ಸಡಗರದಿಂದ ಜರುಗಿದ ಕಣ್ವಕುಪ್ಪೆ ಗವಿಮಠ ರಥೋತ್ಸವ

ಜಗಳೂರು ಸುದ್ದಿ:ತಾಲೂಕಿನ ಕಣ್ವಕುಪ್ಪೆ ಗವಿಮಠದಲ್ಲಿ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಧನುರ್ಮಾಸ ಚತುರ್ಥಿಯಂದು ಷ.ಬ್ರ.ಶ್ರೀ ನಾಲ್ವಡಿ ಶಾಂತಲಿಂಗ ಮಹಾಸ್ವಾಮಿ ಅದ್ದೂರಿಯಾಗಿ ಸಡಗರದಿಂದ ರಥೋತ್ಸವ ಜರುಗಿತು.

ರಥೋತ್ಸವಕ್ಕೆ ಬಾಳೆಹಣ್ಣು,ಉತ್ತತ್ತಿ ಸಮರ್ಪಿಸಿ ಸಾವಿರಾರು ಭಕ್ತ ಸಮೂಹ ಭಕ್ತಿಗೆ ಪಾತ್ರರಾದರು.
ಬೆಳಿಗ್ಗೆ ಯಿಂದ ಧಾರ್ಮಿಕ ಕೈಂಕರ್ಯಗಳು ಜರುಗಿದವು.

ಭಕ್ತಾದಿಗಳಿಗೆ ಪ್ರಸಾದ:ರಥೋತ್ಸವಕ್ಕೆ ಆಗಮಿಸಿದ್ದ ಭಕ್ತ ಸಮೂಹಕ್ಕೆ ರೊಟ್ಟಿ,ಪಲ್ಯ,ಪಾಯಸ,ಅನ್ನ ಸಾಂಬಾರ್ ಪ್ರಸಾದ ವಿತರಿಸಲಾಗಿತ್ತು.ವಿವಿಧ ತಾಲೂಕು,ಜಿಲ್ಲೆಗಳಿಂದ ಭಕ್ತರು ಆಗಮಿಸಿ ಮಠದ ಭಕ್ತಿಗೆ ಪಾತ್ರರಾದರು.ಪೋಲೀಸ್ ಬಿಗಿಬಂದೋಬಸ್ತ್ ನಿಂದ ರಥ ಎಳೆಯಲಾಯಿತು.ವಿವಿಧ ಕೌಂಟರ್ ಗಳಲ್ಲಿ ಸ್ವಯಂ ಸೇವಕರು ಪ್ರಸಾದ ವ್ಯವಸ್ಥೆ ನಿರ್ವಹಿಸಿದರು.

ನಾಲ್ವಡಿ ಶಾಂತಲಿಂಗ ಸ್ವಾಮೀಜಿ ಆಶೀರ್ವಾಚನ ನೀಡಿದ ಅವರು,ತಂದೆ ತಾಯಿಗಳು ಮೊದಲ ಗುರುಗಳು,ತಾಯಿ ರಕ್ತಸವೆಸಿ ಎದೆಹಾಲುಣಿಸಿ ಮಕ್ಕಳಿಗೆ ಜನ್ಮ,ಲಾಲನೆ ಪಾಲನೆ ನೀಡುವ ತಾಯಿ ನಿಜವಾದ ಗುರು,ಪ್ರತಿ ವರ್ಷ ಮಕರ ಸಂಕ್ರಮಣದ ದಿನದ ವಿಶೇಷವಾಗಿ ಭಕ್ತ ಸಮೂಹ ರಥೋತ್ಸವ ಹಾಗೂ ಧಾರ್ಮಿಕ ಕೈಂಕರ್ಯದಲ್ಲಿ ಭಾಗವಹಿಸುತ್ತಿರುವುದು ಸ್ವಾಗತರ್ಹ,ನಾನು ಪೀಠಾಧ್ಯಕ್ಷತೆ ವಹಿಸಿದ ನಂತರ ಕಳೆದ 2ದಶಕಗಳಿಂದ ಭಕ್ತರು ವರ್ಷದಿಂದ ವರ್ಷಕ್ಕೆ ಅಧಿಕ ಸಂಖ್ಯೆಯಲ್ಲಿ ಕ್ರಮೇಣ ಏರಿಕೆ ಯಾಗುತ್ತಿದೆಎಂದು ತಿಳಿಸಿದರು.

ಸಂದರ್ಭದಲ್ಲಿ ತಾಲೂಕಿನ ಗಣ್ಯರು ಭಕ್ತಸಮೂಹ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!