filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 34;

ನಮ್ಮ ಘನ ಸರ್ಕಾರ ಭೂ ಸುರಕ್ಷಾ ಯೋಜನೆ ಡಿಜಿಟಲೀಕರಣ ವ್ಯವಸ್ಥೆ ಜಾರಿಗೆ ತಂದಿರುವುದು ಶ್ಲಾಘನೀಯ ಶಾಸಕ ಬಿ.ದೇವೇಂದ್ರಪ್ಪ

ಜಗಳೂರು ಪಟ್ಟಣದಲ್ಲಿ ನೂತನವಾಗಿ ಭೂ ಸುರಕ್ಷಾ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು ಭೂ ದಾಖಲೆಗಳ ಡಿಜಿಟಲೀಕರಣದ ಮಾಡಲು ನಮ್ಮ ಘನ ಸರ್ಕಾರ ನೂತನವಾಗಿ ಜಾರಿಗೋಳಿಸಿರುವ ಭೂ ಸುರಕ್ಷಾ ಯೋಜನೆ ಉತ್ತಮವಾಗಿದೆ.ಇದರ ಉದ್ದೇಶ ಹಳೆಯ ದಾಖಲೆಗಳನ್ನು ರಕ್ಷಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ. , ಈ ಯೋಜನೆಯಿಂದ ನಕಲಿ ಭೂ ದಾಖಲೆಗಳು ಸೃಷ್ಟಿಯಾಗುವುದನ್ನು ತಪ್ಪಿಸುವುದು ಕೂಡ ಈ ಯೋಜನೆಯ ಮೂಲ ಹಿಂದಿನ ಉದ್ದೇಶವಾಗಿದೆ.


ಜಗಳೂರು ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ಶಾಸಕ ಬಿ.ದೇವೇಂದ್ರಪ್ಪರವರಿಂದ ಚಾಲನೆ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ರಾಜ್ಯದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಈ ಯೋಜನೆಗೆ ಚಾಲನೆ ನೀಡಿದ್ದು
ಹಳೆಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಯೋಜನೆ ಯಶಸ್ವಿಯಾಗಲಿದೆ ಗ್ರಾಮೀಣ ಬಾಗದ ಬಡ ರೈತರು ದಾಖಲೆಗಾಗಿ ಇಲಾಖೆಗೆ ಅಲೆದಾಡುವುದನ್ನ ತಪ್ಪಿಸಿದಂತಾಗಲಿದೆ. ಅಂದರೆ, ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಹಳೆಯ ಭೂದಾಖಲೆಗಳನ್ನು ಈ ಮೂಲಕ ಡಿಜಿಟಲೀಕರಣ ಮಾಡಿ ರಕ್ಷಿಸಲಾಗುತ್ತದೆ.

ಈ ಸಂದರ್ಭದಲ್ಲಿ ತಹಶೀಲ್ದಾರ್ ಸೈಯದ್ ಖಲೀಂ ಉಲಾ ಮಾತನಾಡಿದರು ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನ ನೀಡುತ್ತಿದ್ದು ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು, ಸಿಬ್ಬಂದಿಗಳಿಗೆ ತರಬೇತಿಯನ್ನೂ ಸಹ ನೀಡಲಾಗುವುದು . ಹಳೆ ಫೈಲ್‌ಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ತಹಶೀಲ್ದಾರ್ ಕಚೇರಿ, ಸರ್ವೆ ಕಚೇರಿ ಮತ್ತು ಉಪನೋಂದಣಿ ಕಚೇರಿಗಳಲ್ಲಿರುವ ಹಳೆಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತದೆ ಎಂದರು

ಆಸ್ತಿ ದಾಖಲೆಗಳನ್ನು ಪಡೆಯಲು ನಾಗರಿಕರು ಎದುರಿಸುತ್ತಿರುವ ಸವಾಲುಗಳನ್ನು ಬಗೆಹರಿಸಲು ಈ ಯೋಜನೆ ಸಹಕಾರಿಯಾಗಿದೆ. .

ದಾಖಲೆಗಳು ಡಿಜಿಟಲ್‌ ರೂಪದಲ್ಲಿದ್ದರೆ ಅವುಗಳ ಆಯಸ್ಸು ಹೆಚ್ಚು. ಕಾಗದ ರೂಪದಲ್ಲಿರುವ ಭೂ ದಾಖಲೆಗಳಿಗೆ ಹಾನಿಯಾಗುವ ಅಪಾಯ ಹೆಚ್ಚಿರುತ್ತದೆ.
ತಕ್ಷಣ ಬೇಕು ಎನಿಸಿದಾಗ ಹುಡುಕುವುದು ಸುಲಭ. ಯಾವುದೇ ಸ್ಥಳದಲ್ಲಿದ್ದುಕೊಂಡು ದಾಖಲೆಗಳನ್ನು ಪರಿಶೀಲಿಸಬಹುದು. ಆಯಾ ತಾಲೂಕು ಕಚೇರಿಗಳಿಗೆ ಎಡತಾಕಬೇಕಾಗಿಲ್ಲ
ಸಾರ್ವನಿಕರಿಗೆ ಸುಲಭವಾಗಿ ಲಭಿಸುತ್ತದೆ. ಕಾನೂನು ವ್ಯಾಜ್ಯ ಮತ್ತು ಆರ್‌ಟಿಐ ಮನವಿಗಳನ್ನು ಕಡಿಮೆ ಮಾಡುತ್ತದೆ.
ದಾಖಲೆಗಳನ್ನು ಯಾರೂ ಕೂಡ ತಿದ್ದುಪಡಿ ಮಾಡದಂತೆ ಅಥವಾ ಬದಲಾಯಿಸದಂತೆ ನೋಡಿಕೊಳ್ಳುತ್ತದೆ. ಭೂ ದಾಖಲೆಗಳ ಪೋರ್ಜರಿ ಮಾಡುವ ಅಪಾಯ ಕಡಿಮೆಯಾಗುತ್ತದೆ. ದಾಖಲೆಗಳ ಸುರಕ್ಷತೆ ಹೆಚ್ಚುತ್ತದೆ.
ದಾಖಲೆಗಳಿಗಾಗಿ ತಾಲೂಕು ಕಚೇರಿಗಳಿಗೆ ಜನರು ಬರುವುದು ತಪ್ಪುತ್ತದೆ. ಇದರಿಂದ ಜನರಿಗೆ ಪ್ರಯಾಣದ ಹಣ ಮತ್ತು ಸಮಯದ ಉಳಿತಾಯವಾಗುತ್ತದೆ.
ಭವಿಷ್ಯದಲ್ಲಿ ಇನ್ನಿತರ ವಿಭಾಗಗಳಲ್ಲಿನ ಡಿಜಿಟಲೀಕರಣಕ್ಕೂ ಈ ಯೋಜನೆಯ ಅನುಭವ ನೆರವಿಗೆ ಬರುತ್ತದೆ.
ಪ್ರಕೃತಿ ವಿಕೋಪದ ಸಂದರ್ಭದಲ್ಲಿ ದಾಖಲೆಗಳ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.ಈ ಸಂದರ್ಭದಲ್ಲಿ ಉಪಾ ತಹಶೀಲ್ದಾರ್ ಮಜಾನಂದ. ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ ಆಹಾರ ಸರಾಬರಾಜು ಇಲಾಖೆ ಶಿರಾಸ್ತೆದಾರ ಅಜ್ಜಪ್ಪ ಪತ್ರೆ ಸೇರಿದಂತೆ ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!