1997ರಲ್ಲಿ ಮುಂಬೈನ ರಮಾಬಾಯಿ ಕಾಲೋನಿಯಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಜಾತಿವಾದಿಗಳು ಒಡೆದು ಹಾಕಿದ್ದರು. ಅದರ ವಿರುದ್ಧ ಅಲ್ಲಿನ ದಲಿತರು ರಸ್ತೆ ತಡೆ ನಡೆಸಿದರು. ಅವರನ್ನು ತೆರವು ಮಾಡುವ ನೆಪದಲ್ಲಿ ಅಂದಿನ ಬಿಜೆಪಿ ನೇತೃತ್ವದ ಸರ್ಕಾರ ಗೋಲಿಬಾರ್ ಮಾಡಿ 10ಕ್ಕೂ ಹೆಚ್ಚು ದಲಿತರನ್ನು ಕೊಂದು ಹಾಕಿತ್ತು. ಇದರಿಂದ ಕೆರಳಿದ ಇಡೀ ರಮಾಬಾಯಿ ನಗರದ ದಲಿತರು ಕ್ರಾಂತಿಗೆ ಇಳಿದಿದ್ದರು. ಹೆದರಿದ ಸರ್ಕಾರ ಏನು ಮಾಡುವುದು ಎಂದು ತಿಳಿಯದೆ ಇದ್ದಾಗ ಇಂದಿನ ಕೇಂದ್ರ ಮಂತ್ರಿ ಅಥಾವಳೆ ಸರ್ಕಾರವನ್ನು ಮೆಚ್ಚಿಸಲು ಮುಂದಾದ. ದಲಿತರು ನನ್ನ ಮಾತು ಕೇಳುತ್ತಾರೆ ಎಂದು ಬಿಲ್ಡಪ್ ಕೊಟ್ಟು ಎಲ್ಲಕ್ಕೂ ಸಿದ್ಧವಾಗಿ ನಿಂತಿದ್ದ ದಲಿತರ ಬಳಿ ಹೋಗುತ್ತಾನೆ. ಸರ್ಕಾರದ ಪ್ರೀತಿನಿಧಿಯಾಗಿ ಬಂದು ಸರ್ಕಾರ ಹಣ ಕೊಡುತ್ತೆ, ಅದು ಕೊಡುತ್ತೆ, ಇದು ಕೊಡುತ್ತೆ ಎಂದು ಹೇಳುತ್ತಾನೆ. ರೊಚ್ಚಿಗೆದ್ದ ದಲಿತರು ಅವರ ಮುಖ ಮೂತಿ ನೋಡದೆ ಚಚ್ಚಲು ಶುರು ಮಾಡುತ್ತಾರೆ. ದಲಿತರ ದ್ರೋಹಿ ನೀನು, ಸರ್ಕಾರದ ಪರ ಬಂದಿದ್ದೀಯ ಎಂದು ಕೈ ಕಾಲು ಮುರಿಯುತ್ತಾರೆ. ಕಿರುಚಾಡುತ್ತಿದ್ದ ಅಥಾವಳೆಯನ್ನು ಪೊಲೀಸರು ಹೇಗೋ ಕಾಪಾಡುತ್ತಾರೆ.
ಇದನ್ನು ಈಗ ಏಕೆ ಹೇಳಿದೆ ಎಂದರೆ, ಕೆಲವರು ಬಿಜೆಪಿ ಕಂಕುಳ ಕೂಸುಗಳಾಗಿ ಅಸ್ಪೃಶ್ಯ ಸಮುದಾಯಗಳನ್ನೇ ಸೀಳುತ್ತಿದ್ದಾರೆ. ಅವರಿಗೆ ಈ ಘಟನೆ ನೆನಪಿಸುವ ಅವಶ್ಯಕತೆ ಇದೆ, ಅದಕ್ಕೆ ಹೇಳಿದೆ.