷೇತ್ರದ ಜನತೆಯ ಭರವಸೆ ಹುಸಿಯಾಗದಂತೆ ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ ಜಲೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದ್ದು.ಖ್ಯಾತ ಗಾಯಕರಾದ ಅರ್ಜುನ್ ಜನ್ಯ,ಅನುರಾಧ ಭಟ್ ಅವರ ಗಾಯಕರ ತಂಡ ಇಂದು ಮನರಂಜಿಸಲಿದೆ ಎಂದು ಹೇಳಿದರು.

ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ ಮಾತನಾಡಿ,ಶಾಸಕ ಬಿ.ದೇವೇಂದ್ರಪ್ಪ ತಾಲೂಕಿನ ಜನರ ಧ್ವನಿಯಾಗಿ ಮೊದಲ ಅಧಿವೇಶನದಲ್ಲಿ ಕೆರೆ ತುಂಬಿಸುವ ಯೋಜನೆಗೆ ಧ್ವನಿಎತ್ತಿದರು.ರಾಜ್ಯದಲ್ಲಿಯೂ ಗ್ಯಾರಂಟಿ ಯೋಜನೆಗಳ ಮೂಲಕ ಸರ್ವತೋಮುಖ ಅಭಿವೃದ್ದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಜನಪರವಾಗಿ ಆಡಳಿತ ಸರಕಾರ ಶ್ರಮಿಸುತ್ತಿದೆ ಎಂದು ತಿಳಿಸಿದರು.

ಜಿ.ಪಂ ಮಾಜಿ ಸದಸ್ಯ ಕೆ.ಪಿ ಪಾಲಯ್ಯ ಮಾತನಾಡಿ,ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಕ್ಷೇತ್ರದ 57 ಕೆರೆ ತುಂಬಿಸುವ ಯೋಜನೆಗೆ ₹650 ಕೋಟಿ ಅನುದಾನ ನೀಡುವ ಮೂಲಕ ಸಿರಿಗೆರೆ ಶ್ರೀಗಳಿಗೆ ಗೌರವ ಸಲ್ಲಿಸಿ ವಿಶ್ವಾಸ ಉಳಿಸಿಕೊಂಡಿದ್ದಾರೆ.ರಾಜ್ಯದಲ್ಲಿ ಅಭಿವೃದ್ದಿ ಕೆಲಸಗಳ ಜೊತೆಗೆ ಒಂದೇ ತಾಲೂಕಿಗೆ ಅನುದಾನ ಕಲ್ಪಿಸಿದ ಅವರ ಕೊಡುಗೆ ಅಪಾರವಿದೆ.ತಾಲೂಕಿನಲ್ಲಿ ನೀರಾವರಿ ಮೂಲಗಳಿಲ್ಲದೆ ಕೃಷಿ,ಉದ್ಯೋಗ,ಅಭಿವೃದ್ದಿಗೆ
ಪೂರಕವಾಗಲಿದೆ ಎಂದರು.
ಇದೇ ವೇಳೆ ಸರಿಗಮಪ ಖ್ಯಾತ ಗಾಯಕರಾದ ಅರ್ಜುನ್ ಜನ್ಯ,ಅನುರಾಧ ಭಟ್,ಕಂಬದ ರಂಗಯ್ಯ,ಸುಹಾನ,ದಿವ್ಯ ರಾಮಚಂದ್ರ,ಅವರ ತಂಡ ರಸಮಂಜರಿ ಕಾರ್ಯಕ್ರಮ ಪ್ರೇಕ್ಷಕರ ಮನರಂಜಿಸಿತು.

ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್,ಸಾಹಿತಿ ಎನ್ ಟಿ ಎರ್ರಿಸ್ವಾಮಿ,ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಮಾರಪ್ಪ,ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಎಲ್ ತಿಪ್ಪೇಸ್ವಾಮಿ,ತಹಶೀಲ್ದಾರ್ ಸೈಯದ್ ಕಲೀಂಉಲ್ಲಾ,ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್,ಸುರೇಶ್ ಗೌಡ್ರು,ಪಲ್ಲಾಗಟ್ಟೆ ಶೇಖರಪ್ಪ,ಮಹೇಶ್ವರಪ್ಪ ಬಿ.ಗೌಸ್ ಅಹಮ್ಮದ್,ಸೇರಿದಂತೆ ಜನಸ್ತೋಮವೇ ಸೇರಿತ್ತು.

Leave a Reply

Your email address will not be published. Required fields are marked *

You missed

error: Content is protected !!