filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.22777778, 0.5989583);sceneMode: 32768;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 50;

ಕ್ಷೇತ್ರ ಅಭಿವೃದ್ದಿಯೇ ನನ್ನ ಗುರಿ ಸುಖ‌ ಸುಮ್ಮನೆ ತೇಜೊವಧೆ ಮಾಡಿದರೆ ಸಹಿಸುವುದಿಲ್ಲ‌ ಚರ್ಚೆಗೆ ಬನ್ನಿ ಅಭಿವೃದ್ದಿಗೆ ಸಹಕರಿಸಿ ಮಾಜಿ ಶಾಸಕರುಗಳಿಗೆ ಹಾಲಿ ಶಾಸಕ ಬಿ ದೇವೇಂದ್ರಪ್ಪ ಸವಾಲ್
ಸುದ್ದಿ ಜಗಳೂರು
ಜಗಳೂರು ಪಟ್ಟಣದ ಮುಖ್ಯ ರಸ್ತೆ ಆಗಲಿಕರಣ ಕಾಮಗಾರಿಗೆ ಚಾಲನೆ ಸೇರಿದಂತೆ 4.90 ಕೋಟಿ ರೂಗಳಲ್ಲಿ ಉದ್ಗಟ ರಸ್ತೆ ಸೇತುವೆ ನಿರ್ಮಾಣ 20.98 ಕೋಟಿ ರೂಗಳಲ್ಲಿ ಹೌಸಿಂಗ್ ಬೋರ್ಡ ನಿವೇಶನ ಅಭಿವೃದ್ದಿ 20 ಕೋಟಿ ರೂಗಳಲ್ಲಿ ಜಗಳೂರು ಪಟ್ಟಣದ ಮುಖ್ಯ ರಸ್ತೆ ಆಗಲಿಕರಣ ಕಾಮಗಾರಿಗಳಿಗೆ ಅಧಿಕೃತವಾಗಿ ಚಾಲನೆ ನೀಡಿ ಮಹಾತ್ಮಗಾಂಧಿ ಬಸ್ ನಿಲ್ದಾಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಶಾಸಕರು ಮಾತನಾಡಿದರು

ತೇಜೋವಧೆ ಮಾಡಿದರೆ ಸಹಿಸುವುದಿಲ್ಲ ಮಾಜಿ ಶಾಸಕರುಗಳು ಚರ್ಚೆಗೆ ಬನ್ನಿ
ನಾನು ಕೇವಲ ಎರಡು ವರ್ಷಗಳಲ್ಲಿ ಕೆಲ ಗುರುತರವಾದ ಕಾಮಗಾರಿಗಳಿಗೆ ಚಾಲನೆ ನೀಡಿ ಕ್ಷೇತ್ರ ಅಭಿವೃದ್ದಿಗೆ ಕಂಕಣಬದ್ದರಾಗಿದ್ದೆವೆ . ಈಗಾಗಲೇ ಕ್ಷೇತ್ರಕ್ಕೆ ಅನೇಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಜಿನಿಗಿ ಹಳ್ಳಕ್ಕೆ 6 ಕೋಟಿ ರೂ ಬಿಡ್ಜ್ ಕಂ ಬ್ಯಾರೇಜ್. ಚಿಕ್ಕಮ್ಮನಹಟ್ಡಿ ಗ್ರಾಮದಲ್ಲಿ 6 ಕೋ .ಗಳ ಕೆರೆ ನಿರ್ಮಾಣ 6 ಕೋ ಗಳ ಜಗಳೂರು ಪಟ್ಟಣದ ಅಲ್ಪಸಂಖ್ಯಾತ ಕಾಲೂನಿಯಲ್ಲಿ ರಸ್ತೆ ಅಭಿವೃದ್ದಿ. ಪಟ್ಟಣದ ಹೃದಯ ಬಾಗದಲ್ಲಿ ಸುಸ್ಸಜ್ಜಿತವಾದ ಗ್ರಂಥಾಲಯ ನಿರ್ಮಿಸಲಾಗಿದೆ.

ಟೀಕಾರರಿಗೆ ನನ್ನ ಅಭಿವೃದ್ದಿ‌ ಕೆಲಸಗಳೆ ಸಾಕ್ಷಿ ಇದೀಗ ಪಟ್ಟಣದ ಪ್ರಮುಖವಾಗಿ 20 ಕೋಟಿ ರೂ ಪಟ್ಟಣದ ರಸ್ತೆ ಆಗಲಿಕರಣ ಹಾಗೂ 4.90 ರೂ ಉದ್ಗಟ ರಸ್ತೆ ಸೇತುವೆ ನಿರ್ಮಾಣ .20.90 ರೂ ಹೌಸಿಂಗ್ ಬೋರ್ಡ್ ನಿವೇಶನ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಯೆ ನನ್ನ ಗುರಿ ಎಂದರು . ಈ ಹಿಂದೆ ಸುಖ ಸುಮ್ಮನೆ ನನ್ನ ಮೇಲೆ ಮಾಜಿ ಶಾಸಕರುಗಳಾದ ಎಸ್ ವಿ ರಾಮಚಂದ್ರಪ್ಪ. ಹೆಚ್ ಪಿ ರಾಜೇಶ್ ರವರು ನನ್ನ ಆಡಳಿತದ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿ ಕೆಣಕಿರುವುದರ ಹಿಂದಿನ ಷಡ್ಯಂತ್ರವೇನು ? ವಾಟ್ ಇಜ್ ಮಿನೀಂಗ್ ಅಪ್ ಜಗಳೂರು ರಿಪಬ್ಲಿಕ್ ಬಳ್ಳಾರಿ ರೆಡ್ಡಿ ಬ್ರದರ್ಸ್ ನನಗೆ ಇದುವರೆಗೂ ಪರಿಚಯವಿಲ್ಲ ಯಾರಿಗೆ ಯಾರು ಸ್ನೇಹಿತರು ಎಂದು ಅವರೆ ಆತ್ಮವಲೋಕನ ಮಾಡಿಕೊಳ್ಳಲಿ

ನಾನು ನನ್ನ ನೇತೃತ್ವದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ ಹಾಗೂ ಜಲೋತ್ಸವ ಕಾರ್ಯಕ್ರಮದಲ್ಲಿ ನಾಡಿನ ನಮ್ಮ ಬಯಲು ನಾಡಿನ ಇತಿಹಾಸ ಪರಂಪರೆ ಬಿತ್ತಿಚಿತ್ರದ ಮೂಲಕ ಜನರಿಗೆ ತಿಳಿಸಲಾಗಿದೆ ಆದರೆ ಬಿಟ್ಟಿ ಪ್ರಚಾರ ಎಂದು ಪತ್ರಿಕಾ ಹೇಳಿಕೆ ನೀಡಿದ ನಿಮಗೆ ಜನರೆ ಉತ್ತಮ ಕಾರ್ಯಕ್ರಮದ ಮೂಲಕ ಉತ್ತರ ನೀಡಿದ್ದಾರೆ ಕ್ಷೇತ್ರದಲ್ಲಿ ಸಂಚಾರಿಸಿದ ಕನ್ನಡ ರಥವೇ ಸಾಕ್ಷಿಯಾಗಿದೆ ಎಂದು ಟೀಕಾರರಿಗೆ ಪ್ರತ್ಯತ್ತರ ನೀಡಿದರು. ಆರೋಗ್ಯ ಸಚಿವ ದಿನೇಶ್ ಗುಂಡರಾವ್ ಸಹಕಾರದಿಂದ ಬಜೆಟ್ ನಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಜಗಳೂರು ಕ್ಷೇತ್ರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ನಿರ್ಮಿಸಲು 50 ಕೋಟಿ ವಿಶೇಷ ಅನುದಾನ ಕಲ್ಪಿಸಿದ್ದಾರೆ .ಪ್ರಸ್ತುತದಲ್ಲಿ‌ ಅಪ್ಪರ್ ಭದ್ರಾ ಕಾಮಗಾರಿ ಮುಂದುವರೆಸಲು 2000 ಕೋಟಿ ರೂಗಳಲ್ಲು ಕಾಮಗಾರಿಗೆ ಚುರುಕು ಮುಟ್ಟಿಸಲು ಮುಂದಾಗಿರುವ ನಮ್ಮ ಸರ್ಕಾರ ಜನರ ಆಶೋತ್ತರಗಳಿಗೆ ಸ್ವಂದಿಸಿ ಕೆಲಸ ಮಾಡುವ ಜನ ನಾಯಕ ಸಿದ್ದರಾಮಯ್ಯ ಈ ರಾಜ್ಯದಲ್ಲಿ 16 ನೆ ಬಜೆಟ್ ಮಂಡಿಸಿ ಸಾಕ್ಷಿಯಾಗಿದ್ದಾರೆ ಎಂದು ವಿಸ್ವಾಸ ವ್ಯಕ್ತಪಡಿಸಿದರು.

ಬ್ರಾಹ್ಮಣ ನಿಗಮ ಮಂಡಳಿ ಅದ್ಯಕ್ಷ ಅಸಗೋಡು ಜಯಸಿಂಹ ಮಾತನಾಡಿದರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರ ಬದುಕು ಅಸನಾಗಿಸುವುದೆ ಮುಖ್ಯಂತ್ರಿ ಸಿದ್ದರಾಮಯ್ಯನವರ ಬಜೆಟ್ ಮಂಡನೆ
ಸರ್ವಾಜನಾಂಗದ ಅಭಿವೃದ್ದಿ ಬಜೆಟ್ ಮಂಡನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಾರ್ಥಕ ಬಜೆಟ್ ಘೋಷಣೆ ಮಾಡಿದ್ದಾರೆ ಜಗಳೂರಿಗೆ ಬಜೆಟ್ ನಲ್ಲಿ ಜಗಳೂರು ಸಮಯದಾಯ ಆರೋಗ್ಯ ಕೇಂದ್ರ ಅಭಿವೃದ್ದಿಗೆ ಅನುದಾನ ಕಲ್ಪಿಸಿರುವುದು ಶ್ಲಾಘನೀಯ ಎಂದರು . ಈ ಸಂದರ್ಭದಲ್ಲಿ ಎಸ್ ಟಿ.ಘಟಕದ ರಾಜ್ಯ ಮುಖಂಡ ಕೆ.ಪಿ. ಪಾಲಯ್ಯ ಮಾತನಾಡಿ ನಗರದ ವರ್ತಕರು ಪಟ್ಟಣದ ರಸ್ತೆ ಆಗಲಿಕರಣ ಮಾಡಲು ಸಹಕರಿಸಬೇಕೆಂದರು. 40 ವರ್ಷಗಳಿಂದ ರಸ್ತೆ ಆಗಲಿಕರಣ ಬೇಡಿಕೆಯಿತ್ತು .ರಾಜ್ಯ ಸರ್ಕಾರ 20 ಕೊಟಿ ರೂ ಅನುದಾನ ನೀಡಿ‌ದೆ ಜನರ ಸಹಕಾರ ಅತ್ಯಗತ್ಯ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಷಂಷೀರ್ ಆಹಮದ್‌ .ಮಾಜಿ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಪಿ ಎಸ್ ಸುರೇಶ್ ಗೌಡ್ರು .ಮುಖಂಡ ಸಣ್ಣಸೂರಜ್ಜ. ಕಾಂಗ್ರೇಸ್ ಎಸ್ ಟಿ‌ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎ, ಡಿ ಕೀರ್ತೀಕುಮಾರ್. ಮಾಜಿ ಪಪಂ ಅಧ್ಯಕ್ಷ ಆರ್ ತಿಪ್ಪೇಸ್ವಾಮಿ. ಪಪಂ ಅಧ್ಯಕ್ಷರು ನವೀನಕುಮಾರ್. ಹೌಸಿಂಗ್ ಬೊರ್ಡ್ ಎಇಇ ಸುನಿಲ್ ಕುಮಾರ್.ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್. ಲೋಕೋಪಯೋಗಿ ಇಲಾಖೆ‌ ಕಾರ್ಯಪಾಲಕ ಅಭಿಯಂತರರಾದ ನಾಗರಾಜ್ .ವಕೀಲರ ಸಂಘದ ಅದ್ಯಕ್ಷ ಮರೆನಹಳ್ಳಿ ಬಸವರಾಜ್.ಮುಖಂಡ ಮಹೇಶ್ವರಪ್ಪ .. ಪಪಂ ಸದಸ್ಯರು ರೇವಣ್ಣ. ಮಂಜಕ್ಕ. ಆದರ್ಶರೆಡ್ಡಿ. ಪಾಪಲಿಂಗಪ್ಪ. ಮಂಜಕ್ಕ.ಲಲಿತಮ್ಮ. ಮಂಜುನಾಥ. ನಾಮನಿರ್ದೇಶನ ಸದಸ್ಯರಾದ ಕುರಿಜಯಣ್ಣ.ಶಾಂತಪ್ಪ ಸಣ್ಣತಾನಜಿಗೊಸಾಯಿ ಸೇರಿದಂತೆ ಮುಂತಾದವರು ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!