ಸುದ್ದಿ ಜಗಳೂರು
ಅನೇಕ ಧರ್ಮಗಳ ಅವನತಿಯ ಮಧ್ಯೆ ವೀರಶೈವ ಜೀವಂತ:ಉಜ್ಜಿನಿ ಶ್ರೀ ಆಶೀರ್ವಚನ
ಜಗಳೂರು ಮಾ.12:ಜಗತ್ತಿನಲ್ಲಿ ಅನೇಕ ಧರ್ಮಗಳು ಜನ್ಮತಾಳಿ,ಅವನತಿಹೊಂದಿವೆ ಆದರೆ ವೀರಶೈವ ಇಂದಿಗೂ
ಜೀವಂತ ಎಂದು ಎಂದು ಉಜ್ಜಿಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.
ಬುಧವಾರ ಪಟ್ಟಣದ ವೀರಶೈವಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಆದಿಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತ್ಯೋತ್ಸವ ಹಾಗೂ ಪಂಚಾಚಾರ್ಯ ಯುಗಮಾನೋತ್ಸವ ಕಾರ್ಯಕ್ರಮ ಹಾಗೂ ಧರ್ಮಸಭೆಯಲ್ಲಿ ದಿವ್ಯಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ಇತ್ತೀಚೆಗೆ ಆಯಾ ಸಮುದಾಯಗಳ ಉದ್ದಾರಕ್ಕಾಗಿ,ರಾಜಕೀಯ ಲಾಭಕ್ಕಾಗಿ ಮಠಮಾನ್ಯಗಳು ಸೃಷ್ಠಿಯಾಗಿವೆ.ಆದರೆ ಪೂರ್ವಜರ ಕಾಲಘಟ್ಟದಿಂದಲೂ ಒಬ್ಬ ಜಂಗಮರ ಹಿರೇಮಠಗಳನ್ನು ಹೊಂದಿದ್ದು.ಗುರುಶಿಷ್ಯರ ಪರಂಪರೆಗಳಿದ್ದವು.ಹಳ್ಳಿಗಳಲ್ಲಿ ಸರ್ವ ಜನಾಂಗದ ಸಾಮರಸ್ಯತೆ ಕಾಪಾಡುತ್ತಿದ್ದವು.ರಾಮಾಯಣ ನಡೆದ ತ್ರೇತಾಯುಗದಲ್ಲಿಯೇ ಅನೇಕ ಸಮಾಜಗಳಿಗೆ ಲಿಂಗಧಾರಣೆಗೊಳಿಸಿದ ಜಗದ್ಗುರು ರೇಣುಕಾಚಾರ್ಯರ ಸಾಮಾಜಿಕ ಕ್ರಾಂತಿಯ ಸಾಧನೆಗಳು ಇಂದಿಗೂ ಉಲ್ಲೇಖವಾಗಿವೆ ಎಂದರು.
ಪ್ರಸವ ಪೂರ್ವದಲ್ಲಿ 8 ನೇ ತಿಂಗಳ ಗರ್ಭಾವಸ್ಥೆ ತಾಯಿಗೆ ತಾಯಿಗೆ ಮಠಮಾನ್ಯಗಳಲ್ಲಿ ಯೋಗ್ಯ ಗುರುಗಳಿಂದ ಲಿಂಗಧಾರಣೆಗೊಳಿಸಿದರೆ ಜನ್ಮತಾಳಿದ ನಂತರ ಮಗುವು ಸಂಸ್ಕಾರಯುತವಾಗಿ ಬೆಳೆದು ಯೋಗ್ಯ ವಾಗಿರುತ್ತದೆ.ಎಂದಿಗೂ ದಾರಿತಪ್ಪುವುದಿಲ್ಲ ಎಂಬುದು ಹಾಗೂ ಗಂಡಿನಷ್ಟೇ ಮಹಿಳೆಗೆ ಸಮಾನ ಹಕ್ಕುಗಳನ್ನು ಪ್ರತಿಪಾದಿಸಿರುವುದು ವೀರಶೈವ ಪರಂಪರೆಯಾಗಿದೆ
ದೇಶದಲ್ಲಿ ಧರ್ಮ ಆಚರಣಾತ್ಮಕವಾಗಿರಬೇಕು.ಸರ್ವರೂ ಸತ್ಯವನ್ನು ನುಡಿಯಬೇಕು.ಜಾತಿಯಿಂದ ವೀರಶೈವರಾಗದೆ ಬಸವಣ್ಣನ ತತ್ವಾದರ್ಶಗಳ ಆಚರಣೆಯಿಂದ ವೀರಶೈವರಾಗಬೇಕು ಎಂದು ಕವಿಮಾತು ಹೇಳಿದರು.
ಗಡಿಗ್ರಾಮ ಉಜ್ಜಿನಿ ಸದ್ದರ್ಮ ಪೀಠಕ್ಕೂ ಜಗಳೂರಿನ ಅಧಿಕ ಸಂಖ್ಯೆಯ ಭಕ್ತಸಮೂಹಕ್ಕೂ ಅವಿನಾಭಾವ ನಂಟಿದೆ.ಅದರಲ್ಲೂ ನಾಯಕ ಸಮುದಾಯದವರು ಪೀಠದ ಮುಂಚೂಣಿ ಸೈನಿಕರಿದ್ದಂತೆ.ಜಗಳೂರಿನಲ್ಲಿ ಮುಂಬರುವ ದಿನಗಳಲ್ಲಿ ಜಾತ್ಯಾತೀತ,ಲಿಂಗಾತೀತ,ವಯಸ್ಸಿನ ಅಂತರವಿಲ್ಲದೆ ಬಿಡುವಿನ ವೇಳೆ ಸಂಸ್ಕಾರ ಶಿಬಿರಗಳನ್ನು ಏರ್ಪಡಿಸಿದರೆ
ನಾವೂ ಭಾಗವಹಿಸುತ್ತೇವೆ ಎಂದು ಸಲಹೆ ನೀಡಿದರು.
ಅಖಿಲ ಭಾರತ ವೀರಶೈವಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ರೆಡ್ಡಿ ಮಾತನಾಡಿ,
ಸರ್ಕಾರದ ಆದೇಶದಂತೆ 5 ನೇ ವರ್ಷದ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಆಚರಿಸಲಾಗುತ್ತಿದೆ.ರಾಜ್ಯದಲ್ಲಿ ವೀರಶೈವ ಸಮುದಾಯದವರು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕು. ಉಪಜಾತಿಗಳ ಬೀಜ ಭಿತ್ತಬಾರದು ಗಳಿಸಿದ ಜ್ಞಾನದಿಂದ ಸಮಾಜಕ್ಕೆ ಒಳಿತುಬಯಸಿ ಮುಖ್ಯವಾಹಿನಿಗೆ ಬರಬೇಕಿದೆ ಎಂದುಕರೆನೀಡಿದರು.
ಉಜ್ಜಿನಿ ಸದ್ದರ್ಮ ಪೀಠ ಜತ್ಯಾತೀತವಾಗಿದೆ.ಉಜ್ಜಿನಿ ಶಿಖರಕ್ಕೆ ತೈಲ ಎರೆಯಲು ಕೂಡ್ಲಿಗಿ ತಾಲೂಕಿನ ಜರ್ಮಲಿ ಗ್ರಾಮದ ಪಾಳೇಗಾರರು ಎಣ್ಣೆ ತರುವ ಸಂಪ್ರದಾಯ ಇಂದಿಗೂ ಜೀವಂತವಾಗಿದೆ.ರಾಜ್ಯದಲ್ಲಿ ಜಂಗಮ ಸಮುದಾಯದಲ್ಲಿ ಹಲವು ಶಾಸಕರುಗಳು ಆಯ್ಕೆಯಾಗಿ ರಾಜಕೀಯ ಸ್ಥಾನಮಾನ ಗಳಿಸಿರುವುದು ಹೆಮ್ಮೆಯ ಸಂಗತಿ,ತಾಲೂಕಿನಲ್ಲಿ ಸಹೋದರ ಸಮುದಾಯಗಳೊಂದಿಗೆ ಅನ್ಯೂನ್ಯತೆಯಿಂದ ಗುರುಸೇವೆಯನ್ನೇ ಅವಲಂಬಿಸಿದ ಜಂಗಮ ಸಮಾಜದವರ ಬಡತನ ನಿರ್ಮೂಲನೆ,ಸಾಮಾಜಿಕ ಸಮಾನತೆಗೆ ಆಡಳಿತ ಸರಕಾರಗಳು ಕಾಳಜಿವಹಿಸಬೇಕು.
—–ಎಚ್.ಪಿ.ರಾಜೇಶ್ ಮಾಜಿ ಶಾಸಕ ಜಗಳೂರು,
ಪಂಚಾಚಾರ್ಯರ ಆಶಯದಂತೆ ಜಗತ್ತಿನಲ್ಲಿ ಜಂಗಮರು ಜಾತಿರಹಿತವಾಗಿ ಲೋಕಕಲ್ಯಾಣದ ಭಾವನೆ,ಶಾಂತಿ ಸಾಮರಸ್ಯತೆ,ಜೀವಸಂಕುಲದ ಉದ್ದಾರ ಬಯಸಿದವರು,ಇತ್ತೀಚೆಗೆ ಕಣ್ಮರೆಯಾಗುತ್ತಿರುವ ಧಾರ್ಮಿಕ ಆಚರಣೆಯ ಅಸ್ಮಿತೆ ಉಳಿಸಿಕೊಂಡರೆ ಆರೋಗ್ಯಕರ ಬೆಳವಣಿಗೆಗೆ ಪೂರಕವಾಗುತ್ತದೆ.
—– ಎನ್.ಎಂ.ಲೋಕೇಶ್,
ರೇಣುಕಾಚಾರ್ಯ ಜಯಂತಿ ಸ್ವಾಗತ ಸಮಿತಿ ಅಧ್ಯಕ್ಷ
ಇದೇ ವೇಳೆ ಡಯಟ್ ನ ಹಿರಿಯ ಉಪನ್ಯಾಸಕ ಜಿ.ಎಂ.ದ್ವಾರುಕೇಶ್ ಉಪನ್ಯಾಸನೀಡಿದರು.ಜಿ.ಪಂ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ,ಅಖಿಲಭಾರತ ವೀರಶೈವ ಮಹಾಸಭಾ ರಾಜ್ಯಕಾರ್ಯದರ್ಶಿ ಶಶಿಕಲಾಮೂರ್ತಿ, ಮಾತನಾಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ತಾಲ್ಲೂಕು ಕಛೇರಿಯಿಂದ ಆರಂಭವಾದ ಸಾರೋಟಿನಲ್ಲಿ ರೇಣುಕಾಚಾರ್ಯರ ಭಾವಚಿತ್ರದೊಂದಿಗೆ ನಂದಿಕೋಲು,ವಾದ್ಯವೃಂದ,ವೀರಗಾಸೆ ಕುಣಿತ,ಡೊಳ್ಳು ಕುಣಿತ ಸೇರಿದಂತೆ ಪುರವಂತರು ಕಲಾತಂಡಗಳೊಂದಿಗೆ ಅಂಬೇಡ್ಕರ್ ವೃತ್ತದ ಬಳಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆಗೊಳಿಸಿ ನಂತರ ಮಹಾತ್ಮಗಾಂಧಿ ವೃತ್ತ,ಭುವನೇಶ್ವರಿ ವೃತ್ತ,ಹೊರಕೆರೆ,ಸರ್ಕಾರಿ ಆಸ್ಪತ್ರೆ ರಸ್ತೆ ಮೂಲಕ ಅದ್ದೂರಿ ಮೆರವಣಿಗೆ ವೇದಿಕೆಗೆ ಸಾಗಿತು.
ಸಂದರ್ಭದಲ್ಲಿ ಮುಸ್ಟೂರು ಮಠದ ಹುಚ್ಚನಾಗಲಿಂಗಸ್ವಾಮೀಜಿ,ಪ.ಪಂ ಅಧ್ಯಕ್ಷ ನವೀನ್ ಕುಮಾರ್,ಪದಾಧಿಕಾರಿಗಳಾದ ಹಾಲಮೂರ್ತಿ,ಪಂಚಾಕ್ಷರಯ್ಯ,ನಂಜುಂಡಸ್ವಾಮಿ,ಪತ್ರಕರ್ತಕೆ.ಎಂಜಗದೀಶ್,ಬಸವರಾಜಯ್ಯ,ಕರಿಬಸಯ್ಯ,ರವಿ,ರುದ್ರಯ್ಯ,ಬೇಡ ಜಂಗಮ ಸಮಾಜದ ತಾಲ್ಲೂಕು ಅಧ್ಯಕ್ಷ ಶಿವಕುಮಾರಯ್ಯ,ಆರೈಕೆ ಆಸ್ಪತ್ರೆಯ ಡಾ.ರವಿಕುಮಾರ್,ಸಿಂಡಿಕೇಟ್ ಸದಸ್ಯ ಪ್ರಶಾಂತ್ ದುಗ್ಗವಟಿಮಠ್,ಸಿದ್ದಗಂಗಾ ಆಕಾಡೆಮಿಯ ಎ.ಎಂ.ಮರುಳಾರಾಧ್ಯ,ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಅಕ್ಕಭಾರತಿ,ನಿವೃತ್ತ ಪ್ರಾಂಶುಪಾಲ ಮಲ್ಲಿಕಾರ್ಜುನ್,ಸೇರಿದಂತೆ ಭಾಗವಹಿಸಿದ್ದರು.