ದಿನಾಂಕ 14.02.2025 ರಂದು ಜಗಳೂರು ತಾಲೂಕಿನ ಹನುಮಂತಪುರ ಕ್ಲಸ್ಟರ್ ನ, ಎಫ್ಎಲ್ ಎನ್ ಕಲಿಕಾ ಹಬ್ಬದ ಕಾರ್ಯಕ್ರಮವನ್ನು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜಗಳೂರು ಗೊಲ್ಲರಹಟ್ಟಿ ಶಾಲೆಯಲ್ಲಿ ಆಯೋಜನೆ ಮಾಡಲಾಗಿತ್ತು.
ಈ ಒಂದು ಕಲಿಕಾ ಕಾರ್ಯಕ್ರಮದಲ್ಲಿ ಪಿಎಂಸಿ ಸರ್ಕಾರಿ ಉನ್ನತಿ ಕಲಿಸಿದ ಹಿರಿಯ ಪ್ರಾಥಮಿಕ ಶಾಲೆ ತಮಲೆಹಳ್ಳಿ ಮಕ್ಕಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ರಸಪ್ರಶ್ನೆ ಸ್ಪರ್ಧೆಗೆ ಹೆಚ್ಚು ಶಾಲೆಗಳು ಭಾಗವಹಿಸಿದ ನಿಮಿತ್ತ, ಎಲ್ಲಾ ಶಾಲೆಗಳಿಗೆ ಮೊದಲು ಲಿಖಿತ ಪರೀಕ್ಷೆಯನ್ನು ನೀಡಲಾಗಿತ್ತು.. ಲಿಖಿತ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಆರು ಶಾಲೆಗಳನ್ನು ಕ್ವಿಜ್ ಗೆ ಆಯ್ಕೆ ಮಾಡಿಕೊಳ್ಳಲಾಯಿತು. ಶಾಲೆಯ ಮಕ್ಕಳು 15 ಕ್ಕೆ 15 ಅಂಕಗಳನ್ನು ಪಡೆದು , ಕ್ವಿಜ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆದ ನಂತರ ನಡೆದ ಕ್ವಿಜ್ ಕಾರ್ಯಕ್ರಮದ ಫಲಿತಾಂಶದಲ್ಲಿ ತೆರ್ಗಡೆಯಾಗಿದ್ದಾರೆ ಎಂದು ಶಿಕ್ಷಕ ಲೋಕೆಶ್ ತಿಳುಸಿದ್ದಾರೆ.