ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿದರೆ ಉಗ್ರ ಹೋರಾಟಕ್ಕಿಳಿಯುತ್ತವೆ ಎಂದು ಜಿಲ್ಲಾ ಬೀದಿ ಬದಿ ಮತ್ತು ವ್ಯಾಪಾರಿಗಳ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಒತ್ತಾಯಿಸಿದರು.
ಸುದ್ದಿ:ಜಗಳೂರು
ಜಗಳೂರು ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಿಗಳು ಜಿಲ್ಲಾ ಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮೆರವಣಿಗೆ ಮೂಲಕ ತಹಶೀಲ್ದಾರ್ ಕಛೇರಿವರೆಗೂ ತೆರಳಿ ತಹಶೀಲ್ದಾರ್ ಸೈಯದ್ ಖಲೀಂ ಉಲಾ ರವರಿಗೆ ಮನವಿ ಸಲ್ಲಿಸಿ ವ್ಯಾಪಾರಿಗಳನ್ನ ಒಕ್ಕಲೇಬ್ಬಿಸದೆ ಸೂಕ್ತ ಸ್ಥಳ ಕಲ್ಲಿಸಿ ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಮಾತನಾಡಿ ಬೀದಿ ಬದಿ ವ್ಯಾಪಾರಿಗಳು ಸಂಕಷ್ಟದ ಸುಳಿಯಲ್ಲಿ ಬದುಕುತ್ತಿದ್ದಾರೆ .ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಬಾರದು ನಾವು ಕೂಡ ಸರ್ಕಾರಕ್ಕೆ ಜಕಾತಿ ಮೂಲಕ ತೆರಿಗೆ ಕಟ್ಟುತ್ತೆವೆ. ನಾವು ಕಟ್ಟುವ ಜಕಾತಿಗೆ ರಶೀದಿ ನೀಡಬೇಕು. ನಮಗೆ ಪಟ್ಟಣ ಪಂಚಾಯಿತಿ ವತಿಯಿಂದ ಮೂಲ ಸೌಲಭ್ಯಗಳನ್ನು ಕಲ್ಪಿಸಿ ನೆರಳು. ಕುಡಿಯುವ ನೀರು . ಶೌಚಾಲಯ ಒದಗಿಸಿ. ಸ್ಮಾರ್ಟ ಕಾರ್ಡ ಕೋಡಿ ಎಂದು ಒತ್ತಾಯಿಸಿದರು..
ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಘದ ತಾಲ್ಲೂಕು ಅಧ್ಯಕ್ಷೆ ಹಾಗೂ ಪಪಂ ಸದಸ್ಯೆ ಮಂಜಮ್ಮ ಮಾತನಾಡಿ ಹೋರಾಟ ನಮ್ಮ ಹಕ್ಕು ನಾವು ಸೋಮಾರಿಗಳಲ್ಲ ದುಡಿಮೆ ಮಾಡಲು ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದೆವೆ ಆದರೆ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ನಮ್ಮನ್ಬ ಒಕ್ಕಲೇಬ್ಬಿಸಿ ನಮ್ಮ ಜೀವನದ ಮೇಲೆ ಆಟಡುವುದು ಎಷ್ಟು ಸರಿ ನಮಗೆ ರಕ್ಷಣೆ ಬೇಕು ಸೌಲಭ್ಯಗಳನ್ನ ಒದಗಿಸಿ ನಮ್ಮ ಬೇಡಿಕೆಗಳನ್ನು ಹಿಡೇರಿಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಭಾರತಿ. ಮಂಜುಳ. ಕೃಷ್ಣಪ್ಪ.ತಿಪ್ಪಕ್ಕ. ಎರ್ರಿಸ್ವಾಮಿ.ತಿಪ್ಪೇಸ್ವಾಮಿ. ಸೇರಿದಂತೆ ಮುಂತಾದವರು ಹಾಜುರಿದ್ದರು.