ಸುದ್ದಿ ಜಗಳೂರು
ಶುಕ್ರದೆಸೆ ನ್ಯೂಸ್ ಮೀಡಿಯಾ ಹಾಗೂ ಜನಶಕ್ತಿ ಸಾಂಸ್ಕೃತಿಕ ವೇದಿಕೆ ( ರಿ) ಮತ್ತು ಬಯಲು ಸಿರಿ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ ಸಂಯುಕ್ತಾಶ್ರದಲ್ಲಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ಕವಿಗಳಿಂದ ಮಹಿಳಾ ಸಾಧಕರ ಕುರಿತು ದಾಖಲೆ ಬರಹ ಹಾಗೂ ಪಿ ಎಚ್ ಬಸವರಾಜ ರಚಿಸಿರು ಸಿರಿ ಸಂಪಿಗೆ ಕೃತಿ ಲೋಕರ್ಪಣೆ ಮತ್ತು ಕನ್ನಡಮ್ಮ ಬರುವಳು ದ್ವನಿ ಸುರುಳಿ ಮತ್ತು ಸಾಹಿತಿ ಪತ್ರಕರ್ತ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ರಚಿಸಿರುವ ಜಗಳೂರು ಜಗದಗಲ ಎನ್ನುವ ದ್ವನಿಸುರುಳಿ ಶುಕ್ರದೆಸೆ ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭದ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪರವರು ಉದ್ಗಾಟನೆ ನುಡಿಗಳನ್ನಾಡಿದರು
ಪ್ರಸ್ತುತ ತಂತ್ರಜ್ಘಾನ ಯುಗದಲ್ಲೂ ಸಹ ಸಾಹಿತ್ಯದ ಒಲವು ಸ್ವಾಸ್ಥ್ಯ ಸಮಾಜವನ್ನ ನಿರ್ಣಮಾಣ ಮಾಡಲು ಅತ್ಯಂತ ಸಹಕಾರಿಯಾಗಿದೆ ಕನ್ನಡ ವಚನ ಚಳುವಳಿಯಲ್ಲಿ ಬಸವಣ್ಣರಂತ ಅನೇಕ ಮಹಾನೀಯರು ಸಮನತೆಗಾಗಿ ಹೋರಾಟ ನಡೆಸಿ ಅನೇಕ ಬದಲಾವಣೆ ಮಾಡುವ ಮೂಲಕ ಸ್ವಾಸ್ಥ್ಯ ಸಮಾಜವನ್ನ ಕಟ್ಟಲು ಶ್ರಮಿಸಿದ್ದಾರೆ .ಅಂದಿನಿಂದ ಕನ್ನಡ ನಾಡು ನುಡಿ ಅತ್ಯಂತ ಸಂಪತ್ಭರಿತ ನಾಡಿನಲ್ಲಿ ಅನೇಕ ಕವಿಗಳು ದಾರ್ಶಣಿಕರು ತನ್ನದೆಯಾದ ಛಾಪು ಮೂಡಿಸಿ ಸಾಹಿತ್ಯ ಲೋಕಕ್ಕೆ ತನ್ನದೆಯಾದ ಕೊಡುಗೆ ಆಪಾರ ಆ ನಿಟ್ಡಿನಲ್ಲಿ ಬಯಲು ಸಿರಿ ಸಾಹಿತ್ಯ ವೇದಿಕೆ ಜಾತಿ ಮೀರಿದ ಬೇದವಿಲ್ಲದ ಸಂಘಟನೆಗಳು ಸಾಹಿತ್ಯ ಆಸಕ್ತರಿಗೆ ಸೂಕ್ತ ವೇದಿಕೆಯಾಗಿ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು ಪಿ ಎಚ್ ಬಸವರಾಜರವರು ತನ್ನ ಬಿಡುವಿನ ವೇಳೆಯಲ್ಲಿ ಕವನ ಬರೆಯುವ ಮೂಲಕ ಇಂದು ಶುಕ್ರದೆಸೆ ಪತ್ರಿಕೆ ಸಂಪಾದಕ ಎಂ ರಾಜಪ್ಪ ವ್ಯಾಸಗೊಂಡನಹಳ್ಳಿರವರ ಸ್ನೇಹ ಸಂಬಂಧದಿಂದ ವಿನೂತನ ಕಾರ್ಯಕ್ರಮ ರೂಪಿಸಿ ನಾಡಿನ ಕವಿಗಳ ಬೆಸುಗೆ ಕಾರ್ಯಕ್ರಮ ಸಾರ್ಥಕ ಎಂದರು .
ಹಿರಿಯ ಸಾಹಿತಿ ಎನ್ ಟಿ ಎರ್ರಿಸ್ವಾಮಿ ಮಾತನಾಡಿ ಕಾವ್ಯ ಹಟ್ಟುವುದು ನೋವಿನ ಒಡಲಲ್ಲಿ ಯಾರು ನೋವುಂಡು ಬೆಳೆದಿರುತ್ತಾರೊ ಅವರಲ್ಲಿ ಸಾಹಿತ್ಯಸಕ್ತಿ ಬೆಳೆದು ಸರ್ವೆಸಾಮಾನ್ಯವಾಗಿ ಹುಟ್ಟುವುದು ಶ್ರೀಯುತ ಬಸವರಾಜ ಮತ್ತು ವ್ಯಾಸಗೊಂಡನಹಳ್ಳಿ ರಾಜಪ್ಪ ಕ್ರೀಯಶೀಲ ವ್ಯಕ್ತಿತ್ವದಿಂದ ಇಂತ ಕಾರ್ಯಗಳು ಸಾಹಿತ್ಯಭಿರುಚಿ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಎಲ್ ತಿಪ್ಪೇಸ್ವಾಮಿ ಮಾತನಾಡಿ ಜಗಳೂರು ಬಯಲಾದರು ಸಾಹಿತ್ಯಕ್ಕೆ ಬರವಿಲ್ಲ ಇತ್ತಿಚಿನ ದಿನಗಳಲ್ಲಿ ಯುವ ಕವಿಗಳು ಕಾವ್ಯ ಕಟ್ಟುವಲ್ಲಿ ಉತ್ಸಹಕರಾಗಿದ್ದಾರೆ ಇಂತ ವೇದಿಕೆಗಳು ಸ್ಪೂರ್ತಿಯಾಗಲಿವೆ ಪತ್ರಕರ್ತ ಎಂ.ರಾಜಪ್ಪನವರು ಕವಿಯಾಗಿ ಸಂಘಟನೆಕಾರರಾಗಿ .ಪತ್ರಿಕಾ ವೃತಿ ಜೊತೆಗೆ ಸಾಹಿತ್ಯ ಸೇವೆ ಅನನ್ಯ ಎಂದರು.
ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಹಾಗೂ ಜ್ಘಾನ ತರಂಗೀಣಿ ವಿಧ್ಯಾ ಸಂಸ್ಥೆ ಸ್ಥಾಪಕ ಪಿ ಎಸ್ ಅರವಿಂದನ್ ಮಾತನಾಡಿದರು ಪ್ರಸ್ತುತ ವಿದ್ಯಾಮಾನದ ಒತ್ತಡದ ಜಗತ್ತಿನಲ್ಲಿ ಜೀವಿಸುವಂತ ನಾವುಗಳಿಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಅವಶ್ಯ .ಇಂತ ಕಾರ್ಯಕ್ರಮಕ್ಕೆ ನಮ್ಮ ಬೆಂಬಲ ಸದಾಯಿದೆ ಎಂದರು.
ಶುಕ್ರದೆಸೆ ನ್ಯೂಸ್ ಮೀಡಿಯಾ ಸಂಪಾದಕ ಹಾಗೂ ಬಯಲು ಸಿರಿ ಸಾಹಿತ್ಯ ವೇದಿಕೆ ಸಂಸ್ಥಾಪಕ ಅದ್ಯಕ್ಷ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ ಜಗಳೂರು ಜಗದಗಲ ಮೆರೆದ ಊರು ಇಲ್ಲಿ ಅನೇಕ ಪ್ರಾತ ಸ್ಮರಣೀಯರು ಹುಟ್ಟಿ ಆಳಿದ ನಾಡಿನಲ್ಲಿ ಜೀವಿಸುತ್ತಿರುವುದು ನಾವೇ ದನ್ಯರು ಇಲ್ಲಿ ಅನೇಕ ಪ್ರತಿಭೆಗಳು ಇಂತ ವೆದಿಕೆಯಲ್ಲಿ ತನ್ನ ಅಭಿವ್ಯಕ್ತಿಗೋಳಿಸುವ ಮೂಲಕ ಅವರ ಕಲೆಗೆ ಪ್ರೋತ್ಸಹಿಸಲು ಕ್ಷೇತ್ರದ ಶಾಸಕರು ಸಾಹಿತ್ಯಭಿರುಚಿಗಳಾಗಿ ಪ್ರೇರಣ ಶಕ್ತಿಯಾಗಿದ್ದಾರೆ. ಸ್ನೇಹಿತ ಬಸವರಾಜ ಕಷ್ಟಸಂಕೋಲೆಗಳ ಮದ್ಯ ಬೆಳೆದು ಬಂದು ತನ್ನ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಒಲವು ಶ್ಲಾಘನೀಯ.
ವಿವಿಧ ಸಾದಕರು ಸಹ ಇಲ್ಲಿ ಆಗಮಿಸಿ ಸಾಧನಾ ಸಿರಿ ಪ್ರಶಸ್ತಿಗೆ ಪಡೆದು ಮತ್ತೂಷ್ಟು ಸಾರ್ಥಕ ಕೆಲಸ ಮಾಡಲು ಒಂದು ಸ್ಪೂರ್ತಿಯಾಗಲಿದೆ.ಇದೇ ಸಂದರ್ಭದಲ್ಲಿ . ಅನೇಕ ಕವಿಗಳು ನಾನಾ ಜಿಲ್ಲಾ ಕೆಂದ್ರಗಳಿಂದ ಆಗಮಿಸಿ ಕವಿ ದಾಖಲೆ ಬರಹದಲ್ಲಿ ಪಾಲ್ಗೋಂಡಿದ್ದರು.

ಈ ಸಂದರ್ಭದಲ್ಲಿ ಕಾಂಗ್ರೇಸ್ ಎಸ್ ಸಿ ಘಟಕದ ಅಧ್ಯಕ್ಷ ಬಿ.ಮಹೇಶ್ವರಪ್ಪ.ದಲಿತ ಮುಖಂಡ ಜಿ ಎಚ್ ಶಂಭುಲಿಂಗಪ್ಪ. ಕಸಾಪ ಅಧ್ಯಕ್ಷೆ ಸುಜಾತಮ್ಮ ರಾಜು. ವಕೀಲರಾದ ಆರ್ ಒಬಳೇಶ್ .ಐ.ಸಿ ಐ.ಸಿ ಐ.ಸಿ.ಐ ಲೊಂಬಾರ್ಡ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಜಿ ಎಸ್ ಬಸವರಾಜ. ಕಾರ್ಗಿಲ್ ಯೋದ ಚನ್ನಪ ಬಳಗಾರ ..ಪ್ರಗತಿಪರ ಮುಖಂಡ ಆರ್ ಸತ್ಯಮೂರ್ತಿ ಗೌರಿಪುರ .ವಕೀಲರಾದ ಷಣ್ಮೂಕಪ್ಪ. ಜನಪದ ಗಾಯಕಿ ರಾಜ್ಯ ಪ್ರಶಸ್ತಿ ಪುರಸ್ಕೃತೆ ಕಾಟಮ್ಮ..ಜನಪದ ಗಾಯಕಿ ಬೀಮಜ್ಜಿ. ಪ್ರಜಾ ಕಲ್ಯಾಣ ಸಮಿತಿ ಜಿಲ್ಲಾದ್ಯಕ್ಷೆ ಚೌಡಮ್ಮ.ಸರ್ಕಾರಿ ನೌಕರರ ಸಂಘದ ನಿರ್ದೇಶಕ ಸತೀಶ್.. ಸಿರಿ ಸಂಪಿಗೆ ಕೃತಿಕಾರ ಪಿ ಎಚ್ ಬಸವರಾಜ. ಬಯಲು ಸಿರಿ ವೇದಿಕೆ ಶಾಂತಕುಮಾರ. ನಿರೂಪಕಿ ಲಕ್ಷ್ಮೀ .ಇಂದ್ರಮ್ಮ ಶಿಕ್ಷಕರು ಸಾಹಿತಿಗಳು ಚೈತ್ರಾ ಸೇರಿದಂತೆ ಅನೇಕ ಕವಿಗಳು ಹಾಜರಿದ್ದರು.
